ಮಂಗಳೂರು: ಕೊರೊನಾ ಕಾರಣದಿಂದಾಗಿ ರಾತ್ರಿ ವೇಳೆ ಕಂಬಳಕ್ಕೆ ಅನುಮತಿ ನಿರಾಕರಣೆಯ ಹಿನ್ನೆಲೆಯಲ್ಲಿ ಹಗಲಲ್ಲಿಯೇ ಕಂಬಳ ನಡೆಸುವ ಬಗ್ಗೆ ಕಂಬಳ ಸಮಿತಿ ತೀರ್ಮಾನಿಸಿದೆ.
ಜಿಲ್ಲಾಧಿಕಾರಿಗಳ ಅಸಮ್ಮತಿಯ ಕಾರಣ ಹಗಲಲ್ಲೇ ಎರಡು ದಿನಗಳಲ್ಲಿ ಕಂಬಳ ನಡೆಸುವ ಬಗ್ಗೆ ದ.ಕ. ಜಿಲ್ಲಾ ಕಂಬಳ ಸಮಿತಿ ಶನಿವಾರ ನಡೆದ ಸಭೆಯಲ್ಲಿ ತೀರ್ಮಾನಿಸಿದೆ.
ಈ ಸಾಲಿನ ಮೊದಲ ಕಂಬಳ ಜ.30 ಮತ್ತು 31ರಿಂದ ಹೊಕ್ಕಾಡಿಗೋಳಿಯಲ್ಲಿ ವೀರ ವಿಕ್ರಮ ಜೋಡುಕರೆ ಕಂಬಳ ನಡೆಯಲಿದೆ. ಕೊನೆಯ ಕಂಬಳ ಮಾರ್ಚ್ 20ರಂದು ವೇಣೂರು ಪೆರ್ಮಡ ಸೂರ್ಯ ಚಂದ್ರ ಕಂಬಳ ನಡೆಯಲಿದೆ.
ಹೊಕ್ಕಾಡಿಗೋಳಿ (ಜ. 30, 31), ಐಕಳ ಬಾವ (ಫೆ. 6, 7), ವಾಮಂಜೂರು ತಿರುವೈಲುಗುತ್ತು (ಫೆ. 13, 14). ಮೂಡುಬಿದಿರೆ (ಫೆ. 20, 21), ಮಿಯ್ನಾರು (ಫೆ. 27, 28). ಬಂಗ್ರಕೂಳೂರು (ಮಾ. 6, 7), ವೇಣೂರು ಪೆರ್ಮುಡ (ಮಾ. 20, 21) ಕಂಬಳ ಸೇರಿದಂತೆ 7 ಕಂಬಳಗಳ ದಿನಾಂಕ ಘೋಷಿಸಲಾಯಿತು.
ಕಂಬಳ ಸಮಿತಿ ಅಧ್ಯಕ್ಷ ಪಿ.ಆರ್. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಮಿತಿಯ ಗೌರವಾಧ್ಯಕ್ಷರಾದ ಬಾರ್ಕೂರು ಶಾಂತಾರಾಮ ಶೆಟ್ಟಿ, ಕೊಳಕ್ಕೆ ಇರ್ವತ್ತೂರು ಭಾಸ್ಕರ ಎಸ್. ಕೋಟ್ಯಾನ್, ಗೌರವ ಸಲಹೆಗಾರರು, ಉಪಾಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.