Banglore: ಕರ್ನಾಟಕ ಸರ್ಕಾರವು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸಣ್ಣ ಪ್ರಮಾಣದ ನಿವೇಶನ (ಪ್ಲಾಟ್) ಹೊಂದಿರುವ ನಾಗರಿಕರಿಗೆ ಮನೆ ನಿರ್ಮಾಣ ಮತ್ತು ಲೇಔಟ್ ಅನುಮೋದನೆ ಪ್ರಕ್ರಿಯೆಯನ್ನು ಸುಲಭಗೊಳಿಸಲು ಹಾಗೂ ವಿಳಂಬವನ್ನು ತಪ್ಪಿಸಲು 1000 ಚ.ಮೀ.ವರೆಗಿನ ಏಕ ನಿವೇಶನ ಲೇಔಟ್ ಪ್ಲಾನ್ ಅನುಮೋದನೆಗೆ ಗ್ರಾಮ ಪಂಚಾಯತ್‌ಗಳ ಪಿಡಿಒಗಳಿಗೆ ಅಧಿಕಾರ ನೀಡಿ ಆದೇಶ ಹೊರಡಿಸಲಾಗಿದೆ.
ಇಲ್ಲಿಯವರೆಗೆ ಸಣ್ಣ ಪ್ರಮಾಣದ ಜಾಗದಲ್ಲೂ ಸಹ ಏಕ ನಿವೇಶನ (Single Plot/Single Layout) ಅನುಮೋದನೆ ಪಡೆಯಲು ನಗರಾಭಿವೃದ್ಧಿ ಪ್ರಾಧಿಕಾರ (UDA) ಯೋಜನಾ ಪ್ರಾಧಿಕಾರ (PA) ಅಥವಾ ತಾಲೂಕು ಪಂಚಾಯತಿ/ಜಿಲ್ಲಾ ಪಂಚಾಯತಿ ಹಂತದ ಅಧಿಕಾರಿಗಳ ಬಳಿ ಅಲೆಯಬೇಕಾಗಿತ್ತು. ಇದರಿಂದ ಸಾರ್ವಜನಿಕರಿಗೆ ಕಾಲಾವಕಾಶ ಮತ್ತು ಹಣ ವ್ಯರ್ಥವಾಗುತ್ತಿತ್ತು.
ಇದನ್ನು ಸರಳೀಕರಿಸಿ, ಸ್ಥಳೀಯ ಮಟ್ಟದಲ್ಲೇ ಶೀಘ್ರವಾಗಿ ಅನುಮೋದನೆ ದೊರೆಯುವಂತೆ ಮಾಡಲು ಗ್ರಾಮ ಪಂಚಾಯತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಅಧಿಕಾರ ವಿಕೇಂದ್ರೀಕರಣ ಮಾಡಲಾಗಿದೆ.
ನಿಯಮ ಮತ್ತು ಅರ್ಹತೆಗಳುವಿಸ್ತೀರ್ಣದ ಮಿತಿ:
ಈ ಅಧಿಕಾರವು ಗರಿಷ್ಠ 1000 ಚದರ್ ಮೀಟರ್ (ಸುಮಾರು 10,763 ಚದರ್ ಅಡಿ ಅಥವಾ ಸುಮಾರು 10.75 ಗುಂಟೆ) ವರೆಗಿನ ಏಕ ನಿವೇಶನದ ಲೇಔಟ್ ಪ್ಲಾನ್ ಅನುಮೋದನೆಗೆ ಮಾತ್ರ ಅನ್ವಯಿಸುತ್ತದೆ.
ಏಕ ನಿವೇಶನ Single Plot):
ಇದು ದೊಡ್ಡ ಮಟ್ಟದ ರಿಯಲ್ ಎಸ್ಟೇಟ್ ಲೇಔಟ್‌ಗಳಿಗೆ (ಬಹಳಷ್ಟು ಪ್ಲಾಟ್‌ಗಳಾಗಿ ವಿಭಾಗಿಸುವ ಯೋಜನೆಗಳಿಗೆ) ಅನ್ವಯಿಸುವುದಿಲ್ಲ. ಬದಲಾಗಿ, ಒಂದೇ ಜಮೀನು/ನಿವೇಶನವನ್ನು ಹೊಂದಿದ್ದು, ಅಲ್ಲಿ ಕಟ್ಟಡ ನಿರ್ಮಾಣಕ್ಕೆ ಅಥವಾ ಕಾನೂನುಬದ್ಧ ಪ್ಲಾನ್ ಅನುಮೋದನೆಗೆ ಅರ್ಜಿ ಸಲ್ಲಿಸುವವರಿಗೆ ಇದು ಅನ್ವಯಿಸುತ್ತದೆ.
ಸ್ವೀಕಾರ ಮತ್ತು ಪರಿಶೀಲನೆ:
1000 ಚದರ್ ಮೀಟರ್ ಒಳಗಿನ ಏಕ ನಿವೇಶನದ ಲೇಔಟ್ ಪ್ಲಾನ್ ಅರ್ಜಿಯನ್ನು ಪಿಡಿಒ ಅವರೇ ಪರಿಶೀಲಿಸುತ್ತಾರೆ.
ಸ್ಥಳ ಪರಿಶೀಲನೆ:
ಜಾಗದ ನಕ್ಷೆ, ಮಾಲೀಕತ್ವದ ದಾಖಲೆಗಳು ಮತ್ತು ಜಾಗದ ಗಡಿಗಳನ್ನು ಪಿಡಿಒ ಹಾಗೂ ತಾಂತ್ರಿಕ ಸಿಬ್ಬಂದಿ ಪರಿಶೀಲಿಸುತ್ತಾರೆ.
ಅನುಮೋದನೆ ಮತ್ತು ಈ-ಸ್ವತ್ತು:
ನಿಗದಿತ ನಿಯಮಾವಳಿಗಳಿಗೆ ಒಳಪಟ್ಟಿದ್ದರೆ, ಪಿಡಿಒ ಅವರೇ ಲೇಔಟ್ ಪ್ಲಾನ್ ಅನುಮೋದಿಸಿ ಈ-ಸ್ವತ್ತು ತಂತ್ರಾಂಶದ ಮೂಲಕ ಪ್ರಮಾಣಪತ್ರ ವಿತರಿಸಬಹುದು.ಹಿರಿಯ ಅಧಿಕಾರಿಗಳ ಕಛೇರಿಗಳಿಗೆ ಕಡತಗಳನ್ನು ಕಳುಹಿಸುವ ಅಗತ್ಯವಿಲ್ಲದಿರುವುದರಿಂದ ಅನುಮೋದನೆ ಶೀಘ್ರವಾಗಿ ಸಿಗುತ್ತದೆ. ಮಧ್ಯವರ್ತಿಗಳ ಹಸ್ತಕ್ಷೇಪ ತಪ್ಪುತ್ತದೆ ಹಾಗೂ ಸರ್ಕಾರಿ ಕಚೇರಿಗಳಿಗೆ ಅಲೆಯುವುದು ತಪ್ಪುತ್ತದೆ. ಸ್ಥಳೀಯ ಪಿಡಿಒ ಅವರಿಗೆ ಆ ಪ್ರದೇಶದ ರಸ್ತೆ ಮತ್ತು ಭೂ ಸನ್ನಿವೇಶದ ಸ್ಪಷ್ಟ ಕಲ್ಪನೆ ಇರುವುದರಿಂದ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಅನುಕೂಲವಾಗುತ್ತದೆ.



