ಶ್ರೀ ಬೆಂಗಾಲಿಯ ಪ್ರಖ್ಯಾತ ಜ್ಯೋತಿಷ್ಯ ಕೇಂದ್ರ
ಪಂಡಿತ್. ಶ್ರೀ ಅಘೋರಿನಾಥ್ ಗುರೂಜಿ. 99808 77934
ಮೇಷ:
ಇಂದು ಉತ್ತಮ ಧನ ಆದಾಯವಿದೆ ಹಾಗೆಯೇ ನಿಮಗಾಗಿ ಕೆಲಸಗಳು ಬಹಳಷ್ಟು ಇವೆ. ಕುಟುಂಬದ ಸೌಖ್ಯ ಕಾಣುವಿರಿ. ಆರ್ಥಿಕ ಉತ್ತೇಜನಕ್ಕೆ ಹಲವು ಮಾರ್ಗೋಪಾಯಗಳನ್ನು ಸಹ ಮಾಡುವಿರಿ. ನಿಮ್ಮ ಕೆಲಸವು ಇಂದು ಜನ ಮನ್ನಣೆಗೆ ಪಾತ್ರವಾಗಲಿದೆ. ಶತ್ರುಗಳು ಮೆತ್ತಗಾಗಿ ಮೂಲೆ ಸೇರುವರು. ನಿಮ್ಮಿಂದ ದೊಡ್ಡ ಮಟ್ಟದ ಸಾಮಾಜಿಕ ಸೇವೆಯನ್ನು ನಿರೀಕ್ಷಿಸಬಹುದು.
ವೃಷಭ:
ಜೀವನದಲ್ಲಿ ಕಷ್ಟ ನಷ್ಟಗಳು ಸಹಜವಾಗಿಯೇ ಬರುತ್ತದೆ ಯಾವುದಕ್ಕೂ ಚಿಂತೆ ಮಾಡದೆ ನಿಮ್ಮ ಕಾರ್ಯದಲ್ಲಿ ಮಗ್ನರಾಗಿ ಮುಂದೆ ಒಳ್ಳೆಯ ದಾರಿ ಕಾಣ ಸಿಗುವುದು. ಕೆಲವು ಅಡೆತಡೆಗಳ ನಡುವೆಯೂ ಇಂದು ಕೆಲಸದಲ್ಲಿ ಉತ್ತಮ ನಿರ್ವಹಣೆ ತೋರುವಿರಿ. ನಿಮ್ಮ ಕಾರ್ಯಶೈಲಿಯನ್ನು ವಿರೋಧಿಗಳು ಸಹ ಮೆಚ್ಚುಗೆ ಸೂಚಿಸುತ್ತಾರೆ.
ಮಿಥುನ:
ಹಣಕಾಸಿನಲ್ಲಿ ಸ್ವಲ್ಪ ಮಟ್ಟಿಗೆ ತೊಂದರೆ ಆಗಬಹುದು ಆದರೆ ಸಹಾಯಕ್ಕಾಗಿ ನಿಮ್ಮ ಆಪ್ತ ವರ್ಗ ಜನರು ಬಂದೇ ಬರುತ್ತಾರೆ. ಮಕ್ಕಳ ಶಿಕ್ಷಣಕ್ಕಾಗಿ ಇಂದು ಅನೇಕ ಯೋಜನೆಗಳನ್ನು ರೂಪಿಸಲಿದ್ದೀರಿ. ಅವರ ಶಿಕ್ಷಣದ ಮೇಲೆ ನಿಮ್ಮ ಪ್ರಭಾವವನ್ನು ಬೀರದಿರುವುದು ಸೂಕ್ತ. ಅವರ ಕಲಿಕೆಯ ಆಸಕ್ತಿಗೆ ಸ್ವತಂತ್ರವನ್ನು ನೀಡಿ.
