“ಮಲೆಯಡ್ಕ MCK ಹಾಟ್ ಮಿಕ್ಸ್ ಘಟಕಕ್ಕೆ ಅಧಿಕಾರಿಗಳ ಭೇಟಿ; ಸ್ಥಳೀಯರ ಅಹವಾಲು ಪರಿಶೀಲನೆ”

ಬೆಳ್ತಂಗಡಿ: ನಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಲೆಯಡ್ಕ ಎಂಬಲ್ಲಿ ಜನವಸತಿ ಪ್ರದೇಶದಲ್ಲಿ ಮುಗ್ರೋಡಿ ಕನ್ಸ್ಟ್ರಕ್ಷನ್ (MCK)ಯ ಅನಧಿಕೃತ ಹಾಟ್ ಮಿಕ್ಸ್ ಮತ್ತು ಕಾಂಕ್ರೀಟ್ ಮಿಶ್ರಣ ಘಟಕ ನಡೆಯುತ್ತಿದೆ ಎಂದು ನವದೆಹಲಿಯ ರಾಷ್ಟ್ರೀಯ ಅನುಸೂಚಿತ ಪಂಗಡಗಳ ಆಯೋಗ, ದೂರು ಅರ್ಜಿ ಸಲ್ಲಿಕೆಯಾಗಿದ್ದು ಸದ್ರಿ ಸ್ಥಳವನ್ನು ಪರಿಶೀಲನೆ ನಡೆಸಲು ಪುತ್ತೂರು ವಿಭಾಗ ಆಯುಕ್ತರಾದ ಸ್ಟೇಲ್ಲಾ ವರ್ಗಿಸ್ ಸೇರಿದ್ದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮುಗ್ರೋಡಿ ಅವರ ಘಟಕಕ್ಕೆ ಭೇಟಿ ನೀಡಿ ಸ್ಥಳ ತನಿಖೆ ನಡೆಸಿದ ಘಟನೆ ಜೂ.30 ರಂದು ಮಧ್ಯಹ್ನಾ 3:30 ಗಂಟೆಗೆ ನಡೆದಿದೆ.

ಈ ಬಗ್ಗೆ ದೆಹಲಿಯ ರಾಷ್ಟ್ರೀಯ ಅನುಸೂಚಿತ ಪಂಗಡಗಳ ಆಯೋಗಕ್ಕೆ ಫೆಬ್ರವರಿ 6 ರಂದು ಪತ್ರ ಬಂದಿದ್ದು ಅದರಂತೆ ಫೆ.17 ರಂದು ಜಿಲ್ಲಾಧಿಕಾರಿಗಳು ಸದ್ರಿ ಸ್ಥಳವನ್ನು ಪರಿಶೀಲನೆ ಮಾಡಿ ವರದಿ ಸಲ್ಲಿಸುವಂತೆ ಸಹಾಯಕ ಆಯುಕ್ತರಿಗೆ ಆದೇಶಿಸಿದ್ದು ಹಾಗಾಗಿ ಜೂ.23 ರಂದು ಸಹಾಯಕ ಆಯುಕ್ತರು ಸ್ಥಳ ತನಿಖೆಯ ದಿನಾಂಕ ಸೂಚಿಸಿ ನೋಟಿಸ್ ರವಾನಿಸಿದ್ದರು.

ಹಾಟ್ ಮಿಕ್ಸ್ ಘಟಕ್ಕೆ ಭೇಟಿ ನೀಡಿದ ಅವರು ಅಲ್ಲಿನ ಜನರ ಸಮಸ್ಯೆಯನ್ನು ಆಲಿಸಿ, ಘಟಕದ ಇರುವ ಪ್ರದೇಶವನ್ನು ಪರಿಶೀಲನೆ ನಡೆಸಿದರು. ಘಟಕದಿಂದ ಉಂಟಾಗುತ್ತಿರುವ ಸಮಸ್ಯೆಗಳ ಕುರಿತು ವರದಿ ನೀಡುವಂತೆ ಗ್ರಾ.ಪಂ.ಪಿಡಿಓ ಹಾಗೂ ಗ್ರಾಮಾಡಳಿತಾಧಿಕಾರಿಗಳಿಗೆ ಸೂಚನೆ ನೀಡಿದರು.

