ಮಂಗಳೂರಿನಲ್ಲಿ ಮತ್ತೊಮ್ಮೆ ವಿಕೃತಿ ಮೆರೆದ ಪಾಪಿಗಳು! 200, 20, 10 ರುಪಾಯಿ ನೋಟಿನ ಮೇಲೆ ಧರ್ಮನಿಂದನೆ ಮಾಡಿ ಅಸಭ್ಯ ಬರಹಗಳನ್ನು ಬರೆದು ದೇವಸ್ಥಾನದ ಕಾಣಿಕೆ ಡಬ್ಬಿಗೆ ಹಾಕಿದ ಕಿರಾತಕರು!

ಮಂಗಳೂರು: ಮಂಗಳೂರಿನಲ್ಲಿ ಗೋಡೆ ಬರಹದ ಬೆನ್ನಲ್ಲೇ ಇದೀಗ ಇನ್ನೊಂದು ವಿಕೃತಿ ಬರಹ ಕಂಡುಬಂದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

ಮಂಗಳೂರಿನ ಹೊರವಲಯದ ಕೊಟ್ಟಾರ ಚೌಕಿ ಬಳಿ ಇರುವ ಕಲ್ಲುರ್ಟಿ,ಪಂಜುರ್ಲಿ, ಹಾಗೂ ಅತ್ತಾವರ ಸನಿಹದ ಕೋಟೆದ ಬಬ್ಬುಸ್ವಾಮಿ ದೇವಸ್ಥಾನವೊಂದರ ಕಾಣಿಕೆ ಡಬ್ಬಿಗೆ ವಿಕೃತ ಮನಸಿನ ವ್ಯಕ್ತಿಗಳು ಅಸಭ್ಯ ಬರಹಗಳನ್ನು 200, 20, 10 ರುಪಾಯಿಯ ನೋಟಿನಲ್ಲಿ ಬರೆದು ಕಾಣಿಕೆ ಡಬ್ಬಿಯಲ್ಲಿ ಹಾಕಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

READ ALSO

ಯಾರೇ ಈ ಕೃತ್ಯ ಮಾಡಿದ್ದರೂ ಅವರಿಗೆ ದೈವಸ್ಥಾನದ ಕಾರಣೀಕ ದೈವಗಳು ತಕ್ಕ ಶಿಕ್ಷೆ ನೀಡುತ್ತಾರೆ ಎಂದು ಬಲವಾದ ನಂಬಿಕೆಯಲ್ಲಿ ಇಂದು ಗ್ರಾಮಸ್ಥರು , ಊರ ಭಕ್ತಾದಿಗಳು ಸೇರಿ ಪ್ರಾರ್ಥನೆ ಮಾಡಿದ್ದಾರೆ.

ಶಾಂತಿಯುತವಾಗಿರುವ ಮಂಗಳೂರಿನಲ್ಲಿ ಶಾಂತಿ ಕದಡಲು ಪ್ರಯತ್ನಿಸುವ ಇಂತವರ ವಿರುದ್ಧ ಕ್ರಮಕೈಗಳ್ಳಬೇಕಾಗಿದೆ.