ಅಳಿಯುವ ಕಾನನ… ಉಳಿಸುವ ಯಜಮಾನ.. ವನದೇವಿಯ ಪೋಷಣೆಗೆ ನಿಂತ ಪ್ರಕೃತಿ ಪುತ್ರ

🖊️• ದಿನೇಶ್ ಹೊಳ್ಳ ಸಹ್ಯಾದ್ರಿ ಸಂಚಯ (ರಿ)

ವನದೇವಿ ಅಳುತ್ತಿದ್ದಾಳೆ ಯಾಕೆಂದರೆ ಆಳುವ ಅರಸರು ಆಕೆಗೆ ಮಾನಸಿಕ ಹಿಂಸೆ ನೀಡುತ್ತಾ ಆಳುತ್ತಿದ್ದಾರೆ. ಅಡವಿಯ ಒಳಗಿಂದ ‘ ಭದ್ರವಾಗಿದ್ದ ನಾನು ಛಿದ್ರ ವಾಗುತ್ತಿದ್ದೇನೆ ‘ ಎಂಬ ಒಂದು ಕೂಗು ಕೇಳುತ್ತಿದೆ. ವನ ದೇವಿಯ ಈ ರೋದನಕ್ಕೆ ಕಿವಿಯಾಗಿ ತನ್ನ ಸ್ವಂತ ಜಾಗವನ್ನೇ ಅಡವಿಯನ್ನಾಗಿ ಮಾಡಲು ಹೊರಟವರು ನಿಜಕ್ಕೂ ಧನ್ಯರು. ಸಾಮಾನ್ಯವಾಗಿ ಒಂದಿಷ್ಟು ಸ್ವಂತ ಜಾಗ ಇದ್ದರೆ ಅದರಲ್ಲಿ ಹಣ ಮಾಡುವಂತಹ ಬೆಳೆ ಬೆಳೆಸುವ ವ್ಯಾವಹಾರಿಕ ದೃಷ್ಟಿ ಕೋನ ಇಡುವಂತ ಮನಸುಗಳು ಸಾಕಷ್ಟಿರಬಹುದು. ಆದರೆ ತನ್ನ ಸ್ವಂತ ಒಂದು ಎಕರೆ ಗಿಂತಲೂ ಹೆಚ್ಚು ಜಾಗದಲ್ಲಿ ಒಂದು ಸುಂದರವಾದ ಹಸಿರು ವನವನ್ನು ನಿರ್ಮಾಣ ಮಾಡುವ ತನ್ನ ಬಹುಕಾಲದ ವಿಶಿಷ್ಟ ಕನಸನ್ನು ನನಸು ಮಾಡಿ ಸಾಧಿಸಿ ತೋರಿಸಿದವರು ನಮ್ಮ ಆತ್ಮೀಯ ಮಿತ್ರ, ಪ್ರಕೃತಿ ಪುತ್ರ ಬೆಳ್ತಂಗಡಿ ಮುಂಡಾಜೆ ಯ ಸಚಿನ್ ಭಿಡೆ.


ದೇಶ ಸೇವೆ, ಪ್ರಕೃತಿ ಸೇವೆ, ತಾಯಿ ಸೇವೆ ಇವೆಲ್ಲವನ್ನೂ ಒಂದೇ ಚೌಕಟ್ಟಿನ ಒಳಗೆ ಮಾಡಿ ಅದು ನಿರಂತರ ಈ ದೇಶಕ್ಕೆ, ಪ್ರಕೃತಿಗೆ ಕೊಡುಗೆ ನೀಡುವಂತಾಗಬೇಕು ಎಂಬ ಸಚಿನ್ ರವರ ಪರಿಕಲ್ಪನೆಗೆ ಹೊಳೆದಾಗ ಅಭಿವ್ಯಕ್ತ ಗೊಂಡದ್ದು ‘ ಕಾರ್ಗಿಲ್ ವನ ‘ ಎಂಬ ಅಡವಿ ನಿರ್ಮಾಣ. ಕಾರ್ಗಿಲ್ ಹುತಾತ್ಮರ ( ಜೂನ್ 26 ಕಾರ್ಗಿಲ್ ಹುತಾತ್ಮರ ದಿನಾಚರಣೆ ) ಸ್ಮರಣಾರ್ಥ ತನ್ನ ತೋಟದ ಸಮೀಪದಲ್ಲೇ ಇದ್ದ ಜಾಗದಲ್ಲಿ ಕಾರ್ಗಿಲ್ ವನ ಎಂಬ ಕಾನನದ ಕನಸು ಇಂದು ಚಿಗುರೊಡೆದಿದೆ. ಈ ಜಾಗ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಇದ್ದು ಬೆಟ್ಟ ಮೇಲಿನಿಂದ ಕೆಳಗಡೆ ಕಣಿವೆ ಪ್ರದೇಶದಲ್ಲಿ ವರ್ಷ ಪೂರ್ತಿ ನೀರು ಲಭಿಸುವಂತಹ ಗಿಡ, ಮರಗಳ ಬೆಳವಣಿಗೆಗೆ ಪೂರಕವಾದ ಸ್ಥಳ. ಇದರಲ್ಲಿ ಕಮರ್ಷಿಯಲ್ ಬೆಳೆ ಬೆಳೆಸಿ ಸಚಿನ್ ಗೆ ಬೇಕಾದಷ್ಟು ಹಣ ಮಾಡಲು ಸಾಕಷ್ಟು ಅವಕಾಶಗಳು ಇತ್ತು. ಆದರೂ ತನ್ನಿಂದ ಈ ಪ್ರಕೃತಿಗೆ, ಈ ದೇಶಕ್ಕೆ ಏನಾದರೂ ಕೊಡುಗೆ ಸಿಗುವಂತಾಗಬೇಕು ಎಂಬ ಉದ್ದೇಶದಿಂದ ಸಚಿನ್ ಈ ಕಾರ್ಗಿಲ್ ವನ ನಿರ್ಮಾಣದ ಕಡೆ ಗುರಿ ಸಾಧಿಸಿದರು.


