ಶಿರೂರು ಶ್ರೀಗಳ ಸಂಸ್ಮರಣೆಯನ್ನು ಸರಳ ರೀತಿಯಲ್ಲಿ ಆಚರಿಸೋಣ: ಕೇಮಾರು ಶ್ರೀಗಳಿಂದ ಕರೆ

ಉಡುಪಿ: ಜುಲೈ19 ರಂದು ಜರಗಲಿರುವ ಉಡುಪಿ
ಶ್ರೀ ಶಿರೂರು ಮಠದ ಶ್ರೀ ಲಕ್ಷ್ಮೀವರತೀರ್ಥ
ಶ್ರೀಪಾದರ ಎರಡನೇ ವರ್ಷದ ಕೃಷ್ಣೈಖ್ಯ ದಿನವನ್ನು ಈ ಭಾರಿ ಸರಳ ರೀತಿಯಲ್ಲಿ ಆಯೋಜಿಸಬೇಕೆಂದು ಕೇಮಾರು ಶ್ರೀಪಾದರು ಹಾಗೂ ಅಭಿಮಾನಿ ಬಳಗದವರು ಶ್ರೀ ಶಿರೂರು ಭಕ್ತವೃಂದಕ್ಕೆ ಕರೆ ನೀಡಿದ್ದಾರೆ.

ಕೇಮಾರು ಶ್ರೀ

ನಿರಂತರ 48 ವರ್ಷಗಳ ಕಾಲ ಶ್ರೀಕೃಷ್ಣದೇವರಿಗೆ ಪೂಜೆ ಸಲ್ಲಿಸಿ,ಮೂರು ಪರ್ಯಾಯಗಳನ್ನು ಯಶಸ್ವಿಯಾಗಿ ಪೂರೈಸಿ ಕೃಷ್ಣಮಠ ಹಾಗೂ ಸಮಾಜಕ್ಕೆ ಅಪಾರ ಕೊಡುಗೆ ಸಲ್ಲಿಸಿರುವ ಶ್ರೀ ಮುಖ್ಯಪ್ರಾಣದೇವರ ಅನನ್ಯ ಉಪಾಸಕ, ಉಡುಪಿ ಶ್ರೀ ಶಿರೂರು ಮಠದ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರು 2018ರ ಜುಲೈ19ರಂದು ಹರಿಪಾದ ಸೇರಿದ್ದರು.

ಕಳೆದ ಎರಡು ವರ್ಷಗಳಲ್ಲಿ ಬೆಂಗಳೂರು,ಉಡುಪಿ, ಸಿಮಂತೂರು, ಕೇಮಾರು ಸೇರಿದಂತೆ ನಾಡಿನ ವಿವಿಧ ಸ್ಥಳಗಳಲ್ಲಿ ಶ್ರೀ ಶಿರೂರು ಶ್ರೀಪಾದರ ಜನ್ಮದಿನ ಹಾಗೂ ಕೃಷ್ಣೈಖ್ಯ ದಿನವನ್ನು ಶ್ರೀ ಶಿರೂರು ಶ್ರೀಪಾದರ ಆಪ್ತರಾದ
ಶ್ರೀ ಕೇಮಾರು ಸಾಂದೀಪಿನಿ ಮಠದ
ಶ್ರೀ ಈಶವಿಠಲದಾಸ ಸ್ವಾಮೀಜಿಯವರ ನೇತೃತ್ವದಲ್ಲಿ ಭಕ್ತವೃಂದವು ವಿವಿಧ ಸಮಾಜಮುಖೀ ಕಾರ್ಯಕ್ರಮಗಳೊಂದಿಗೆ ಸ್ಮರಣಾರ್ಹವಾಗಿ ಆಯೋಜಿಸಿತ್ತು.

