ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಬಸವರಾಜ್ ಬೆಳ್ತಂಗಡಿ ಭೇಟಿ

BELTHANGADY: ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಬಸವರಾಜ್ ರವರು ಬೆಳ್ತಂಗಡಿಯ ನ್ಯಾಯಾಲಯ ಮತ್ತು ವಕೀಲರ ಸಂಘಕ್ಕೆ ಜುಲೈ 2 ರಂದು ಭೇಟಿ ನೀಡಿದರು. ಈ ಸಂದರ್ಭದಲ್ಲಿ ನೂತನ ನ್ಯಾಯಾಲಯ ಸಂಕೀರ್ಣಕ್ಕೆ ಸರ್ಕಾರದಿಂದ ಮಂಜೂರಾಗಿರುವ ಅನುದಾನದ ವಿಚಾರದಲ್ಲಿ ಬೆಳ್ತಂಗಡಿಯ ನ್ಯಾಯಾಧೀಶರು ಮತ್ತು ವಕೀಲರ ಸಂಘದ ಪ್ರತಿನಿಧಿಗಳೊಂದಿಗೆ ಚರ್ಚಿಸಿದರು.

ಈ ಸಂಧರ್ಭದಲ್ಲಿ ಮಾತನಾಡಿದ ವಕೀಲರ ಸಂಘದ ಅಧ್ಯಕ್ಷರಾದ ವಸಂತ ಮರಕಡ ರವರು ನೂತನ ನ್ಯಾಯಾಲಯದ ಸಂಕೀರ್ಣವನ್ನು ಈಗ ಇರುವ 60 ವರ್ಷ ಹಳೆಯದಾದ ಕಟ್ಟಡ ಇರುವ ಜಾಗದಲ್ಲಿಯೇ ನಿರ್ಮಿಸುವರೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಿನಂತಿಸಿ ಆ ಬಗ್ಗೆ ಸಂಘದ ಪರವಾಗಿ ಮನವಿ ಸಲ್ಲಿಸಿದರು. ಜಿಲ್ಲಾ ನ್ಯಾಯಾಧೀಶರಾದ ಬಸವರಾಜ್ ರವರು ಮಾತನಾಡುತ್ತಾ ವಕೀಲರ ಸಂಘದ ಮನವಿಯಂತೆ ಹೈಕೋರ್ಟ್ ಗೆ ಸೂಕ್ತ ಪ್ರಸ್ತಾವನೆ ಸಲ್ಲಿಸುವುದಾಗಿ ಭರವಸೆ ನೀಡಿ ಜುಲೈ 12 ರಂದು ನಡೆಯುವ ಲೋಕ ಅದಾಲತ್ ನಲ್ಲಿ ಹೆಚ್ಚು ಹೆಚ್ಚು ಪ್ರಕರಣಗಳನ್ನು ರಾಜಿ ಪಂಚಾತಿಕೆ ಮೂಲಕ ಇತ್ಯರ್ಥಪಡಿಸುವಂತೆvಅವರು ವಕೀಲರಲ್ಲಿ ಮನವಿ ಮಾಡಿದರು.ವೇದಿಕೆಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜೈಬುನ್ನಿಸಾ, ಪ್ರಧಾನ ಹಿರಿಯ ಸಿವಿಲ್ ಮತ್ತು ಜೆ ಎಂ ಎಫ್ ಸಿ ನ್ಯಾಯಾಧೀಶರಾದ ಮನು ಬಿ. ಕೆ, ಪ್ರಧಾನ ಸಿವಿಲ್ ಮತ್ತು ಜೆ ಎಂ ಎಫ್ ಸಿ ನ್ಯಾಯಾಧೀಶರಾದ ಸಂದೇಶ್, ಹೆಚ್ಚುವರಿ ಸಿವಿಲ್ ಮತ್ತು ಜೆ ಎಂ ಎಫ್ ಸಿ ನ್ಯಾಯಾಧೀಶರಾದ ವಿಜಯೇಂದ್ರ ಟಿ ಎಚ್, ಹಿರಿಯ ವಕೀಲರ ಸಮಿತಿ ಚೇರ್ಮನ್ ಅಲೋಶಿಯಸ್ ಲೋಬೋ ಉಪಸ್ಥಿತರಿದ್ದರು. ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ನವೀನ್ ಬಿ.ಕೆ ಸ್ವಾಗತಿಸಿ, ಹೆಚ್ಚುವರಿ ಸರ್ಕಾರಿ ವಕೀಲರಾದ ಮನೋಹರ ಕುಮಾರ್, ಎ ವಂದಿಸಿದರು.

Spread the love
  • Related Posts

    ಗ್ರಾಹಕರ ದೂರುಗಳ ಬೆನ್ನಿಗೆ ಕ್ರಮ: ಗ್ಯಾಸ್ ಏಜೆನ್ಸಿಗೆ ಅಂತಿಮ ಎಚ್ಚರಿಕೆ, ಬೆಳ್ತಂಗಡಿ ಆಹಾರ ಇಲಾಖೆಯಿಂದ ಶ್ರೀ ಮಂಜು ಇಂಡೇನ್ ಗ್ಯಾಸ್ ಏಜೆನ್ಸಿಗೆ ನೋಟೀಸ್ ಜಾರಿ

