ಮಾತೃ ಭಾಷೆಯ ಮೇಲಿನ ಪ್ರೀತಿ ಅಭಿಮಾನ ಸದಾ ಜಾಗೃತವಾಗಿರಲಿ : ತಾರಾನಾಥ ರೈ ಪಡ್ಡಂಬೈಲು ಗುತ್ತು

ಕಾಟುಕುಕ್ಕೆ: ಒಡಿಯೂರು ಶ್ರೀಗಳ ಷಷ್ಠ್ಯಬ್ದ ಸಂಭ್ರಮದ ಜ್ಞಾನವಾಹಿನಿ ಪ್ರಯುಕ್ತ ಕಾಟುಕುಕ್ಕೆ ಘಟಕ ಸಮಿತಿ ಮತ್ತು ಶ್ರೀ ಸುಬ್ರಹ್ಮಣ್ಯೇಶ್ವರ ಮಹಿಳಾ ಮಂಡಳಿಯ ನೇತೃತ್ವದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಕೇರಳ ತುಳು ಅಕಾಡೆಮಿಯ ಸಹಯೋಗದೊಂದಿಗೆ ಜೈ ತುಳುನಾಡ್ (ರಿ) ಸಂಘಟನೆಯ ಕಾಸರಗೋಡು ಘಟಕದಿಂದ ಕಾಟುಕುಕ್ಕೆಯಲ್ಲಿ ತುಳು ಲಿಪಿ ಕಲಿಕಾ ತರಬೇತಿಗೆ ಚಾಲನೆ ನೀಡಿದೆ.


ತರಬೇತಿಯನ್ನು ದೀಪ ಪ್ರಜ್ವಲಿಸುವ ಮೂಲಕ ಶ್ರೀ ಸುಬ್ರಾಯ ದೇವಸ್ಥಾನದ ಆಡಳಿತದ ಮಂಡಳಿ ಚೇರ್ಮೆನ್ ನಾರಾಯಣನ್. ಕೆ ಇವರು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಷಷ್ಠ್ಯಬ್ದ ಸಂಭ್ರಮ ಸಮಿತಿ ಕಾಟುಕುಕ್ಕೆಯ ಅಧ್ಯಕ್ಷರಾದ ತಾರಾನಾಥ ರೈ ಪಡ್ಡಂಬೈಲು ಗುತ್ತು ಅವರು ಮಾತನಾಡಿ ಮಾತೃ ಭಾಷೆಯ ಮೇಲಿನ ಪ್ರೀತಿ ಅಭಿಮಾನ ಸದಾ ಜಾಗೃತವಾಗಿರಲಿ ಎಂದರಲ್ಲದೆ,ಈ ಭಾಗದಲ್ಲಿ ಇದು ಪ್ರಥಮ ತರಗತಿಯಾಗಿದೆ. ಸುಬ್ರಾಯನ ಅನುಗ್ರಹದೊಂದಿಗೆ ಹೆಚ್ಚಿನ ಸಂಖ್ಯೆಯ ಜನರು ಇದರ ಸದುಪಯೋಗವನ್ನು ಪಡೆದುಕೊಳ್ಳಲಿ. ಅಲ್ಲದೇ ನಮ್ಮೂರಿನ ಮಾತೆಯರು ಮಹಿಳಾ ಮಂಡಳಿಯ ಮೂಲಕ ಇಂತಹಾ ಸಮಾಜಮುಖಿ ಚಟುವಟಿಕೆಯಲ್ಲಿ ಸಕ್ರಿಯರಾಗಿರುವುದು ನಿಜಕ್ಕೂ ಅಭಿಮಾನ ಎಂದರು.

READ ALSO

ಹಲವು ಊರುಗಳಲ್ಲಿ ತುಳು ಲಿಪಿ ಕಲಿಸಿಕೊಡುವುದಕ್ಕೆ ಹೋಗುತ್ತಿದ್ದೆ. ನನ್ನೂರಿನಲ್ಲಿ ಒಂದು ತರಗತಿಯನ್ನು ನಡೆಸಬೇಕು ಎನ್ನುವುದು ನನ್ನ ಕನಸಾಗಿತ್ತು. ಅದು ಇಂದು ನನಸಾಗಿದೆ. • ಕಾರ್ತಿಕ್ KN ಇಂಜಿನಿಯರಿಂಗ್ ವಿದ್ಯಾರ್ಥಿ
ವಿವೇಕಾನಂದ ಕಾಲೇಜು ಪುತ್ತೂರು.

ಶ್ರೀ ಸುಬ್ರಹ್ಮಣ್ಯೇಶ್ವರ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ಹರಿಪ್ರಸಾದ ಶೆಟ್ಟಿಯವರು ಕಾರ್ಯಕ್ರಮಕ್ಕೆ ಶುಭ ಕೋರಿದರು. ಮಹಿಳಾ ಮಂಡಳಿಯ ಅಧ್ಯಕ್ಷೆ ವಾಣಿ ಜಿ. ಶೆಟ್ಟಿಯವರು ಸ್ವಾಗತಿಸಿದರೆ, ಮಲ್ಲಿಕಾ ಜೆ. ರೈ ಅವರು ಧನ್ಯವಾದ ಸಮರ್ಪಿಸಿದರು. ಸಾಹಿತಿ ರಾಜಶ್ರೀ ಟಿ ರೈ ಪೆರ್ಲ ನಿರೂಪಣೆ ಮಾಡಿದರು. ಸಭಾ ಕಾರ್ಯಕ್ರಮದ ನಂತರ ಜೈ ತುಳುನಾಡ್ (ರಿ) ಸಂಘಟನೆಯ ಕಾಸರಗೋಡು ಘಟಕದ ಕಾರ್ತಿಕ್ ಮತ್ತು ಜಗನ್ನಾಥ ಇವರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಕಲಿಕಾಪೇಕ್ಷಿಗಳಿಗೆ ತರಗತಿಯನ್ನು ನಡೆಸಿಕೊಟ್ಟರು.