ಕಟಕ
ಸಂಜೆಯೊಳಗೆ ಕುಟುಂಬದಿಂದ ಶುಭ ಸುದ್ದಿ ಬರುವ ನಿರೀಕ್ಷೆ ಇದೆ. ಹೆಚ್ಚಿನ ಕೆಲಸವು ನಿಮ್ಮನ್ನು ಒತ್ತಡಕ್ಕೆ ಸಿಲುಕಿಸುತ್ತದೆ. ಕೆಲಸ ಮುಗಿದ ಹಾಗೆ ಮತ್ತಷ್ಟು ಕೆಲಸ ನಿಮಗೆ ಸಿಗಲಿದೆ ಇದರಿಂದ ಆಯಾಸ ಹೆಚ್ಚಾಗಬಹುದು. ವಿಶ್ರಾಂತಿಗಾಗಿ ಸಮಯ ಹೊಂದಾಣಿಕೆ ಮಾಡಿಕೊಳ್ಳಿ.
ಸಿಂಹ:
ನೀವು ಮನಸ್ಸಿನಲ್ಲಿ ಇಟ್ಟ ಗುರಿಯೇ ಬೇರೆ ಮಾಡುತ್ತಿರುವುದು ಕೆಲಸ ಬೇರೆಯಾಗಿದೆ ಚಿಂತೆ ಇಲ್ಲ ನಿಮ್ಮ ಗುರಿ ನೆರವೇರಲು ಸದ್ಯದಲ್ಲೇ ಶುಭ ಸಮಯ ಬರಲಿದೆ. ನಿಮ್ಮ ವ್ಯವಸ್ಥಿತ ಕಾರ್ಯ ಶೈಲಿಗೆ ವಿರೋಧಿಗಳ ಸಹ ತಲೆ ಬಾಗುವರು. ಕುಟುಂಬದೊಡನೆ ಆನಂದ ಕ್ಷಣ ಕಳೆಯಲು ಪ್ರಯತ್ನಿಸಿ. ಮಕ್ಕಳ ಶೈಕ್ಷಣಿಕ ಚಟುವಟಿಕೆಗೆ ನಿಮ್ಮದು ಪುಟ್ಟ ಸಹಾಯ ಸಹಕಾರ ಇರಲಿ. ಬಂದು ವರ್ಗದ ಜೊತೆ ಹೆಚ್ಚು ದೂರವಾದಂತೆ ಇದ್ದೀರಿ ಎಲ್ಲರ ಜೊತೆಗೆ ಬೆರೆಯುವಿಕೆ ನಿಮ್ಮಲ್ಲಿ ಚೈತನ್ಯ ತುಂಬುತ್ತದೆ.
ಕನ್ಯಾ :
ನಿಮ್ಮ ಕಾರ್ಯಗಳಲ್ಲಿ ತೊಂದರೆ ನೀಡುವ ಜನರು ಬಹಳಷ್ಟು ಇರುವರು ಅವರನ್ನು ಆದಷ್ಟು ದೂರವಿಟ್ಟು ಕಾರ್ಯವನ್ನು ಪೂರ್ಣಗೊಳಿಸಿ. ಆಪ್ತ ವರ್ಗದ ಜನಗಳು ನಿಮ್ಮಲ್ಲಿ ವಿಶ್ವಾಸವಿಟ್ಟು ಹಲವು ಯೋಜನೆಗಳನ್ನು ನಿಮಗೆ ನೀಡುವರು ಇದರಿಂದ ಆದಾಯ ಹಾಗೂ ಕೆಲಸ ವೃದ್ಧಿಯಾಗುತ್ತದೆ. ನಿಮ್ಮಲ್ಲಿನ ಕೋಪ ಹಾಗೂ ಕಟು ಮಾತುಗಳನ್ನು ಇಂದು ನಿಯಂತ್ರಣದಲ್ಲಿಡಿ, ಇದರಿಂದ ಕುಟುಂಬದಲ್ಲಿ ಭಿನ್ನಾಭಿಪ್ರಾಯ ಬರಬಹುದು ಹಾಗೆಯೇ ಹಿರಿಯರು ನಿಮ್ಮ ಮೇಲಿನ ಗೌರವನ್ನು ಕಡಿಮೆ ಮಾಡಿಕೊಳ್ಳಬಹುದು ಎಚ್ಚರವಹಿಸಿ.
