ಫೇಸಬುಕ್‌ನ ಪಕ್ಷಪಾತ ನೀತಿ – ಹಿಂದುತ್ವವಾದಿ ಭಾಜಪ ಶಾಸಕ ಟಿ. ರಾಜಾಸಿಂಹ ಇವರ ‘ಫೇಸಬುಕ್ ಪೇಜ್’ ನಿಷೇಧ! – HJS ಖಂಡನೆ

ಭಾಗ್ಯನಗರದ ಭಾಜಪ ಶಾಸಕ ಮತ್ತು ಪ್ರಖರ ಹಿಂದುತ್ವನಿಷ್ಠ ಟಿ. ರಾಜಾಸಿಂಹ ಇವರ ‘ಫೇಸಬುಕ್ ಪೇಜ್’ಅನ್ನು ನಿಷೇಧಿಸುವ ಮೂಲಕ ಫೇಸಬುಕ್ ಭಾರತದ ‘ವಾಕ್ ಸ್ವಾತಂತ್ರ್ಯ’ವನ್ನು ನಿರ್ಬಂಧಿಸಿದೆ. ಅವರ ಪೇಜ್‌ನಲ್ಲಿ ದ್ವೇಷ ಹಬ್ಬಿಸುತ್ತಿದ್ದರೆ ಭಾರತದಲ್ಲಿ ‘ವಾಂಟೆಡ್’ ಆಗಿರುವ ಮತ್ತು ಮುಸಲ್ಮಾನ ಯುವಕರನ್ನು ಉಗ್ರರನ್ನಾಗಿಸಲು ಪ್ರೋತ್ಸಾಹಿಸುವ ಜಿಹಾದಿ ಡಾ. ಝಾಕೀರ್ ನಾಯಿಕ್ ಇವರ ಹಾಗೂ 100 ಕೋಟಿ ಹಿಂದೂಗಳನ್ನು ಮುಗಿಸುವ ಬಹಿರಂಗ ಬೆದರಿಕೆಯೊಡ್ಡುವ ‘ಎಮ್‌ಐ.ಎಮ್’ನ ಶಾಸಕ ಅಕ್ಬರುದ್ದೀನ್ ಓವೈಸಿ ಇವರ ‘ಫೇಸಬುಕ್ ಪೇಜ್’ ಮೇಲೆ ಏಕೆ ನಿಷೇಧ ಹೇರಿಲ್ಲ ? ಅನೇಕ ಜಿಹಾದಿ ಉಗ್ರವಾದಿ ಸಂಘಟನೆಗಳ ‘ಫೇಸಬುಕ್ ಪೇಜ್’ ಇಂದಿಗೂ ಜಿಹಾದ್‌ನ ಪ್ರಚಾರ ಮಾಡುತ್ತಿವೆ. ಆದುದರಿಂದ ‘ಫೇಸಬುಕ್’ ಭಾರತದಲ್ಲಿ ಮುಸಲ್ಮಾನರಿಗೊಂದು ಹಿಂದೂಗಳಿಗೆ ಮತ್ತೊಂದು ನಿಯಮ ಅಳವಡಿಸಿ ಧಾರ್ಮಿಕ ಪಕ್ಷಪಾತ ಮಾಡುತ್ತಿದ್ದಾರೆ ಎಂದು ಹಿಂದೂ ಜನಜಾಗೃತಿಸ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆಯವರು ಈ ಪ್ರಕರಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ಫೇಸಬುಕ್’ ತಕ್ಷಣವೇ ಟಿ. ರಾಜಾಸಿಂಹ ಇವರ ‘ಫೇಸಬುಕ್ ಪೇಜ್’ ಮುಂಚಿನಂತೆ ಆರಂಭಿಸಬೇಕು, ಇಲ್ಲದಿದ್ದರೆ ಹಿಂದೂ ಸಮಾಜಕ್ಕೇ ಫೇಸಬುಕ್ ನಿಷೇಧಿಸುವಂತೆ ಕರೆ ನೀಡಬೇಕಾಗುವುದು, ಎಂದು ಶ್ರೀ. ಶಿಂದೆಯವರು ಎಚ್ಚರಿಕೆ ನೀಡಿದರು.