ಇಂದು ಈ ಕಾರ್ಗಿಲ್ ವನ ನಿರ್ಮಾಣದ ಉದ್ಘಾಟನೆಗೆ ಸಚಿನ್ ಗೆ ಯಾವ ರಾಜಕಾರಣಿಗಳೂ, ಯಾವ ಅಧಿಕಾರಿಗಳೂ, ಯಾವ ಪೂರ್ವ ಗೃಹ ಪೀಡಿತ ಹಿತಾಸಕ್ತಿ ಗಳೂ ಕಾಣದೆ ಅವರಿಗೆ ಕಂಡದ್ದು ಈ ದೇಶವನ್ನು ರಾತ್ರಿ, ಹಗಲು ತಮ್ಮ ಜೀವದ ಹಂಗು ತೊರೆದು ಗಡಿಯಲ್ಲಿ ಶತ್ರುಗಳೊಂದಿಗೆ ಸೆಣಸಾಡುವ ನಮ್ಮ ಗಡಿಯನ್ನು ಕಾಯುವ ದೇಶದ ನೈಜ ಸೆಲೆಬ್ರಿಟಿ ಗಳಾಗಿರುವ ನಮ್ಮ ಸೈನಿಕರು. 9 ಜನ ಮಿಲಿಟರಿ ಅಧಿಕಾರಿ, ಸೈನಿಕರು ಇಂದು ‘ ಕಾರ್ಗಿಲ್ ವನ ‘ ದ ಲ್ಲಿ ಗಿಡ ಗಳನು ನೆಟ್ಟು ಇದರ ಉದ್ಘಾಟನೆ ಮಾಡಿರುತ್ತಾರೆ.

