ಹಾಸನ : ರಾಜ್ಯದಲ್ಲಿ ಕೊರೋನಾ ಆಸ್ವೀಜ ಮಾಸ, ಕಾರ್ತಿಕ ಮಾಸದಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದ್ದು, ಹಳ್ಳಿಗಳಲ್ಲಿ ಈ ಹೆಮ್ಮಾರಿ ಮರಣ ಮೃದಂಗ ಭಾರಿಸಲಿದೆ ಎಂದು ಕೋಡಿ ಮಠದ ಸ್ವಾಮೀಜಿ ಶಾಕಿಂಗ್ ಭವಿಷ್ಯ ನುಡಿದಿದ್ದಾರೆ.
ಇನ್ನೂ ಕೆಲ ತಿಂಗಳುಗಳ ಕಾಲ ಕೊರೊನಾ ಅಟ್ಟಹಾಸ ಹೀಗೆ ಇರಲಿದ್ದು, ಗಾಳಿಯಲ್ಲಿ ಸಂಚಾರ ಮಾಡೋದು ಕಡಿಮೆ. ಇನ್ನು ಜನರು ಸುರಕ್ಷತೆ ಕಾಪಾಡಿದರೆ ಕೊರೋನಾ ದಿಂದ ಪಾರಾಗಬಹುದು. ಹಾಗಾಗಿ ಭಯ, ಆತಂಕ ಬಿಟ್ಟು ಸರ್ಕಾರದ ಜೊತೆ ಕೈಜೋಡಿಸಿ ಎಂಬುದಾಗಿ ಕೋಡಿಮಠ ಶ್ರೀಗಳಾದ ಶಿವಾನಂದ ಶಿವಯೋಗಿ ಮಹಾಸ್ವಾಮಿಗಳು ಶಾಕಿಂಗ್ ಭವಿಷ್ಯ ನುಡಿದಿದ್ದಾರೆ.
ಕಳೆದ ಏಪ್ರಿಲ್ 22, 2020ರಂದು ಕೋಡಿಮಠ ಶ್ರೀಗಳಾದ ಶಿವಾನಂದ ಶಿವಯೋಗಿ ಮಹಾಸ್ವಾಮಿಗಳು, ಸಿರಿವಂತ ಮಗನುಟ್ಟಿ ಆಳುವನು ಮುನಿಪುರವ, ಯುದ್ಧವಿಲ್ಲದೆ ನುಡಿಯೆ ಪುರವೆಲ್ಲ ಕೂಳಾದೀತು ಎಂಬುದಾಗಿ ಭವಿಷ್ಯ ನುಡಿದಿದ್ದರು. ಸಿರಿವಂತನ ಮಗ ಎಂದರೆ ಟ್ರಂಪ್, ಮುನಿಪುರ ಎಂದರೆ ಅಮೇರಿಕಾ. ಅಮೇರಿಕಗೆ ಇನ್ನೂ ತೀವ್ರ ಗಂಡಾಂತರ. ಯುದ್ಧವಿಲ್ಲದೇ ಜನರು ಮಡಿಯುತ್ತಾರೆ. ಭಾರತಕ್ಕಿಲ್ಲ ಮಹಾಮಾರಿ ಕೊರೋನಾದಿಂದ ಭಾರೀ ಗಂಡಾಂತರವಿಲ್ಲ. ಮೇ ಅಂತ್ಯಕ್ಕೆ ಕೊರೋನಾ ಕಂಟಕ ಕೊನೆಯಾಗಲಿದೆ. ಕರ್ನಾಟಕಕ್ಕೆ ಯಾವುದೇ ಹೆಚ್ಚಿನ ತೊಂದರೆ ಇಲ್ಲ. ಜನರಿಗೆ, ಕೆಲ ಮಂತ್ರಿಗಳಿಗೆ ಕಂಟಕ ಆಗಲಿದೆ. ಅಮೇರಿಕಗೆ ಇನ್ನೂ ತೀವ್ರ ಗಂಡಾಂತರ ಎದುರಿಸಲಿದೆ ಎಂಬುದಾಗಿ ಭವಿಷ್ಯ ನುಡಿದಿದ್ದರು.
ಭಾರತಕ್ಕೆ, ಕರ್ನಾಟಕಕ್ಕೆ ಮಹಾಮಾರಿ ಕೊರೋನಾದಿಂದ ಹೆಚ್ಚಿನ ಸಮಸ್ಯೆ ಉಂಟಾಗೋದಿಲ್ಲ. ಅಮೇರಿಕಾಕ್ಕೆ ಕೊರೊನಾ ಕಂಟಕ ಸದ್ಯಕ್ಕೆ ಬಿಡೋದಿಲ್ಲ. ತೀವ್ರವಾಗಿ ಸಂಕಷ್ಟ ಕೊರೋನಾದಿಂದ ಉಂಟಾಗಲಿದೆ ಎಂಬುದಾಗಿ ಕೋಡಿಮಠದ ಶ್ರೀಗಳು ಭವಿಷ್ಯ ನುಡಿದಿದ್ದರು. ಇದೀಗ ರಾಜ್ಯದಲ್ಲಿ ಕೊರೋನಾ ಆಸ್ವೀಜ ಮಾಸ, ಕಾರ್ತಿಕ ಮಾಸದಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದ್ದು, ಹಳ್ಳಿಗಳಲ್ಲಿ ಈ ಹೆಮ್ಮಾರಿ ಮರಣ ಮೃದಂಗ ಭಾರಿಸಲಿದೆ ಎಂದು ಕೋಡಿ ಮಠದ ಸ್ವಾಮೀಜಿ ಶಾಕಿಂಗ್ ಭವಿಷ್ಯ ನುಡಿದಿದ್ದಾರೆ. ಇದು ನಿಜವಾಗುತ್ತಾ ಎಂಬುದಾಗಿ ಕಾದು ನೋಡಬೇಕಿದೆ.