TRENDING
Next
Prev

ಜುಲೈ 20, 2020; ಸೋಮವಾರ : ಇಂದಿನ ರಾಶಿಭವಿಷ್ಯ

ಪಂಚಾಂಗ

ಶ್ರೀ ಶಾರ್ವರಿನಾಮ ಸಂವತ್ಸರ,
ದಕ್ಷಿಣಾಯನ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಕೃಷ್ಣ ಪಕ್ಷ, ಅಮಾವಾಸ್ಯೆ ತಿಥಿ,
ಸೋಮವಾರ, ಪುನರ್ವಸು ನಕ್ಷತ್ರ

ರಾಹುಕಾಲ: ಬೆಳಗ್ಗೆ 7:42 ರಿಂದ 9:18
ಗುಳಿಕಕಾಲ: ಮಧ್ಯಾಹ್ನ 2:05 ರಿಂದ 3:41
ಯಮಗಂಡಕಾಲ: ಬೆಳಗ್ಗೆ 10:54 ರಿಂದ 12:30

READ ALSO

ದಿನ ವಿಶೇಷ: ಆಷಾಡ ಅಮವಾಸ್ಯೆ/ ಭೀಮನ ಅಮಾವಾಸ್ಯೆ

ಮೇಷ

ವ್ಯವಹಾರದಲ್ಲಿ ಉತ್ತಮ ಧನಪ್ರಾಪ್ತಿ. ಕೌಟುಂಬಿಕ ನೆಮ್ಮದಿ. ಹೊಸ ಸಂಬಂಧಗಳು ಕೂಡಿಬರುವ ಸಾಧ್ಯತೆ. ದೂರದ ಪ್ರಯಾಣ ಅಷ್ಟೊಂದು ಶ್ರೇಯಸಲ್ಲ. ದೈನಂದಿನ ಕಾರ್ಯಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುವಿರಿ.

ವೃಷಭ

ವೈಯಕ್ತಿಕ ಜೀವನದಲ್ಲಿ ಸಾಧನೆಯೊಂದನ್ನು ಮಾಡಿದ ತೃಪ್ತಿ ನಿಮ್ಮದಾಗಲಿದೆ. ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಕೊಳ್ಳುವ ಸಾಧ್ಯತೆ. ಕಬ್ಬಿಣ, ಸಿಮೆಂಟ್‌ ಮುಂತಾದ ಕಟ್ಟಡ ಸಾಮಗ್ರಿಗಳ ವ್ಯಾಪಾರದಲ್ಲಿ ಉತ್ತಮ ಲಾಭ.

ಮಿಥುನ

ಮಂಗಳಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಲಿದ್ದೀರಿ. ಬಂಧು–ಬಾಂಧವರ ಭೇಟಿಯಿಂದಾಗಿ ಸಂಭ್ರಮ. ಕಲಾವಿದರಿಗೆ ತಮ್ಮ ಪ್ರತಿಭೆಯನ್ನು ತೋರಿಸಲು ಉತ್ತಮ ಅವಕಾಶ ದೊರಕಲಿದೆ.

ಕಟಕ

ಹೊಸ ಮನೆಯ ಕನಸು ನನಸಾಗಲಿದೆ. ನಿರುದ್ಯೋಗಿಗಳಿಗೆ ಉತ್ತಮ ಅವಕಾಶದ ಬಾಗಿಲು ತೆರೆಯುವ ಸಾಧ್ಯತೆ. ವಾಹನಗಳ ವಿಷಯದಲ್ಲಿ ಸ್ವಲ್ಪ ಮಟ್ಟಿನ ಎಚ್ಚರಿಕೆ ಅಗತ್ಯ. ಸಂಗಾತಿಯ ಸಹಕಾರದಿಂದ ಸಂತಸ.

ಸಿಂಹ

ಕ್ರೀಡಾಪಟುಗಳಿಗೆ ತಮ್ಮ ಸಾಮರ್ಥ್ಯವನ್ನು ತೋರಿಸುವ ಎಲ್ಲ ಅವಕಾಶಗಳು ಕಂಡುಬರುತ್ತಿದೆ. ನೂತನ ಕಾರ್ಯಯೋಜನೆಗಳಲ್ಲಿ ತಲ್ಲೀನರಾಗುವಿರಿ. ಆರೋಗ್ಯದ ಬಗ್ಗೆ ವಿಶೇಷ ಗಮನ ಅಗತ್ಯ.