ತಾಲೂಕು ಆರೋಗ್ಯಾಧಿಕಾರಿ ಡಾ. ಸಂಜತ್, ಗ್ರಾಮೀಣ ಕುಡಿಯುವ ನೀರು ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ತಿರುಪತಿ, ನಡ ಗ್ರಾ.ಪಂ. ಪಂಚಾಯತ್ ಅಭಿವೃದ್ಧಿ ಅಧಿಕಾರಿ ತಾರನಾಥ್ ನಾಯ್ಕ್, ಗ್ರಾಮಾಡಳಿತಾಧಿಕಾರಿ ರನಿತಾ, ಬೆಳ್ತಂಗಡಿ ಉಪ ವಿಭಾಗ ಪಂಚಾಯತ್ ರಾಜ್ ಇಂಜಿನಿಯರ್ ಇಲಾಖೆ ಎಇಇ ಜರ್ನಾದನ, ಹಾಟ್ ಮಿಕ್ಸ್ ಪ್ಲಾಂಟ್ ಪ್ರಮುಖರು, ಅರ್ಜಿದಾರರು, ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.

Spread the love
  • Related Posts

    ಧರ್ಮಸ್ಥಳದಲ್ಲಿ 28ನೇ ವರ್ಷದ ಭಜನಾ ಕಮ್ಮಟ ಉದ್ಘಾಟನೆ, ಪ್ರತಿದಿನ ಶ್ರದ್ಧಾ-ಭಕ್ತಿಯಿಂದ ಭಜನೆ ಮಾಡುವುದರಿಂದ ಜೀವನ ಪಾವನವಾಗುತ್ತದೆ ಸುಬ್ರಹ್ಮಣ್ಯ ಶ್ರೀಗಳು

    ಧರ್ಮಸ್ಥಳ: ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಕನಿಷ್ಠ ಒಂದು ಗಂಟೆಯಾದರೂ ನಾವು ಮನೆಯಲ್ಲಿ ಪರಿಶುದ್ಧ ತನು, ಮನ ಮತ್ತು ನಾಲಗೆಯಿಂದ ಶ್ರದ್ಧಾ-ಭಕ್ತಿಯಿಂದ ದೇವರ ಭಜನೆ ಮಾಡಿದರೆ ಜೀವನ ಪಾವನವಾಗುತ್ತದೆ ಎಂದು ಸುಬ್ರಹ್ಮಣ್ಯ ಮಠದ ಪೂಜ್ಯ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು. ಅವರು ಸೋಮವಾರ…

    Spread the love

    ಬ್ಯಾಂಕ್ ಮುಷ್ಕರ ಮುಂದೂಡಿಕೆ, ಎಂದಿನಂತೆ ಬ್ಯಾಂಕ್ ಸೇವೆಗೆ ಲಭ್ಯ

    ಹೊಸದಿಲ್ಲಿ: ವಾರದಲ್ಲಿ ಐದು ದಿನಗಳ ಕೆಲಸ ಸಹಿತ ವಿವಿಧ ಬೇಡಿಕೆಗಳ ಬಗ್ಗೆ ಪರಿಶೀಲಿಸುವುದಾಗಿ ಭಾರತೀಯ ಬ್ಯಾಂಕ್‌ಗಳ ಒಕ್ಕೂಟವು ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಬ್ಯಾಂಕ್ ಯೂನಿಯನ್‌ಗಳು ಸೋಮವಾರದಿಂದ ನಡೆಸಲು ನಿರ್ಧರಿಸಿದ್ದ ಮೂರು ದಿನಗಳ ದೇಶವ್ಯಾಪಿ ಮುಷ್ಕರವನ್ನು ಮುಂದೂಡಿವೆ. ಸೋಮವಾರದಿಂದ ಮೂರು ದಿನ ಮುಷ್ಕರ…

    Spread the love

    You Missed

    ಧರ್ಮಸ್ಥಳದಲ್ಲಿ 28ನೇ ವರ್ಷದ ಭಜನಾ ಕಮ್ಮಟ ಉದ್ಘಾಟನೆ, ಪ್ರತಿದಿನ ಶ್ರದ್ಧಾ-ಭಕ್ತಿಯಿಂದ ಭಜನೆ ಮಾಡುವುದರಿಂದ ಜೀವನ ಪಾವನವಾಗುತ್ತದೆ ಸುಬ್ರಹ್ಮಣ್ಯ ಶ್ರೀಗಳು

    • By admin
    • September 28, 2026
    • 3 views
    ಧರ್ಮಸ್ಥಳದಲ್ಲಿ 28ನೇ ವರ್ಷದ ಭಜನಾ ಕಮ್ಮಟ ಉದ್ಘಾಟನೆ, ಪ್ರತಿದಿನ ಶ್ರದ್ಧಾ-ಭಕ್ತಿಯಿಂದ ಭಜನೆ ಮಾಡುವುದರಿಂದ ಜೀವನ ಪಾವನವಾಗುತ್ತದೆ ಸುಬ್ರಹ್ಮಣ್ಯ ಶ್ರೀಗಳು

