ಬೆಂಗಳೂರಿನ ಜನೀಶ್ ಚಿಕಿತ್ಸೆಗೂ ಸ್ಪಂಧಿಸುವರೇ ಪ್ರಧಾನಿ ಮೋದಿ! ರಾಜ್ಯದ ಜನಪ್ರತಿನಿಧಿಯವರು ಈ ಬಗ್ಗೆ ಗಮನ ಹರಿಸಿ

ಬೆಂಗಳೂರು: ಬೆಂಗಳೂರಿನ 11 ತಿಂಗಳ ಮುದ್ದಾದ ಕಂದಮ್ಮವೊಂದು ದೊಡ್ಡ ಸಮಸ್ಯೆಯಿಂದ ಬಳಲುತ್ತಿದೆ. ಈ ಮಗು ಬದುಕಬೇಕಾದರೆ 16 ಕೋಟಿಯ ಇಂಜೆಕ್ಷನ್ ಬೇಕೇ ಬೇಕು. ಆದ್ರೆ ಅಷ್ಟೊಂದು ದುಡ್ಡು ಹೊಂದಿಸಲಾಗದೇ ಮಗುವಿನ ಹೆತ್ತವರು ಇದೀಗ ಕಣ್ಣೀರಲ್ಲಿ ಕೈತೊಳುತ್ತಿದ್ದಾರೆ.

ಮುಂಬೈನ 5 ತಿಂಗಳಿನ ಟೀರಾಗೆ ಬೇಕಿರುವ ‘ಔಷಧಿ’ ಮೇಲಿನ 6 ಕೋಟಿ ರೂ.ಜಿಎಸ್’ಟಿ ಮನ್ನಾ ಮಾಡಿದಂತೆ ಪ್ರಧಾನಿ ಮೋದಿಯವರು ಕರ್ನಾಟಕದ ರಾಜಧಾನಿ ಬೆಂಗಳೂರಿನ ಸಂಜೀವಿನಿ ನಗರದ ಜನೀಶ್ ಚಿಕಿತ್ಸೆಗೆ ಸ್ಪಂಧಿಸುವಂತೆ ನಮ್ಮ ರಾಜ್ಯದ ಶಾಸಕರು ಹಾಗೂ ಮಂತ್ರಿಯವರು ಪ್ರಧಾನಿ ಮೋದಿಯವರಿಗೆ ಪತ್ರ ಬರೆಯುವ ಅನಿವಾರ್ಯತೆಯಿದೆ. ಇದು “ಕಾಲನಿರ್ಣಯನ್ಯೂಸ್” ಕಳಕಳಿಯ ಮನವಿ

READ ALSO

ಬೆಂಗಳೂರಿನ ಸಂಜೀವಿನಿ ನಗರದ ನಿವಾಸಿಗಳಾಗಿರುವ ನವೀನ್​ಕುಮಾರ್-ಜ್ಯೋತಿ ದಂಪತಿ ಪುತ್ರ 11 ತಿಂಗಳ ಕಂದ ಜನೀಶ್ ವಿಶ್ವವೇ ಬೆಚ್ಚಿ ಬೀಳಿಸೋ ಕಾಯಿಲೆಗೆ ತುತ್ತಾಗಿದ್ದಾನೆ. ಮಗುವಿನ ಕುಟುಂಬದ ಪರಿಸ್ಥಿತಿಯೂ ಅಷ್ಟೇನು ಚೆನ್ನಾಗಿಲ್ಲ. ಇದರ ಮಧ್ಯೆ ಮಗುವಿಗೆ ಜೀನ್ ಸಮಸ್ಯೆ ಕಾಣಿಸಿಕೊಂಡಿದೆ. ಸ್ಪೈನಲ್ ಮಸ್ಕ್ಯೂಲರ್ ಆಟ್ರೋಪಿ ಸಮಸ್ಯೆ ಅಂದ್ರೆ, ಬೆನ್ನು ಮೂಳೆಯ ಸ್ನಾಯು ಕ್ಷೀಣತೆ ಅಂತಾ. ವೈದ್ಯಲೋಕದಲ್ಲೇ ಇದು ಅಪರೂಪದ ಸಮಸ್ಯೆ.

ಈಗ ಜನೀಶ್ ಉಳಿಯಬೇಕಾದ್ರೆ ಬರೋಬ್ಬರಿ 16 ಕೋಟಿಯ ಮೆಡಿಸಿನ್ ಬೇಕಾಗಿದೆ. ಅದೂ ಅಮೆರಿಕದಲ್ಲಿ ಸಿಗುವ ಔಷಧಿಯೇ ಬೇಕು. ಇಷ್ಟೊಂದು ದುಡ್ಡು ಎಲ್ಲಿಂದ ತರೋದು ಅಂತಾ ತಂದೆ ನವೀನ್​ಕುಮಾರ್ ಕಣ್ಣೀರಿಡ್ತಿದ್ದಾರೆ.

ಈ ವಿಚಿತ್ರ ರೋಗದಿಂದ ಬಳಲುತ್ತಿರುವ ಜನೀಶ್ ಗೆ ದೇಹದ ಯಾವುದೇ ಅಂಗಾಂಗ ಕೆಲಸ ಮಾಡುವುದಿಲ್ಲ. ಉಸಿರಾಡಲು ಕಷ್ಟವಿದೆ. ಆಹಾರ ಸೇವಿಸುವುದು ಸಾಧ್ಯವಿಲ್ಲ. ಸಧ್ಯ ಜನೀಶ್ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮಗುವನ್ನು ಉಳಿಸಿಕೊಳ್ಳಲು ತಂದೆ-ತಾಯಿ ಹೃದಯವಂತರು ಸಹಾಯ ಮಾಡುವಂತೆ ಮೊರೆಯಿಟ್ಟಿದ್ದಾರೆ.

ಹೆಸರು -Jyothi
Bank-indian overseas bank
Ac no-374201000000285
Ifce code-IOBA0003742
Sahakar Nagar Branch, Bangalore
Phone pay -9611789719