ದೆಹಲಿಯಲ್ಲಿ ಮತ್ತು ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಗಲಭೆಗಳ ಸಮಯದಲ್ಲಿಯೂ ಮತಾಂಧರು ತಮ್ಮ ‘ಫೇಸ್‌ಬುಕ್ ಪೇಜ್’ನಲ್ಲಿ ಒಟ್ಟಿಗೆ ಸೇರಲು ಕರೆ ನೀಡಿದ್ದರು ಎಂಬುದು ತಿಳಿದುಬಂದಿದೆ. ಭಾರತದ ನಗರಗಳಲ್ಲಿ ಗಲಭೆಗಳಿಗೆ ಭುಗಿಲೆಬ್ಬಿಸಿದ ‘ಫೇಸ್‌ಬುಕ್ ಪೇಜ್’ನಲ್ಲಿ ಫೇಸ್‌ಬುಕ್ ಯಾವುದೇ ಕ್ರಮ ಕೈಗೊಂಡಂತೆ ಕಾಣುತ್ತಿಲ್ಲ. ಅದೇ ರೀತಿ ‘ಫೇಸಬುಕ್’ನಲ್ಲಿ ಇದುವರೆಗೆ ಅನೇಕ ಸಲ ಹಿಂದೂ ದೇವತೆಗಳು, ರಾಷ್ಟ್ರಪುರುಷರ ವಿಷಯದಲ್ಲಿ ಅಶ್ಲೀಲ ಮತ್ತು ಆಕ್ಷೇಪಾರ್ಹ ಪೋಸ್ಟ್ ಪ್ರಸಾರಿತವಾಗುತ್ತಿವೆ. ಇದರ ಬಗ್ಗೆ ಹಿಂದೂತ್ವವಾದಿ ಸಂಘಟನೆಗಳು ಅನೇಕ ಬಾರಿ ‘ಫೇಸ್‌ಬುಕ್’ ಇಂತಹ ಪೋಸ್ಟ್ ಅಥವಾ ಪೇಜ್ ನಿರ್ಬಂಧಿಸುವಂತೆ ವಿನಂತಿಸಿವೆ; ಆದರೆ ಅದರ ಬಗ್ಗೆ ‘ಫೇಸಬುಕ್’ ಎಂದೂ ಕ್ರಮಕೈಗೊಂಡಿಲ್ಲ, ಇದು ‘ಫೇಸಬುಕ್’ನ ಪಕ್ಷಪಾತ!