ಆದರೆ ಈ ಭಾರೀ ಕೊರೋನಾ ಸಮಸ್ಯೆಯು ಎಲ್ಲೆಡೆ ತೀವ್ರಗೊಂಡಿರುವ ಕಾರಣ ಜಿಲ್ಲಾಡಳಿತದ ನೀತಿ ಸಂಹಿತೆಯನ್ನು ಗೌರವಿಸಿ ಶ್ರೀಶಿರೂರು ಶ್ರೀಪಾದರ ಸಂಸ್ಮರಣಾ ಕಾರ್ಯಕ್ರಮವನ್ನು ಶಿಷ್ಯ ಸಮುದಾಯ ಹಾಗೂ ಅಭಿಮಾನಿಗಳು ಸ್ವಗೃಹದಲ್ಲೇ ಸರಳವಾಗಿ ಆಚರಿಸಬೇಕೆಂದು ಶ್ರೀಕೇಮಾರು ಶ್ರೀಪಾದರು, ಶಿರೂರು ಶ್ರೀ ಅಭಿಮಾನಿ ಬಳಗದ ಶ್ರೀ ರಾಧಾಕೃಷ್ಣ ಶೆಟ್ಟಿ
ದೊಡ್ನಗುಡ್ಡೆ, ಜಯರಾಂ ಅಂಬೇಕಲ್ಲು, ನವೀನ್ ರಾವ್, ಶ್ರೀಜಿತ್ ಹಾಗೂ ಶಿರೂರು ಶ್ರೀಪಾದರ ಪೂರ್ವಾಶ್ರಮದ ಸಹೋದರ ಪಿ.ಲಾತವ್ಯ ಆಚಾರ್ಯ ರವರು ವಿನಂತಿಸಿಕೊಂಡಿದ್ದಾರೆ.

ಕಾಲನಿರ್ಣಯನ್ಯೂಸ್ ವಾಟ್ಸಾಪ್ ಗ್ರೂಫ್ ಸೇರಲು ಇಲ್ಲಿ ಕ್ಲಿಕ್ ಮಾಡಿ https://chat.whatsapp.com/CTDH16qVW5RL023JwWgknA

Spread the love
  • Related Posts

    ಕೇಮಾರು ಶ್ರೀ ಕ್ಷೇತ್ರ ಸಾಂದೀಪನಿ ಕೇಮಾರು ಸಾಧನಾಶ್ರಮಕ್ಕೆ ₹1 ಕೋಟಿ ಅನುದಾನ, ರಾಜ್ಯ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ ಈಶ ವಿಠಲದಾಸ ಸ್ವಾಮೀಜಿ

    ಮೂಡುಬಿದಿರೆ: ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಮೂಡುಬಿದಿರೆಯ ಕೇಮಾರುವಿನಲ್ಲಿರುವ ಶ್ರೀ ಕ್ಷೇತ್ರ ಸಾಂದೀಪನಿ ಸಾಧನಾಶ್ರಮಕ್ಕೆ ಮುಖ್ಯಮಂತ್ರಿ ಡಿ. ಕೆ. ಶಿವಕುಮಾ‌ರ್ ಅವರು ₹1 ಕೋಟಿ ಅನುದಾನ ಘೋಷಿಸಿದ್ದು, ಈ ಕುರಿತು ಮಠದ ಈಶ ವಿಠಲದಾಸ ಸ್ವಾಮೀಜಿ ಹರ್ಷ ವ್ಯಕ್ತಪಡಿಸಿದ್ದಾರೆ.…

    Spread the love

    ಕಸ್ತೂರಿ ರಂಗನ್ ವರದಿ ಕುರಿತು ರೈತರ ಆತಂಕ ನಿವಾರಣೆಗೆ ಸರ್ಕಾರ ಬದ್ಧ: ಸಿ.ಎಂ ಡಿಕೆಶಿ

    ರೈತರ ಸಮಸ್ಯೆಗಳ ಕುರಿತು ಪ್ರತ್ಯೇಕವಾಗಿ ಚರ್ಚೆ; ಕರಾವಳಿ ಅಭಿವೃದ್ಧಿಗೆ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರಗಳ ನಿರೀಕ್ಷೆ ಮಂಗಳೂರು: ಕಸ್ತೂರಿ ರಂಗನ್ ವರದಿಯನ್ನು ರಾಜ್ಯ ಸರ್ಕಾರ ಈ ಹಿಂದೆಯೇ ಸ್ಪಷ್ಟವಾಗಿ ತಿರಸ್ಕರಿಸಿದೆ. ಆದರೂ ಕೇಂದ್ರ ಸರ್ಕಾರದಿಂದ ಬಂದಿರುವ ನಿರ್ದೇಶನಗಳ ಹಿನ್ನೆಲೆಯಲ್ಲಿ ಸ್ಥಳೀಯ ರೈತರಲ್ಲಿ…

