![](https://kalanirnayanews.com/wp-content/uploads/2020/10/1602564453395-1.jpg)
ಮಂಗಳೂರು: ಹಾಲಿನ ವಾಹನದಲ್ಲಿ ಅಕ್ರಮವಾಗಿ ಗೋ ಮಾಂಸ ಸಾಗಾಟ ಮಾಡುತ್ತಿದ್ದವರನ್ನು ಬೆಳ್ಳಂಬೆಳಗ್ಗೆ ಭಜರಂಗದಳದ ಕಾರ್ಯಕರ್ತರು ಪತ್ತೆ ಹಚ್ಚಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
![](https://103.180.45.14/kalanirnaya1/wp-content/uploads/2020/10/1602564475782-1.jpg)
ಅನುಮಾನದ ಹಿನ್ನೆಲೆಯಲ್ಲಿ ಪಂಪ್ ವೆಲ್ ನಿಂದ ವಾಹನವನ್ನು ಬೆನ್ನಟ್ಟಿದ್ದ ಭಜರಂಗ ಕಾರ್ಯಕರ್ತರು ವೆನ್ಲಾಕ್ ಆಸ್ಪತ್ರೆ ಬಳಿ ಹಿಡಿದು ಬಂದರು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಸಂಬಂಧ ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.