ತುಮಕೂರು: ಮನೆಯವರ ಒಪ್ಪಿಗೆಯಿಲ್ಲದೇ ಪ್ರೀತಿಸಿ ಮದುವೆಯಾದ ಕಾರಣ ಪ್ರಿಯತಮೆಯ ಮನೆಯವರಿಂದ ಪ್ರಿಯತಮನಿಗೆ ಸೇರಿದ 250 ಅಡಿಕೆ ಗಿಡಗಳನ್ನು ನಾಶ ಪಡಿಸಿದ ವಿಕೃತ ಘಟನೆ ತುಮಕೂರಿನ ಮಲ್ಲಸಂದ್ರದಲ್ಲಿ ನಡೆದಿದೆ.
ನಾವು ಅಡಿಕೆ ಕಡಿದಿಲ್ಲ: ನಾವು ರೈತರು ಅಡಿಕೆ ತೆಂಗು ಅನ್ನ ಕೊಡುವ ದೇವರು ಅಂತಾ ನೀಚ ಕೆಲಸ ಮಾಡಲು ನಾವು ತಯಾರಿಲ್ಲ, ಅಂತಾ ಪಾಪಿ ನಾನಲ್ಲ ಎಂದು ಯುವತಿಯ ತಾಯಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಮಲ್ಲಸಂದ್ರದ ನಿವಾಸಿ ರವಿಚಂದ್ರರವರಿಗೆ ಅನು ಎಂಬುವವರೊಂದಿಗೆ ಪ್ರೀತಿಯಾಗಿ, ಮನೆಯವರ ಒಪ್ಪಿಗೆ ಇಲ್ಲದೆ ಎರಡು ವರ್ಷಗಳ ಹಿಂದೆಯಷ್ಟೇ ಪ್ರೇಮ ವಿವಾಹವಾಗಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಹುಡುಗಿಯ ಮನೆಯವರಾದ ಸಂತೋಷ್ ಹಾಗೂ ಗಂಗಮ್ಮ ಇದೀಗ ರವಿಚಂದ್ರರವರಿಗೆ ಸೇರಿದ 250 ಅಡಿಕೆ ಗಿಡಗಳನ್ನು ನಾಶಪಡಿಸಿದ ಆರೋಪ ತಿಳಿದು ಬಂದಿದೆ. ಅಡಿಕೆ ಗಿಡಗಳ ನಾಶವು ಸರಿಸುಮಾರು ಲಕ್ಷಾಂತರ ರೂಪಾಯಿ ನಷ್ಟವಾಗಿದ್ದು, ತುಮಕೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.