ತುಲಾ :
ಕೆಲಸದಲ್ಲಿ ನಿಮ್ಮ ಬಗೆಗೆ ಮೆಚ್ಚುಗೆ ಭಾವನೆ ಬರಲಿದೆ. ದೊಡ್ಡ ಯೋಜನೆಗಾಗಿ ಆಸ್ಪದ ನೀಡಲಿದ್ದಾರೆ. ಸಮಾರಂಭಗಳ ಪೂರ್ಣ ತಯಾರಿ ನಿಮ್ಮ ವಿಚಾರಗಳಂತೆ ನಡೆಯಲು ಚಾಲನೆ ನೀಡುವರು. ಆತುರದ ವರ್ತನೆಗಳು ಸರಿಯಲ್ಲ. ಯೋಜನೆಗಳಲ್ಲಿ ನೀವು ಚೈತನ್ಯದಿಂದ ವರ್ತಿಸುವುದು ಅವಶ್ಯಕವಿದೆ. ಮನೆಯಲ್ಲಿ ಲಗುಬಗೆಯಿಂದ ವಸ್ತುಗಳು ಮರೆತುಹೋಗುವ ಅಥವಾ ಕಳೆದು ಹೋಗುವ ಸಾಧ್ಯತೆ ಇದೆ ಆದಷ್ಟು ಸಮಾಧಾನದಿಂದ ವರ್ತಿಸಿ. ಹಣಗಳಿಕೆಯಲ್ಲಿ ಉತ್ತಮ ಸ್ವರೂಪ ಪಡೆಯಲಿದೆ.
ವೃಶ್ಚಿಕ :
ಕೆಟ್ಟ ಸ್ವಪ್ನ ಗಳಿಂದ ಮತ್ತು ಶಕುನ ಗಳಿಂದ ಮನಸ್ಸಿನಲ್ಲಿ ಅಶಾಂತಿ ಆಗಬಹುದು ಆದಷ್ಟು ಇಂದು ಶಕ್ತಿ ದೇವತೆಗಳಿಗೆ ಭೇಟಿ ನೀಡುವುದು ಒಳ್ಳೆಯದು. ಹಿರಿಯರು ಕೊಟ್ಟಿರುವ ವ್ಯವಹಾರ ಅಥವಾ ಬಳುವಳಿಗಳು ಮುಂದುವರಿಸಿ ಕಳೆದುಕೊಳ್ಳುವುದು ಬೇಡ. ವ್ಯವಹಾರದಲ್ಲಿ ಗ್ರಾಹಕರನ್ನು ಸೆಳೆಯುವ ಪ್ರಯತ್ನ ನಡೆಸಿ. ಕಟು ಮಾತುಗಳು ನಿಮ್ಮ ವ್ಯಕ್ತಿತ್ವಕ್ಕೆ ಶೋಭೆ ತರುವುದಿಲ್ಲ. ಕುಟುಂಬದ ಹಿತಾಸಕ್ತಿಯನ್ನು ಕಡೆಗಣಿಸದೆ ಅವರ ಪ್ರತಿಯೊಂದು ಆಕಾಂಕ್ಷೆಗಳಿಗೆ ಜವಾಬ್ದಾರಿಯುತ ಸ್ಥಾನದಲ್ಲಿ ನಿಂತು ಕಾರ್ಯ ಮಾಡಿಕೊಡುವುದು ನಿಮ್ಮ ಮೇಲಿನ ಗೌರವ ಹೆಚ್ಚಾಗುತ್ತದೆ.
ಧನಸ್ಸು:
ಮನಸ್ಸಿನಲ್ಲಿ ಮೂಡುವ ಆಲೋಚನೆಗಳನ್ನು ನಿಯಂತ್ರಣದಲ್ಲಿಡಿ. ನಂಬಿಕಸ್ಥ ಜನಗಳಿಂದ ಮೋಸ ಹೋಗುವ ಸಾಧ್ಯತೆ ಇದೆ ಎಚ್ಚರವಿರಲಿ. ವಾಹನ ಸವಾರಿಯಲ್ಲಿ ಜಾಗ್ರತೆ ಅತ್ಯವಶ್ಯಕ. ಚಂಚಲ ಮನಸ್ಸಿನಿಂದ ಕೆಲಸಗಳಲ್ಲಿ ಪರಿಪಕ್ವತೆ ಕಾಣಸಿಗದು, ಆದಷ್ಟು ಏಕಾಗ್ರತೆಯನ್ನು ರೂಡಿಸಿಕೊಳ್ಳಿ. ಸಾಲದ ಬಾಧೆಯಿಂದ ಅವಮಾನಕರ ಪ್ರಸಂಗ ಎದುರಿಸಬೇಕಾದ ಸಾಧ್ಯತೆ ಇದೆ ಆದಷ್ಟು ಹಣಕಾಸಿನ ವಿಷಯದಲ್ಲಿ ಉಳಿತಾಯದ ಯೋಜನೆ ಮಾಡಿಕೊಳ್ಳಿ. ಅನವಶ್ಯಕ ಕೆಲಸಗಳಲ್ಲಿ ಕಾಲಹರಣ ಮಾಡುವುದು ಬೇಡ.