ಕನ್ಯಾ

ಬಹಳ ಪ್ರಯತ್ನದಿಂದ ಮಾಡಿದ ಕೆಲಸಗಳಲ್ಲಿ ಉತ್ತಮ ಫಲ. ಮಕ್ಕಳಿಂದ ಮನೆಯಲ್ಲಿ ಸಂತೋಷದ ವಾತಾವರಣ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಾಧ್ಯತೆ. ವೃಥಾ ಖರ್ಚು ಸಂಭವ.

ತುಲಾ

ವಾಹನ ಚಾಲನೆಯಲ್ಲಿ ಜಾಗರೂಕರಾಗಿರಿ. ವೆಚ್ಚದ ಮೇಲೆ ಹಿಡಿತವಿರಲಿ. ನೆರೆಹೊರೆಯವರೊಂದಿಗೆ ವಿನಾಕಾರಣ ದ್ವೇಷ ಉಂಟಾದೀತು. ಶಾರದಾ ದೇವಿಯ ಆರಾಧನೆ ಮಾಡಿ. ದೂರದ ಪ್ರಯಾಣ ಸಾಧ್ಯತೆ.

ವೃಶ್ಚಿಕ

ಕುಟುಂಬಕ್ಕೆ ಹೊಸ ಸದಸ್ಯರೊಬ್ಬರು ಸೇರ್ಪಡೆಯಾಗುವ ಲಕ್ಷಣಗಳು ಕಂಡುಬರುತ್ತಿವೆ. ವಿದ್ಯಾ ಸಂಪನ್ನರಿಗೆ ಗೌರವ ದೊರೆಯಲಿದೆ. ಸಂಗಾತಿಯ ಆಶೋತ್ತರಗಳನ್ನು ಈಡೇರಿಸಲಿದ್ದೀರಿ.

ಧನು

ಹಣಕಾಸಿನ ವ್ಯವಹಾರದಲ್ಲಿ ಮುಲಾಜಿಗೆ ಒಳಗಾಗುವ ಸಾಧ್ಯತೆ. ಹಿತಮಿತವಾದ ಮಾತಿನಿಂದ ಬಾಂಧವ್ಯ ವೃದ್ಧಿ. ಆತ್ಮೀಯರೊಂದಿಗೆ ಔತಣಕೂಟಗಳಲ್ಲಿ ಭಾಗವಹಿಸುವ ಸಾಧ್ಯತೆ.

ಮಕರ

ಆರ್ಥಿಕ ಅನುಕೂಲತೆಗಳು ಕೂಡಿಬರಲಿವೆ. ವಿವಾಹಾಕಾಂಕ್ಷಿಗಳಿಗೆ ಸರಿಯಾದ ಸಂಬಂಧಗಳು ಕೂಡಿಬರುವ ಲಕ್ಷಣವಿದೆ. ಸ್ವಯಂ ಉದ್ಯೋಗಿಗಳಿಗೆ ವ್ಯವಹಾರದಲ್ಲಿ ಹಿನ್ನಡೆ. ಬಹುದಿನಗಳ ಆಸೆ ಈಡೇರಲಿದೆ.‌

ಕುಂಭ

ಭೂಮಿ ಮಾರಾಟ, ಖರೀದಿಗಳಲ್ಲಿ ತೊಡಗಿರುವವರಿಗೆ ಅಧಿಕ ಲಾಭ. ಸರ್ಕಾರದ ಕಾನೂನಿನ ಅನ್ವಯ ತೊಂದರೆಗಳು ಎದುರಾಗುವ ಸಾಧ್ಯತೆ. ಮನೆಯಲ್ಲಿ ಹರ್ಷ ಮೂಡುವುದು.

ಮೀನ

ಹಿಂದಿನ ಬಾಕಿ ವ್ಯವಹಾರಗಳು ಪೂರ್ಣ ಚುಕ್ತಗೊಂಡು ಋಣ ಬಾಧೆಯಿಂದ ಮುಕ್ತರಾಗುವಿರಿ. ಮನೆಯವರೊಂದಿಗೆ ಸಮಾರಂಭ ವೊಂದರಲ್ಲಿ ಭಾಗಿಯಾಗುವ ಸಾಧ್ಯತೆ. ಹಿರಿಯರ ಸಲಹೆಗಳಿಗೆ ಗೌರವವಿರಲಿ.

ಕಾಲನಿರ್ಣಯನ್ಯೂಸ್ ವಾಟ್ಸಾಪ್ ಗ್ರೂಫ್ ಸೇರಲು ಇಲ್ಲಿ ಕ್ಲಿಕ್ ಮಾಡಿ https://chat.whatsapp.com/CTDH16qVW5RL023JwWgknA