ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ತಮ್ಮ 76ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಅವರು ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೆ ನೇಮಕವಾಗಿದ್ದಾರೆ.
ಕಳೆದ 50 ವರ್ಷಗಳಿಂದ ಅತೀ ಹೆಚ್ಚು ಪಾರಂಪರಿಕ, ಸಾಂಸ್ಕೃತಿಕ ವಸ್ತುಗಳ ಸಂಗ್ರಹದ ಜತೆಗೆ 7500 ತಾಳೆ ಗರಿ ಹಸ್ತಪ್ರತಿ, 21,000 ಕಲಾ ಪ್ರಕಾರ, 25,000 ಅತೀ ಹಳೇಯ ಮತ್ತು ಅಪರೂಪದ ಪುಸ್ತಕಗಳು, 100 ವಿಂಟೇಜ್ ವಾಹನಗಳ ಸಂಗ್ರಹ ಮಂಜೂಷ ಸಂಗ್ರಹಾಲಯದಲ್ಲಿರುವ ಅಪರೂಪದ ವಸ್ತುಗಳನ್ನು ಪರಿಗಣಿಸಿ ನ.25 ರಂದು ಹುಟ್ಟುಹಬ್ಬದ ದಿನದಂದು ಈ ಪ್ರಶಸ್ತಿಯನ್ನು ಹಸ್ತಾಂತರಿಸಲಾಗಿದೆ.