    ಬ್ಯಾಂಕ್ ಮುಷ್ಕರ ಮುಂದೂಡಿಕೆ, ಎಂದಿನಂತೆ ಬ್ಯಾಂಕ್ ಸೇವೆಗೆ ಲಭ್ಯ

    • By admin
    • September 28, 2026
    • 3 views
    ಬ್ಯಾಂಕ್ ಮುಷ್ಕರ ಮುಂದೂಡಿಕೆ, ಎಂದಿನಂತೆ ಬ್ಯಾಂಕ್ ಸೇವೆಗೆ ಲಭ್ಯ

    ನೋಟಿಸ್ ಕೊಡದೆ ಬಂಧನವೇ? ಪೊಲೀಸರಿಗೆ ಹೈಕೋರ್ಟ್ ಕಠಿಣ ಎಚ್ಚರಿಕೆ | BNSS 35 ನಿಯಮ ಕಟ್ಟುನಿಟ್ಟಾಗಿ ಪಾಲಿಸಲು ನಿರ್ದೇಶನ

    • By admin
    • September 27, 2026
    • 10 views
    ನೋಟಿಸ್ ಕೊಡದೆ ಬಂಧನವೇ? ಪೊಲೀಸರಿಗೆ ಹೈಕೋರ್ಟ್ ಕಠಿಣ ಎಚ್ಚರಿಕೆ | BNSS 35 ನಿಯಮ ಕಟ್ಟುನಿಟ್ಟಾಗಿ ಪಾಲಿಸಲು ನಿರ್ದೇಶನ

    ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ರ‍್ಯಾಗಿಂಗ್: ಜೂನಿಯರ್ಸ್ ಬಟ್ಟೆ ಬಿಚ್ಚಿಸಿ ಬೆಲ್ಟ್‌ನಿಂದ ಹಲ್ಲೆ, 9 ಮಂದಿ ಸೀನಿಯರ್ಸ್ ವಿರುದ್ಧ ಎಫ್‌ಐಆರ್ ದಾಖಲು

    • By admin
    • September 25, 2026
    • 11 views
    ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ  ರ‍್ಯಾಗಿಂಗ್: ಜೂನಿಯರ್ಸ್ ಬಟ್ಟೆ ಬಿಚ್ಚಿಸಿ ಬೆಲ್ಟ್‌ನಿಂದ ಹಲ್ಲೆ, 9 ಮಂದಿ ಸೀನಿಯರ್ಸ್ ವಿರುದ್ಧ ಎಫ್‌ಐಆರ್ ದಾಖಲು

    1,000 ಚದರ ಮೀಟರ್‌ವರೆಗಿನ ನಿವೇಶನಗಳಿಗೆ ‘ಸಿಂಗಲ್ ಪ್ಲಾನ್’ ಅನುಮೋದನೆ: ಅಧಿಕಾರ ವಿಕೇಂದ್ರೀಕರಣಕ್ಕೆ ಸರ್ಕಾರದ ಮಹತ್ವದ ಆದೇಶ

    • By admin
    • September 25, 2026
    • 10 views
    1,000 ಚದರ ಮೀಟರ್‌ವರೆಗಿನ ನಿವೇಶನಗಳಿಗೆ ‘ಸಿಂಗಲ್ ಪ್ಲಾನ್’ ಅನುಮೋದನೆ: ಅಧಿಕಾರ ವಿಕೇಂದ್ರೀಕರಣಕ್ಕೆ ಸರ್ಕಾರದ ಮಹತ್ವದ ಆದೇಶ

    ಸೌಜನ್ಯ ಪ್ರಕರಣ ಮರು ತನಿಖೆಗೆ ಎಸ್‌ಐಟಿ ರಚನೆ ಎನ್. ಶಶಿಕುಮಾರ್ ಐಪಿಎಸ್ ನೇತೃತ್ವದಲ್ಲಿ ಐವರು ಸದಸ್ಯರ ತಂಡ

    • By admin
    • September 24, 2026
    • 10 views
    ಸೌಜನ್ಯ ಪ್ರಕರಣ ಮರು ತನಿಖೆಗೆ ಎಸ್‌ಐಟಿ ರಚನೆ ಎನ್. ಶಶಿಕುಮಾರ್ ಐಪಿಎಸ್ ನೇತೃತ್ವದಲ್ಲಿ ಐವರು ಸದಸ್ಯರ ತಂಡ