ಸಚಿನ್ ರವರ ತಾಯಿಯೇ ಸೈನಿಕರಿಗೆ ಗಿಡಗಳನ್ನು ಹಸ್ತಾಂತರಿಸಿರುವುದೂ ಈ ಕಾರ್ಯಕ್ರಮದ ಇನ್ನೊಂದು ವಿಶೇಷ ಮೆರುಗು. ಮನೆಯಲ್ಲಿ ನಮ್ಮ ಹೆತ್ತ ತಾಯಿಯ ಪ್ರತೀ ರೂಪವಾಗಿ ನಮ್ಮನ್ನು ಆರೈಕೆ ಮಾಡುವ ಇನ್ನೊಂದು ತಾಯಿಯೇ ಪ್ರಕೃತಿ ತಾಯಿ. ಬೆಳ್ತಂಗಡಿ ನಿವೃತ್ತ ಸೈನಿಕ ಸಂಘದ ಗೌರವ ಅಧ್ಯಕ್ಷರಾದ ಎಂ. ವೀ. ಭಟ್, ಅಧ್ಯಕ್ಷರಾದ ಕೃಷ್ಣ ಭಟ್, ಗಡಿ ಭದ್ರತಾ ಪಡೆಯ ಸೈನಿಕರಾಗಿ ರುವ ಜಗನ್ನಾಥ್ ಶೆಟ್ಟಿ, ಹರೀಶ್ ರೈ, ರಾಮ್ ಭಟ್, ಸುನಿಲ್ ಶೆಣೈ, ಶ್ರೀಕಾಂತ್ ಗೋರೆ, ಉಮೇಶ್ ಬಂಗೇರ, ಪ್ರಸನ್ನ ಇವರೆಲ್ಲಾ ಗಿಡಗಳನ್ನು ನೆಟ್ಟು ಕಾರ್ಗಿಲ್ ವನದ ಹಸಿರು ಹೊದಿಕೆ ಹಾಸಿರುವರು. ಸಚಿನ್ ರವರು ಯಾವುದೇ ಕಾರಣಕ್ಕೂ ಈ ವನಕ್ಕೆ ತೊಂದರೆ ಆಗದಂತೆ, ಬಾಡಿ ಹೋಗದಂತೆ , ಮಕ್ಕಳಂತೆ ನೋಡಿಕೊಳ್ಳುತ್ತೇನೆ ಎಂದು ಪ್ರತಿಜ್ಞೆ ಮಾಡಿದಾಗ ಸೈನಿಕರು ಕೂಡಾ ವನ ಸಂರಕ್ಷಣೆ ಆಗುವಂತೆ ನಾವು ಕೂಡಾ ವನದ ಸಂಪರ್ಕ ಇಟ್ಟು ಕೊಳ್ಳುವ ಭರವಸೆ ನೀಡಿದ್ದು ಇದು ಒಂದು ರೀತಿಯಲ್ಲಿ ಕಾಡು ಬೆಳವಣಿಗೆಗೆ ಇಟ್ಟ ಧನಾತ್ಮಕ ಪೀಠಿಕೆ. ಅಂತೂ ಸಚಿನ್ ರವರ ಈ ಪ್ರಯತ್ನ ನಿಜಕ್ಕೂ ನಿಸರ್ಗ ಮಾತೆಯ ಹಸಿರು ಹೊದಿಕೆ ಗೆ ಒಂದು ಒಳ್ಳೆಯ ಪ್ರಯತ್ನ ಮತ್ತು ಇನ್ನು 4 ರಿಂದ 5 ವರ್ಷಗಳಲ್ಲಿ ಈ ಗಿಡಗಳು ಬೆಳೆದು ಒಂದು ಸುಂದರ ವನ ಆಗಿ ಈ ದೇಶ ಮತ್ತು ಪ್ರಕೃತಿಗೆ ಒಳ್ಳೆಯ ಕೊಡುಗೆ ಆಗಲಿದೆ. ಇದು ಶ್ಲಾಘನೀಯ ಮತ್ತು ಎಲ್ಲರಿಗೂ ಪ್ರೆರಣೀಯ…ಜೈ ಜವಾನ್ “ಜೈ ಪ್ರಕೃತಿ ಮಾತೆ”

Spread the love
  • Related Posts

    ನಾಡಿನೆಲ್ಲೆಡೆ ಗಣಪನ ಹಬ್ಬದ ಸಡಗರ ಸಂಭ್ರಮ ಬೆಳ್ತಂಗಡಿ ತಾಲೂಕಿನಾದ್ಯಂತ 2026ರಲ್ಲಿ ವಿವಿಧೆಡೆ ಆಚರಿಸಲ್ಪಟ ಗಣಪನ ನೋಡಬನ್ನಿ

    ನಾಡಿನೆಲ್ಲೆಡೆ ಗಣಪನ ಹಬ್ಬದ ಸಡಗರ ಸಂಭ್ರಮ 2026ರಲ್ಲಿ ವಿವಿಧ ಗಣಪನ ಅಲಂಕಾರ ನೋಡೋಣ ಬನ್ನಿ ಶ್ರೀ ಕ್ಷೇತ್ರ ಸೌತಡ್ಕ ಮಹಾಗಣಪತಿ ಸನ್ನಿಧಿಯಲ್ಲಿ ಗಣಪನ ಅಲಂಕಾರ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮುಂಡಾಜೆ ಇದರ ವತಿಯಿಂದ ಮುಂಡಾಜೆ ದೇವಸ್ಥಾನದಲ್ಲಿ ಆರಾಧಿಸಲ್ಪಟ್ಟ ಸುವರ್ಣ ಸಂಭ್ರಮದ…

    Spread the love

    ಕಡಿರುದ್ಯಾವರ: ಗ್ರಾಮೀಣ ರಸ್ತೆಯಲ್ಲಿ ಮರ ಸಾಗಾಟದ ಲಾರಿಗಳ ಹಾವಳಿ — ರಸ್ತೆ ಹಾಳಾಗುತ್ತಿರುವ ಆರೋಪ

