ನಟ ಧ್ರುವಾ ಸರ್ಜಾ ದಂಪತಿಗಳಿಗೆ ಕೊರೋನಾ ಸೋಂಕು ದೃಢ

ಬೆಂಗಳೂರು: ಇತ್ತೀಚಿಗೆ ನಿಧನರಾದ ಸ್ಯಾಂಡಲ್ ವುಡ್ ನಟ ಚಿರಂಜೀವಿ ಸರ್ಜಾರ ತಮ್ಮ ಧ್ರುವಾ ಸರ್ಜಾಗೆ ಕೊರೋನಾ ಪಾಸಿಟಿವ್ ವರದಿಯಾಗಿದೆ. ಧ್ರುವಾರ ಪತ್ನಿ ಪ್ರೇರಣಾಗೂ ಕೂಡ ಕೊರೋನಾ ಪಾಸಿಟಿವ್ ಆಗಿದೆ ಎಂದು ಧ್ರುವ ಸರ್ಜಾ ಟ್ವೀಟರ್ ನಲ್ಲಿ ಬರೆದುಕೊಂಡಿದ್ದಾರೆ.

ಅಣ್ಣನ ಸಾವಿನಿಂದ ನೊಂದಿದ್ದ ಧ್ರುವಾ ಸರ್ಜಾ ಮಾನಸಿಕವಾಗಿ ಕುಗ್ಗಿದ್ದರು. ಇತ್ತೀಚೆಗೆ ಖಿನ್ನತೆಗೆ ಒಳಗಾಗಿದ್ದ ಧ್ರುವಾ ಸರ್ಜಾ ಆಸ್ಪತ್ರೆಗೆ ದಾಖಲಾಗಿದ್ದರು.
ಪ್ರಾಥಮಿಕ ಸಂಪರ್ಕದಲ್ಲಿರುವವರಿಗೆ ಮನವಿ!
ಧ್ರುವಾ ಸರ್ಜಾ ತನಗೆ ಕೊರೊನಾ ಪಾಸಿಟಿವ್ ಆದ ಬೆನ್ನಲ್ಲೇ ತನ್ನ ಜೊತೆಗೆ ಸಂಪರ್ಕದಲ್ಲಿದ್ದವರು ಕ್ವಾರಂಟೈನ್ ಆಗಿ ಎಂದು ಮನವಿ ಮಾಡಿದ್ದಾರೆ.

READ ALSO