    ಬೆಳ್ತಂಗಡಿ : ಗ್ರಾಹಕರಿಗೆ ಸರಿಯಾದ ಸಮಯಕ್ಕೆ ಗ್ಯಾಸ್ ಸರಬರಾಜು ಮಾಡದೆ ಕಚೇರಿಗೆ ಹೋದಾಗ ಪ್ರತಿನಿತ್ಯ ಗಲಾಟೆ ಮಾಡುತ್ತಿರುವ ಬಗ್ಗೆ ಬೆಳ್ತಂಗಡಿ ಆಹಾರ ಇಲಾಖೆಗೆ ಬಂದ ದೂರಿನ ಆಧಾರದಲ್ಲಿ ಕೊನೆಯ ಎಚ್ಚರಿಕೆಯ ನೋಟಿಸ್ ಜಾರಿ ಮಾಡಲಾಗಿದೆ. ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಲಾಯಿಲ…

    Spread the love

    ನಾಳೆ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶ ಪ್ರಕಟ

    ಬೆಂಗಳೂರು: 2026ರ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ನಾಳೆ (ಏಪ್ರಿಲ್ 23) ಪ್ರಕಟಗೊಳ್ಳಲಿದೆ. ಏ.22 ರಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ಈ ಪ್ರಮುಖ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಫಲಿತಾಂಶದ ಮುಖ್ಯಾಂಶಗಳು: ದಿನಾಂಕ…

    Spread the love

    You Missed

    ಗ್ರಾಹಕರ ದೂರುಗಳ ಬೆನ್ನಿಗೆ ಕ್ರಮ: ಗ್ಯಾಸ್ ಏಜೆನ್ಸಿಗೆ ಅಂತಿಮ ಎಚ್ಚರಿಕೆ, ಬೆಳ್ತಂಗಡಿ ಆಹಾರ ಇಲಾಖೆಯಿಂದ ಶ್ರೀ ಮಂಜು ಇಂಡೇನ್ ಗ್ಯಾಸ್ ಏಜೆನ್ಸಿಗೆ ನೋಟೀಸ್ ಜಾರಿ

    • By admin
    • April 23, 2026
    • 76 views
    ಗ್ರಾಹಕರ ದೂರುಗಳ ಬೆನ್ನಿಗೆ ಕ್ರಮ: ಗ್ಯಾಸ್ ಏಜೆನ್ಸಿಗೆ ಅಂತಿಮ ಎಚ್ಚರಿಕೆ,  ಬೆಳ್ತಂಗಡಿ ಆಹಾರ ಇಲಾಖೆಯಿಂದ ಶ್ರೀ ಮಂಜು ಇಂಡೇನ್ ಗ್ಯಾಸ್ ಏಜೆನ್ಸಿಗೆ ನೋಟೀಸ್ ಜಾರಿ

    ನಾಳೆ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶ ಪ್ರಕಟ

    • By admin
    • April 22, 2026
    • 30 views
    ನಾಳೆ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶ ಪ್ರಕಟ

    ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಭಕ್ತಿಭಾವದೊಂದಿಗೆ ವಿಷು ಜಾತ್ರಾ ಮಹೋತ್ಸವ ಸಂಪನ್ನ

    • By admin
    • April 22, 2026
    • 16 views
    ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಭಕ್ತಿಭಾವದೊಂದಿಗೆ ವಿಷು ಜಾತ್ರಾ ಮಹೋತ್ಸವ ಸಂಪನ್ನ

    ಗೂಡ್ಸ್ ವಾಹನದಲ್ಲಿ ಪ್ರಯಾಣಿಕರು – ಚಾರ್ಮಾಡಿ ಘಾಟಿಯಲ್ಲಿ ಪಿಕಪ್ ವಾಹನ ಪಲ್ಟಿ, 10ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ

    • By admin
    • April 22, 2026
    • 40 views
    ಗೂಡ್ಸ್ ವಾಹನದಲ್ಲಿ ಪ್ರಯಾಣಿಕರು – ಚಾರ್ಮಾಡಿ ಘಾಟಿಯಲ್ಲಿ  ಪಿಕಪ್ ವಾಹನ ಪಲ್ಟಿ, 10ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ

    ತ್ರಿಶೂರ್ನ ಪಟಾಕಿ ಶೆಡ್ನಲ್ಲಿ ಸ್ಫೋಟ: 10ಮಂದಿ ಸಜೀವ ದಹನ ಹಲವರಿಗೆ ಗಂಭೀರ ಗಾಯ

    • By admin
    • April 21, 2026
    • 26 views
    ತ್ರಿಶೂರ್ನ ಪಟಾಕಿ ಶೆಡ್ನಲ್ಲಿ ಸ್ಫೋಟ: 10ಮಂದಿ ಸಜೀವ ದಹನ ಹಲವರಿಗೆ ಗಂಭೀರ ಗಾಯ

    ಬೃಹತ್ ಪ್ರಮಾಣದ ಎಂಡಿಎಂಎ ಮಾರಾಟ ಮಾಡುತ್ತಿದ್ದ ಇಬ್ಬರು ಡ್ರಗ್ ಪೆಡ್ಲರ್ ಗಳ ಬಂಧನ: 46.50ಲಕ್ಷ ಮೌಲ್ಯದ ಡ್ರಗ್ಸ್ ವಶಕ್ಕೆ

    • By admin
    • April 20, 2026
    • 58 views
    ಬೃಹತ್ ಪ್ರಮಾಣದ ಎಂಡಿಎಂಎ ಮಾರಾಟ ಮಾಡುತ್ತಿದ್ದ ಇಬ್ಬರು ಡ್ರಗ್ ಪೆಡ್ಲರ್ ಗಳ ಬಂಧನ: 46.50ಲಕ್ಷ ಮೌಲ್ಯದ ಡ್ರಗ್ಸ್ ವಶಕ್ಕೆ