    Spread the love

    You Missed

    ಕೇಮಾರು ಶ್ರೀ ಕ್ಷೇತ್ರ ಸಾಂದೀಪನಿ ಕೇಮಾರು ಸಾಧನಾಶ್ರಮಕ್ಕೆ ₹1 ಕೋಟಿ ಅನುದಾನ, ರಾಜ್ಯ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ ಈಶ ವಿಠಲದಾಸ ಸ್ವಾಮೀಜಿ

    • By admin
    • September 19, 2026
    • 2 views
    ಕೇಮಾರು ಶ್ರೀ ಕ್ಷೇತ್ರ ಸಾಂದೀಪನಿ ಕೇಮಾರು ಸಾಧನಾಶ್ರಮಕ್ಕೆ ₹1 ಕೋಟಿ ಅನುದಾನ, ರಾಜ್ಯ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ ಈಶ ವಿಠಲದಾಸ ಸ್ವಾಮೀಜಿ

    ನಾವೂರು–ಕುತ್ಲೂರು ದುರ್ಗಮ ಪ್ರದೇಶಗಳ ವಿದ್ಯುದೀಕರಣಕ್ಕೆ ವನ್ಯಜೀವಿ ಅನುಮತಿ11 ಕೆ.ವಿ. ಮಾರ್ಗವನ್ನು ಭೂಗತ ಕೇಬಲ್ ಮೂಲಕ ಅಳವಡಿಸಲು ಅವಕಾಶ – ಶಾಸಕ ಹರೀಶ್ ಪೂಂಜ

    • By admin
    • September 18, 2026
    • 9 views

    ಕಸ್ತೂರಿ ರಂಗನ್ ವರದಿ ಕುರಿತು ರೈತರ ಆತಂಕ ನಿವಾರಣೆಗೆ ಸರ್ಕಾರ ಬದ್ಧ: ಸಿ.ಎಂ ಡಿಕೆಶಿ

    • By admin
    • September 18, 2026
    • 9 views
    ಕಸ್ತೂರಿ ರಂಗನ್ ವರದಿ ಕುರಿತು ರೈತರ ಆತಂಕ ನಿವಾರಣೆಗೆ ಸರ್ಕಾರ ಬದ್ಧ: ಸಿ.ಎಂ ಡಿಕೆಶಿ

    ಆಟಿಡೊಂಜಿದಿನ ಧರ್ಮಸ್ಥಳ ಕನ್ಯಾಡಿ 2

    • By admin
    • September 15, 2026
    • 20 views

    ನಾಡಿನೆಲ್ಲೆಡೆ ಗಣಪನ ಹಬ್ಬದ ಸಡಗರ ಸಂಭ್ರಮ ಬೆಳ್ತಂಗಡಿ ತಾಲೂಕಿನಾದ್ಯಂತ 2026ರಲ್ಲಿ ವಿವಿಧೆಡೆ ಆಚರಿಸಲ್ಪಟ ಗಣಪನ ನೋಡಬನ್ನಿ

    • By admin
    • September 15, 2026
    • 30 views
    ನಾಡಿನೆಲ್ಲೆಡೆ ಗಣಪನ ಹಬ್ಬದ ಸಡಗರ ಸಂಭ್ರಮ ಬೆಳ್ತಂಗಡಿ ತಾಲೂಕಿನಾದ್ಯಂತ 2026ರಲ್ಲಿ ವಿವಿಧೆಡೆ ಆಚರಿಸಲ್ಪಟ ಗಣಪನ ನೋಡಬನ್ನಿ

    ಕಡಿರುದ್ಯಾವರ: ಗ್ರಾಮೀಣ ರಸ್ತೆಯಲ್ಲಿ ಮರ ಸಾಗಾಟದ ಲಾರಿಗಳ ಹಾವಳಿ — ರಸ್ತೆ ಹಾಳಾಗುತ್ತಿರುವ ಆರೋಪ

    • By admin
    • September 13, 2026
    • 14 views
    ಕಡಿರುದ್ಯಾವರ: ಗ್ರಾಮೀಣ ರಸ್ತೆಯಲ್ಲಿ ಮರ ಸಾಗಾಟದ ಲಾರಿಗಳ ಹಾವಳಿ — ರಸ್ತೆ ಹಾಳಾಗುತ್ತಿರುವ ಆರೋಪ