ತೈವಾನ್: ಗಾಳಿಪಟ ಉತ್ಸವದ ಸಂದರ್ಭದಲ್ಲಿ ಮೂರು ವರ್ಷದ ಪುಟ್ಟ ಬಾಲೆ ಬೃಹತ್ ಗಾಳಿಪಟದಲ್ಲಿ ಸಿಲುಕಿಕೊಂಡು ನೂರು ಅಡಿಗೂ ಎತ್ತರದಲ್ಲಿ ಹಾರಿದ ಘಟನೆ ನಡೆದಿದೆ. ಇದೀಗ ಈ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ತೈವಾನ್‌ನ ನನ್ಲಿಯೊವೊನಲ್ಲಿ ಗಾಳಿಪಟ ಉತ್ಸ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಏಕಾಏಕಿ ಮಗುವೊಂದು ಗಾಳಿಪಟಕ್ಕೆ ಸಿಲುಕಿಕೊಂಡಿತ್ತು. ಮಾತ್ರವಲ್ಲದೆ ಗಾಳಿಯ ವೇಗವು ಅಧಿಕವಾಗಿದ್ದರಿಂದ ಮಗುವು ಗಾಳಿಯಲ್ಲಿ ತೇಲಲು ಆರಂಭಿಸಿತು. ಇದನ್ನು ಕಂಡು ಅಲ್ಲಿದ್ದವರು ಒಂದು ಕ್ಷಣ ದಿಗ್ಭ್ರಮೆಗೊಳಗಾಗಿ ಬಾಲೆಯ ರಕ್ಙಣೆಗೆ ಧಾವಿಸಿದ್ದರು.
ಘಟನೆಯಲ್ಲಿ ಮಗುವಿಗೆ ತರಚಿದ ಗಾಯಗಳಾಗಿದ್ದವು. ಗಾಳಿಯಲ್ಲಿ ಹಾರುತ್ತಾ ಮಗು ಕೆಳಗೆ ಬರುತ್ತಿದ್ದಂತೆಯೇ ಅಲ್ಲಿದ್ದವರು ಮಗುವನ್ನು ಹಿಡಿದು ತಕ್ಷಣ ಗಾಳಿಪಟದ ದಾರದಿಂದ ಬಿಡಿಸಿದ್ದಾರೆ. ಸುಮಾರು ಮೂವತ್ತು ಸೆಕೆಂಡುಗಳ ಕಾಲ ಗಾಳಿಪಟ ಮಗುವನ್ನು ಆಕಾಶದಲ್ಲಿ ತೇಲಾಡಿಸಿತ್ತು.
ಗಾಳಿಪಟದೊಂದಿಗೆ ಹಾರಾಡಿದ ಮಗುವಿನ ವೀಡಿಯೋ