ಕೊರೋನಾದಿಂದಾಗಿ ಭೂ ಮಾಲೀಕ ಬೆಂಗಳೂರಿನಲ್ಲಿ ಬಾಕಿ, ಜಾಗ ಒತ್ತುವರಿ ಮಾಡಿ ಅಕ್ರಮ ಕಟ್ಟಡ ಕಟ್ಟಲು ಮುಂದಾದ ಸ್ಥಳೀಯ ನಿವಾಸಿ

ಎಂಜಿರ: ಕೊರೋನಾ ಲಾಕ್ ಡೌನ್ ನಿಂದಾಗಿ ಬೆಂಗಳೂರಿನಲ್ಲಿ ವಾಸವಿರುವ ಮೂಲತಃ ಬೆಳ್ತಂಗಡಿ ತಾಲೂಕಿನ ರೆಖ್ಯಾ ಗ್ರಾಮದ ಎಂಜಿರದ ಪ್ರದೀಪ್ ಭಟ್ ರವರ ಜಾಗವನ್ನು ಖಾಸಗಿ ವ್ಯಕ್ತಿಯೋರ್ವರು ಅಕ್ರಮವಾಗಿ ಸ್ವಾದೀನ ಪಡಿಸಿ ಜಾಗದಲ್ಲಿ ಅನಧಿಕೃತ ವಾಣಿಜ್ಯ ಕಟ್ಟಡ ಮತ್ತು ಅದರೊಂದಿಗೆ ಮನೆಯನ್ನು ನಿರ್ಮಿಸಲು ಪ್ರಯತ್ನಿಸಿದ ಘಟನೆ ವರದಿಯಾಗಿದೆ.

ರೆಖ್ಯಾ ಗ್ರಾಮದ ಎಂಜಿರದ ಪ್ರದೀಪ್ ಭಟ್ ರವರು ಕೊರೋನಾ ಸಮಸ್ಯೆಯಿಂದ ಬೆಂಗಳೂರಿನಲ್ಲಿ ಬಾಕಿಯಾಗಿದ್ದು ಈ ಸಮಯದ ಲಾಭ ಪಡೆಯಲು ಉದ್ದೇಶಿಸಿದ್ದ ಸ್ಥಳೀಯ ನಿವಾಸಿ ಬಾಲಕೃಷ್ಣ ಕೆ ರವರು ಮತ್ತು ಇತರರು ಪ್ರದೀಪ್ ಭಟ್ ರವರ ಜಾಗವನ್ನು ಅಕ್ರಮವಾಗಿ ಸ್ವಾದೀನ ಪಡಿಸಿ ಜಾಗದಲ್ಲಿ ಅನಧಿಕೃತ ವಾಣಿಜ್ಯ ಕಟ್ಟಡ ನಿರ್ಮಿಸಲು ಮುಂದಾಗಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

READ ALSO

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಕ್ಕಡ ಹೋಬಳಿಯ ಕಂದಾಯನಿರೀಕ್ಷಕರು ನೀಡಿದ ವರದಿಯಂತೆ ಸೂಕ್ತ ಕ್ರಮಕೈಗೊಳ್ಳಲು ಸ್ಥಳೀಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಕಾರ್ಯನಿರ್ವಾಹಕ ಇಂಜಿನಿಯರ್ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಂಗಳೂರು ಇವರಿಗೆ ಬೆಳ್ತಂಗಡಿ ತಹಶೀಲ್ದಾರ್ ಸೂಚಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 75ರ ಮಾರ್ಜಿನ್ ನಲ್ಲೆ ಬರುವ ರಸ್ತೆ ಪರಂಬೋಕು ಜಾಗದಲ್ಲಿ ವಿಶ್ವನಾಥ ಕಟ್ಟಡ ನಿರ್ಮಿಸುತ್ತಿರುವ ಬಗ್ಗೆ ಈ ಹಿಂದೆಯೇ ಸಾರ್ವಜನಿಕರಿಂದ ಅನೇಕ ಬಾರಿ ಕಂದಾಯ ಇಲಾಖೆಗೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ದೂರು ದಾಖಲಾಗಿತ್ತು. ಈ ಕುರಿತು ಸಂಬಂಧಪಟ್ಟ ಇಲಾಖೆಗಳಿಂದ ನಿರ್ಮಾಣ ಕಾರ್ಯ ಸ್ಥಗಿತ ಗೊಳಿಸಲು ನೋಟಿಸ್ ನೀಡಿದರು ಕ್ಯಾರೇ ಎನ್ನದೆ ವಿಶ್ವನಾಥ ತನ್ನ ಕೆಲಸಗಳನ್ನು ಸರಾಗವಾಗಿ ಮಾಡುತ್ತಿದ್ದರು ಎನ್ನಲಾಗಿದೆ.

ಈ ಬಗ್ಗೆ ಪ್ರಕರಣವನ್ನು ಪರಿಶೀಲಿಸಿ ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಬೆಳ್ತಂಗಡಿ ಕಾರ್ಯನಿರ್ವಾಹಕ ಅಧಿಕಾರಿಯವರಿಗೆ ದ.ಕ ಜಿಲ್ಲಾ ಪಂಚಾಯತ್ ಮುಖ್ಯ ಕಕಾರ್ಯನಿರ್ವಾಹಕ ಅಧಿಕಾರಿ ಸೂಚಿಸಿದ್ದಾರೆ.

ಜಾಗದ ಮಾಲೀಕರಿಗೆ ಬೆದರಿಕೆ ಕರೆ !!
ಬೆಂಗಳೂರಿನಲ್ಲಿ ವಾಸವಿರುವ ಮಾಲೀಕರು ಈ ಕುರಿತು ಅನೇಕ ಬಾರಿ ಬಾಲಕೃಷ್ಣರ ಜೊತೆ ಸಂವಾದ ನಡೆಸಿದಾಗಲೂ ಮಾಲೀಕರಿಗೆ ದೂರವಾಣಿಯಲ್ಲಿ ಜೀವ ಬೆದರಿಕೆ ನೀಡಿದ್ದು ಮತ್ತು ಸ್ಥಳೀಯ ಉದ್ಯಮಿಯೊಬ್ಬರಿಂದ ಕರೆ ಮಾಡಿಸಿ ಜಾಗವನ್ನು ಬಾಲಕೃಷ್ಣನಿಗೆ ಬಿಟ್ಟುಕೊಡುವಂತೆ ಧಮ್ಕಿ ಹಾಕಿದ ಘಟನೆ ಕೂಡ ನಡೆದಿದೆ ಎಂದು ತಿಳಿದು ಬಂದಿದೆ.