    ಕಾನರ್ಪ ನೂಜಿ ರಸ್ತೆಯಲ್ಲಿ ತಡರಾತ್ರಿ ರಸ್ತೆ ಮಧ್ಯೆ ಲಾರಿ ಬಾಕಿ; ಸ್ಥಳೀಯರಿಂದ ಪ್ರತಿಭಟನೆ ಕಡಿರುದ್ಯಾವರ: ಗ್ರಾಮೀಣ ಪ್ರದೇಶದ ರಸ್ತೆಗಳಲ್ಲಿ ನಿರಂತರವಾಗಿ ಮರ ಸಾಗಾಟದ ಲಾರಿಗಳು ಸಂಚರಿಸುತ್ತಿರುವುದರಿಂದ ರಸ್ತೆಗಳು ಸಂಪೂರ್ಣ ಹಾಳಾಗುತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕಾನರ್ಪದಲ್ಲಿ ತಡರಾತ್ರಿ ಮರ ಸಾಗಾಟ ಮಾಡುತ್ತಿದ್ದ…

    Spread the love

    You Missed

    ಆಟಿಡೊಂಜಿದಿನ ಧರ್ಮಸ್ಥಳ ಕನ್ಯಾಡಿ 2

    • By admin
    • September 15, 2026
    • 12 views

    ನಾಡಿನೆಲ್ಲೆಡೆ ಗಣಪನ ಹಬ್ಬದ ಸಡಗರ ಸಂಭ್ರಮ ಬೆಳ್ತಂಗಡಿ ತಾಲೂಕಿನಾದ್ಯಂತ 2026ರಲ್ಲಿ ವಿವಿಧೆಡೆ ಆಚರಿಸಲ್ಪಟ ಗಣಪನ ನೋಡಬನ್ನಿ

    • By admin
    • September 15, 2026
    • 22 views
    ನಾಡಿನೆಲ್ಲೆಡೆ ಗಣಪನ ಹಬ್ಬದ ಸಡಗರ ಸಂಭ್ರಮ ಬೆಳ್ತಂಗಡಿ ತಾಲೂಕಿನಾದ್ಯಂತ 2026ರಲ್ಲಿ ವಿವಿಧೆಡೆ ಆಚರಿಸಲ್ಪಟ ಗಣಪನ ನೋಡಬನ್ನಿ

    ಕಡಿರುದ್ಯಾವರ: ಗ್ರಾಮೀಣ ರಸ್ತೆಯಲ್ಲಿ ಮರ ಸಾಗಾಟದ ಲಾರಿಗಳ ಹಾವಳಿ — ರಸ್ತೆ ಹಾಳಾಗುತ್ತಿರುವ ಆರೋಪ

    • By admin
    • September 13, 2026
    • 12 views
    ಕಡಿರುದ್ಯಾವರ: ಗ್ರಾಮೀಣ ರಸ್ತೆಯಲ್ಲಿ ಮರ ಸಾಗಾಟದ ಲಾರಿಗಳ ಹಾವಳಿ — ರಸ್ತೆ ಹಾಳಾಗುತ್ತಿರುವ ಆರೋಪ

    ಪದ್ಮುಂಜ: ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿ ವತಿಯಿಂದ ಮೊಸರು ಕುಡಿಕೆ ಉತ್ಸವ, ಸಾಧಕರಿಗೆ ಸನ್ಮಾನ,ಬಹುಮಾನ ವಿತರಣೆ ಕಾರ್ಯಕ್ರಮ

    • By admin
    • September 13, 2026
    • 15 views
    ಪದ್ಮುಂಜ: ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿ ವತಿಯಿಂದ ಮೊಸರು ಕುಡಿಕೆ ಉತ್ಸವ, ಸಾಧಕರಿಗೆ ಸನ್ಮಾನ,ಬಹುಮಾನ ವಿತರಣೆ ಕಾರ್ಯಕ್ರಮ

    ಕೊಕ್ಕಡ ಸಮೀಪ ಭೀಕರ ಅಪಘಾತ: ಸರ್ಕಾರಿ ಬಸ್–ಕಾರು ಡಿಕ್ಕಿ

    • By admin
    • September 12, 2026
    • 12 views
    ಕೊಕ್ಕಡ ಸಮೀಪ ಭೀಕರ ಅಪಘಾತ: ಸರ್ಕಾರಿ ಬಸ್–ಕಾರು ಡಿಕ್ಕಿ

    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿರುದ್ಧ ದ ಆರೋಪ ಆಧಾರರಹಿತ: ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ವಜಾ

    • By admin
    • September 8, 2026
    • 16 views
    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿರುದ್ಧ ದ ಆರೋಪ ಆಧಾರರಹಿತ: ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ವಜಾ