ಆತಂಕ ಸೃಷ್ಠಿಸಿದ ಚಿರತೆಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾದ ಅರಣ್ಯ ಇಲಾಖೆ ಸಿಬ್ಬಂದಿ

ಕಡಬ: ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮ ಪಂಚಾಯತಿ ವ್ಯಾಪ್ತಿಯ ರೆಂಜಿಲಾಡಿ ಗ್ರಾಮದ ಹೇರ ಎಂಬಲ್ಲಿ ನಸುಕಿನ ಜಾವ ಇಬ್ಬರ ಮೇಲೆ ದಾಳಿ ನಡೆಸಿದ ಚಿರತೆ ಸೆರೆಯಾಗಿದೆ.

ಸ್ಪ್ರಿಂಕ್ಲರ್ ಜೆಟ್ ಬದಲಾಯಿಸಲು ತೋಟಕ್ಕೆ ರಾತ್ರಿ ತೆರಳಿದ್ದ ವೇಳೆ ಚಿರತೆಯಿಂದ ದಾಳಿ ನಡೆದಿತ್ತು ಚಿರತೆ ತೋಟದೊಳಗಿನ ಮರವನ್ನೇರಿ ಕುಳಿತಿತ್ತು. ಸ್ಥಳಿಯರು ಕೊಟ್ಟ ಮಾಹಿತಿಯು ಅರಣ್ಯ ಇಲಾಖೆಯ ಗಮನಕ್ಕೆ ಬಂದ ತಕ್ಷಣ ಕಾರ್ಯಪ್ರವೃತ್ತರಾಗಿ ಕಾರ್ಯಾಚರಣೆಗೆ ಇಳಿದರು. ಚಿರತೆ ಸೆರೆ ಹಿಡಿಯಲು ವಿವಿಧ ತಯಾರಿ ನಡೆಸಿ ಕೊನೆಗೂ ಬಂಧಿಸಿದ್ದಾರೆ.

READ ALSO

ಸ್ಥಳಕ್ಕೆ ಎಸಿಎಫ್ ಆಸ್ಟೀನ್ ಪಿ. ಸೋನ್ಸ್, ರೇಂಜರ್ ರಾಘವೇಂದ್ರ, ಮಂಜುನಾಥ್, ಅಧಿಕಾರಿಗಳು, ಸಿಬ್ಬಂದಿಗಳು ಆಗಮಿಸಿ ಸೂಕ್ತ ಕ್ರಮ ಕೈಗೊಂಡಿದ್ದರು.

ಕಳೆದ ವಾರ ಕೈಕಂಬ ಬಳಿ ಮನೆಯೊಂದರ ಶೌಚಾಲಯ ದಲ್ಲಿ ಬಂಧಿಯಾಗಿತ್ತು. ಹಿಡಿಯುವ ಕೆಲವೇ ನಿಮಿಷಗಳಲ್ಲಿ ಅರಣ್ಯಾಧಿಕಾರಿಗಳ ಅಚಾತುರ್ಯದಿಂದಾಗಿ ತಪ್ಪಿಸಿಕೊಂಡಿತ್ತು. ಅದೇ ಚಿರತೆ ಇದೀಗ ಇಬ್ಬರ ಮೇಲೆ ದಾಳಿ ಮಾಡಿದೆ ಎನ್ನುವ ಅನುಮಾನ ಹುಟ್ಟಿದೆ.

ಇದೀಗ ಚಿರತೆಯ ಬಂಧನ ಬಳಿಕ ಸ್ಥಳಿಯರು ಚಿರತೆಯ ಭಯದಿಂದ ನಿರಾಳರಾಗಿದ್ದಾರೆ.