ಮಂಗಳೂರು: ನಗರದ ಕಂಕನಾಡಿ ಸಮೀಪದ ನಾಗುರಿಯಲ್ಲಿ ಬುಧವಾರ ಮುಂಜಾನೆ ಸುರಿದ ಭಾರೀ ಗಾಳಿ-ಮಳೆಗೆ ಮನೆಯೊಂದು ಕುಸಿದ ಪರಿಣಾಮ ಮಹಿಳೆಯೊಬ್ಬರು ಹಾಗೂ ಇಬ್ಬರು ಹೆಣ್ಮಕ್ಕಳು ಸೇರಿದಂತೆ ಮೂವರು ಮೃತಪಟ್ಟಿರುವ ಘಟನೆ ನಡೆದಿದೆ.
ಕಂಕನಾಡಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಅವಘಡದ ವೇಳೆ ಒಟ್ಟು ಆರು ಮಂದಿ ಮನೆಯಲ್ಲಿ ಇದ್ದರು. ಅವರಲ್ಲಿ ಮೂವರು ಮೃತಪಟ್ಟಿದ್ದು, ಉಳಿದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಲಾಲ್‌ಬಾಬು (37) ಮೂಲತಃ ಬಿಹಾರದವರಾಗಿದ್ದು ಪತ್ನಿ ಇಂದು (34) ಕಳೆದ ಎಂಟು ವರ್ಷಗಳಿಂದ ಈ ಮನೆಯಲ್ಲಿ ವಾಸಿಸುತ್ತಿದ್ದರು. ದಂಪತಿಗೆ ನಾಲ್ವರು ಪುತ್ರಿಯರು ಇದ್ದಾರೆ. ಅಲ್ಕಾ (14) ಅನುಷ್ಕಾ (11) ಅನಾಮಿಕಾ ಚೌರಾಸಿಯಾ (8) ಪರಿ (4)ಘಟನೆಯಲ್ಲಿ ಲಾಲ್‌ಬಾಬು, ಇಂದು ಹಾಗೂ ಇಬ್ಬರು ಮಕ್ಕಳು ಸುರಕ್ಷಿತವಾಗಿ ರಕ್ಷಿಸಲ್ಪಟ್ಟಿದ್ದಾರೆ. ಬಾಲಕೃಷ್ಣ (40) ಮೂಲತಃ ಉಡುಪಿಯವರಾದ ಇವರು ಹಾಗೂ ಪತ್ನಿ ಶಾಂತಾ (46) ಕಳೆದ ಎಂಟು ತಿಂಗಳಿಂದ ಈ ಮನೆಯಲ್ಲಿ ವಾಸಿಸುತ್ತಿದ್ದರು.ಬಾಲಕೃಷ್ಣ ಅವರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆಮೃತರನ್ನು ಬಿಹಾರ ಮೂಲದ ಅನಾಮಿಕ ಚೌರಾಸಿಯಾ (8ವ), ಪರಿ(04ವ), ಹಾಗೂ ಉಡುಪಿ ಮೂಲದ ಶಾಂತ (46ವರ್ಷ) ಎಂದು ಗುರುತಿಸಲಾಗಿದೆ
ಮಾಹಿತಿ ತಿಳಿಯುತ್ತಿದ್ದಂತೆಯೇ ಎನ್‌ಡಿಆರ್‌ಎಫ್ ತಂಡ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದೆ.
ಸ್ಥಳಕ್ಕೆ ಜಿಲ್ಲಾಧಿಕಾರಿ ದರ್ಶನ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.