ಹಿಂದೂ ಜನಜಾಗೃತಿ ಸಮಿತಿಯ ಅಧಿಕೃತ ‘ಪುಟ’ವನ್ನೂ ಇದೇ ರೀತಿ 2012 ರಲ್ಲಿ ಯಾವುದೇ ರೀತಿಯ ಕಾರಣವನ್ನು ನೀಡದೇ ಫೇಸ್‌ಬುಕ್’ ಬಂದ್ ಮಾಡಿತ್ತು. ಇದರಿಂದ ‘ಫೇಸ್‌ಬುಕ್’ನ ಹಿಂದೂದ್ವೇಷ ಸ್ಪಷ್ಟವಾಗಿ ಕಾಣುತ್ತದೆ. ಶಾಸಕ ಟಿ. ರಾಜಾಸಿಂಹ ಇವರು ಜನಪ್ರತಿನಿಧಿಯಾಗಿದ್ದಾರೆ, ಅವರ ‘ಪೇಜ್’ ಬಂದ್ ಮಾಡಿದ್ದರಿಂದ ಜನಸಾಮಾನ್ಯರಿಗೆ ಅವರೊಂದಿಗೆ ನೇರ ಸಂಪರ್ಕ ಮಾಡಿ ಸಮಸ್ಯೆಗಳನ್ನು ಬಿಡಿಸುವಲ್ಲಿ ಅಡಚಣೆಯಾಗಲಿದೆ. ಆದ್ದರಿಂದ ಭಾರತ ಸರಕಾರವು ‘ಫೇಸ್‌ಬುಕ್’ನ ಈ ಹಿಂದೂವಿರೋಧಿ ಕೃತ್ಯಕ್ಕೆ ನಿರ್ಬಂಧ ಹೇರಬೇಕು, ಎಂದು ಕೇಂದ್ರ ಸರಕಾರದ ಬಳಿ ನಾವು ಆಗ್ರಹಿಸುತ್ತೇವೆ. ಶಾಸಕ ಟಿ. ರಾಜಾ ಸಿಂಹ ಇವರ ಫೇಸ್‌ಬುಕ್ ಪೇಜ್ ಬಂದ್ ಮಾಡುವುದೆಂದರೆ ಒಂದು ರೀತಿಯಲ್ಲಿ ಹಿಂದೂಜನರ ಧ್ವನಿಯನ್ನು ಅದುಮುವ ಕೆಲಸವನ್ನು ‘ಫೇಸ್‌ಬುಕ್’ ಮಾಡುತ್ತಿದೆ. ಭಾರತದಲ್ಲಿ ಕೋಟಿಗಟ್ಟಲೆ ರೂಪಾಯಿಯನ್ನು ಸಂಪಾಧಿಸುವ ಫೇಸ್‌ಬುಕ್ ಒಂದು ವೇಳೆ ಬಹುಸಂಖ್ಯಾತ ಹಿಂದೂಗಳ ಧ್ವನಿಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಲ್ಲಿ, ಹಿಂದೂಗಳೂ ‘ಫೇಸ್‌ಬುಕ್’ನ್ನು ಬಹಿಷ್ಕರಿಸುವರು, ಎಂಬುದು ‘ಫೇಸ್‌ಬುಕ್’ನವರು ಗಮನದಲ್ಲಿಡಬೇಕು.

Spread the love
  • Related Posts

    ನಾಗಶ್ರೀ ಗೆಳೆಯರ ಬಳಗ ಕೆಲೆಂಜಿಮಾರು, ಬಂದಾರು ಇದರ ವಾರ್ಷಿಕೋತ್ಸವದ ಪ್ರಯುಕ್ತ ಸಾರ್ವಜನಿಕರಿಗೆ ವಿವಿಧ ಆಟೋಟ ಸ್ಪರ್ಧೆಗೆ ಭೇಟಿ ನೀಡಿ ಶುಭ ಹಾರೈಸಿದ ಶಾಸಕ ಹರೀಶ್ ಪೂಂಜ

    ಬಂದಾರು: (ಡಿ. 04) ಬಂದಾರು ಗ್ರಾಮ ನಾಗಶ್ರೀ ಗೆಳೆಯರ ಬಳಗ ಕೆಲೆಂಜಿಮಾರು, ಇದರ ವಾರ್ಷಿಕೋತ್ಸವದ ಪ್ರಯುಕ್ತ ಸಾರ್ವಜನಿಕರಿಗೆ ವಿವಿಧ ಆಟೋಟ ಸ್ಪರ್ಧೆ ಪೆಲತ್ತಿಮಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನ ವಠಾರದಲ್ಲಿ ಡಿ. 4 ರಂದು ನಡೆಯಿತು. ಈ ಸಂದರ್ಭದಲ್ಲಿ ಬೆಳ್ತಂಗಡಿ ಶಾಸಕರಾದ ಹರೀಶ್…

    Spread the love

    ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 418 ಶಾಲೆಗಳಿಗೆ 2.50ಕೋಟಿ ವೆಚ್ಚದಲ್ಲಿ ಪಿಠೋಪಕರಣಗಳ ಒದಗಣೆ

    Dharmasthala: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿಗಳಾದ ಡಾ.ಡಿ. ವೀರೇಂದ್ರ ಹೆಗ್ಗಡೆಯವರು 418 ಶಾಲೆಗಳಿಗೆ ಪಿಠೋಪಕರಣಗಳ ವಿತರಣೆಗೆ ಚಾಲನೆ ನೀಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಜ್ಞಾನದೀಪ ಶಿಕ್ಷಣ ಕಾರ್ಯಕ್ರಮದಡಿ ರೂ. 2.50 ಕೋಟಿ ವೆಚ್ಚದಲ್ಲಿ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ,…