ಮಕರ:
ವ್ಯವಹಾರಗಳಲ್ಲಿ ನಿಮ್ಮ ನಿರೀಕ್ಷೆಯಂತೆ ಅಭಿವೃದ್ಧಿ ಕಂಡುಬರಲಿದೆ. ಬಂಡವಾಳದ ಸಮಸ್ಯೆಗಳನ್ನು ಈ ದಿನ ಪರಿಹರಿಸುತ್ತೀರಿ. ದಾನ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವ ಸಾಧ್ಯತೆ ಕಂಡು ಬರಲಿದೆ. ಲಾಭಾಂಶ ಮತ್ತು ಆದಾಯ ಹೆಚ್ಚಳ ಕಂಡುಬರುತ್ತದೆ ಇದರಿಂದ ಸಂತಸದ ವಾತಾವರಣ ಕಾಣಬಹುದು. ಸಂಗಾತಿಯೊಡನೆ ವಿಶೇಷ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಇರಾದೆ ನಿಮ್ಮಲ್ಲಿ ವ್ಯಕ್ತವಾಗಲಿದೆ.
ಕುಂಭ:
ಬಂಧುಮಿತ್ರರೊಡನೆ ಇರುವಂತಹ ಭಿನ್ನಾಭಿಪ್ರಾಯಗಳು ಈ ದಿನ ಸರಿಹೋಗಲಿದೆ. ಒಪ್ಪಿಕೊಂಡಿರುವ ಕೆಲಸಗಳನ್ನು ಆದಷ್ಟು ಬೇಗ ಮುಗಿಸುವ ಯೋಜನೆ ರೂಪಿಸಬೇಕಾಗಿದೆ. ಗ್ರಾಹಕರ ಹಿತಾಸಕ್ತಿಯನ್ನು ನೀವು ಕಡೆಗಣಿಸುವುದು ಬೇಡ. ತಪ್ಪುಗಳನ್ನು ಪುನಾರವರ್ತನೆ ಮಾಡುವುದು ಸರಿ ಕಾಣುವುದಿಲ್ಲ. ಗುರುಹಿರಿಯರ ಸಲಹೆಗಳನ್ನು ಪಡೆದು ಯೋಜನೆಗಳಲ್ಲಿ ಮುಂದುವರಿಯಿರಿ.
ಮೀನ:
ಕಚೇರಿಯ ಕೆಲಸಗಳು ಸರಾಗವಾಗಿ ನಡೆಯಲಿದೆ. ವ್ಯವಹಾರ ಕ್ಷೇತ್ರದಲ್ಲಿ ನಿಮ್ಮ ತೀರ್ಮಾನ ಉತ್ತಮವಾಗಿ ಮೂಡಿ ಬರುತ್ತದೆ. ಈ ದಿನ ಅಂದುಕೊಂಡಿರುವ ಕೆಲಸಗಳಲ್ಲಿ ಗೆಲುವು ನಿಮ್ಮ ಪರವಾಗಿದೆ. ಕುಟುಂಬದಿಂದ ಶುಭ ಸುದ್ದಿಯನ್ನು ಆಲಿಸುವಿರಿ, ಇದು ನಿಮ್ಮಲ್ಲಿ ಸಂತಸ ತರಲಿದೆ. ಆರ್ಥಿಕ ಸ್ಥಿತಿಯು ಉತ್ತಮವಾಗುತ್ತಾ ಸಾಗಲಿದೆ. ಸಾಲಕೊಡುವ ವಿಚಾರಗಳಿಂದ ಆದಷ್ಟು ನೀವು ದೂರ ಇರುವುದು ಒಳ್ಳೆಯದು. ಮಕ್ಕಳೊಡನೆ ಕಾಲಕಳೆಯಲು ಪ್ರಯತ್ನಿಸಬೇಕಾಗಿದೆ.