ಆನೆ ದಂತ ಮಾರಾಟ ಮಾಡುತ್ತಿದ್ದವರ ಬಂಧನ

ಮೈಸೂರು: ಮೈಸೂರಿನ ಬನ್ನಿಮಂಪಟದ ಕೆಳಸೇತುವೆ ಬಳಿ ಆನೆದಂತಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಅರಣ್ಯಾಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ.

ಅರಣ್ಯ ಸಂಚಾರ ದಳದ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ 25 ಕೆ.ಜಿ ತೂಕದ ಆನೆದಂತಗಳನ್ನು ವಶಪಡಿಸಿಕೊಂಡಿದ್ದಾರೆ.

READ ALSO

ತಿರುವನಂತಪುರದ ಪ್ರೆಸ್ಟಿನ್ ಸೆಲ್ವ, ಜಯಪ್ರಕಾಶ್‌, ಇಲ್ಲಿನ ಉದಯಗಿರಿಯ ನಿವಾಸಿಗಳಾದ ಮೋಹನ್ ಮತ್ತು ರಮೇಶ್ ಬಂಧಿತರು.

ಇವರು ದಂತಗಳನ್ನು ಒಂದು ಕೆ.ಜಿಗೆ 20 ಸಾವಿರದಂತೆ ಮಾರಾಟ ಮಾಡುತ್ತಿದ್ದರು. ಇವರಲ್ಲಿ ಪ್ರೆಸ್ಟಿನ್ ಸೆಲ್ವ ವಿರುದ್ಧ ಕೇರಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಬಂಧಿತರು ವಿಗ್ರಹ ಕೆತ್ತುವ ಕಲಾವಿದರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.