ಮಂಗಳೂರು: ನಗರದಲ್ಲಿ ಜೋರುಗಾಳಿ ಸಹಿತ ಬಿರುಸಿನ ಮಳೆಯಾಗುತ್ತಿದ್ದು, ಕುಂಟಿಕಾನ ಬಳಿ ಇರುವ ಫ್ಲ್ಯಾಟ್ ಸಮೀಪದ ಗುಡ್ಡ ಕುಸಿದಿದೆ. ಹೀಗಾಗಿ ಫ್ಲ್ಯಾಟ್ ನಲ್ಲಿರುವ ಕೆಲವು ಮಂದಿಯನ್ನು ಈಗಾಗಲೇ ಸ್ಥಳಾಂತರ ಮಾಡಲಾಗಿದೆ.
ಮಣ್ಣು ಕುಸಿದು ಮಣ್ಣಿನಡಿ ಸುಮಾರು 10 ಕ್ಕೂ ಅಧಿಕ ಕಾರುಗಳು ಹೂತು ಹೋಗಿರುವ ಶಂಕೆ ಉಂಟಾಗಿದೆ.
ಅಗ್ನಿ ಶಾಮಕ ದಳ, ಸ್ಥಳೀಯ ಪೊಲೀಸರು ಘಟನೆ ನಡೆದ ಸ್ಥಳಕ್ಕೆ ಆಗಮಿಸಿದ್ದು ಮಂಗಳೂರು ತಹಶೀಲ್ದಾರ್ ಗುರುಪ್ರಸಾದ್, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಅವರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