    Spread the love

    You Missed

    ಕನ್ಯಾಡಿ ಸೇವಾಭಾರತಿಯಿಂದ ದ.ಕ ಜಿಲ್ಲೆಯ ಜಿಲ್ಲಾಧಿಕಾರಿ ಭೇಟಿ

    • By admin
    • January 8, 2026
    • 33 views
    ಕನ್ಯಾಡಿ ಸೇವಾಭಾರತಿಯಿಂದ ದ.ಕ ಜಿಲ್ಲೆಯ ಜಿಲ್ಲಾಧಿಕಾರಿ ಭೇಟಿ

    ನಾಗಶ್ರೀ ಗೆಳೆಯರ ಬಳಗ ಕೆಲೆಂಜಿಮಾರು, ಬಂದಾರು ಇದರ ವಾರ್ಷಿಕೋತ್ಸವದ ಪ್ರಯುಕ್ತ ಸಾರ್ವಜನಿಕರಿಗೆ ವಿವಿಧ ಆಟೋಟ ಸ್ಪರ್ಧೆಗೆ ಭೇಟಿ ನೀಡಿ ಶುಭ ಹಾರೈಸಿದ ಶಾಸಕ ಹರೀಶ್ ಪೂಂಜ

    • By admin
    • January 5, 2026
    • 19 views
    ನಾಗಶ್ರೀ ಗೆಳೆಯರ ಬಳಗ ಕೆಲೆಂಜಿಮಾರು, ಬಂದಾರು ಇದರ ವಾರ್ಷಿಕೋತ್ಸವದ ಪ್ರಯುಕ್ತ ಸಾರ್ವಜನಿಕರಿಗೆ ವಿವಿಧ ಆಟೋಟ ಸ್ಪರ್ಧೆಗೆ ಭೇಟಿ ನೀಡಿ ಶುಭ ಹಾರೈಸಿದ ಶಾಸಕ ಹರೀಶ್ ಪೂಂಜ

    “ಪರೀಕ್ಷಾ ಸಿದ್ಧತೆ ಕಾರ್ಯಾಗಾರ ಪೋಷಕ- ವಿದ್ಯಾರ್ಥಿ ಸಂವಾದ” ಕಾರ್ಯಕ್ರಮ

    • By admin
    • January 3, 2026
    • 31 views
    “ಪರೀಕ್ಷಾ ಸಿದ್ಧತೆ ಕಾರ್ಯಾಗಾರ ಪೋಷಕ- ವಿದ್ಯಾರ್ಥಿ ಸಂವಾದ” ಕಾರ್ಯಕ್ರಮ

    ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 418 ಶಾಲೆಗಳಿಗೆ 2.50ಕೋಟಿ ವೆಚ್ಚದಲ್ಲಿ ಪಿಠೋಪಕರಣಗಳ ಒದಗಣೆ

    • By admin
    • January 1, 2026
    • 86 views
    ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 418 ಶಾಲೆಗಳಿಗೆ 2.50ಕೋಟಿ ವೆಚ್ಚದಲ್ಲಿ ಪಿಠೋಪಕರಣಗಳ ಒದಗಣೆ

    ಅರ್ಪಣಂ2025

    • By admin
    • December 29, 2025
    • 45 views

    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಬಿ.ಸಿ. ಮಾದರಿಯ ಶ್ರೇಷ್ಠ ಎಂ.ಎಸ್.ಎಂ.ಇ. ಪೋಷಕ ಸಂಸ್ಥೆ-2025 ಪ್ರಶಸ್ತಿ

    • By admin
    • December 24, 2025
    • 61 views
    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಬಿ.ಸಿ. ಮಾದರಿಯ ಶ್ರೇಷ್ಠ ಎಂ.ಎಸ್.ಎಂ.ಇ. ಪೋಷಕ ಸಂಸ್ಥೆ-2025 ಪ್ರಶಸ್ತಿ