
ಬೆಂಗಳೂರು : ಕೊರೋನಾ ಸಂಕಷ್ಟದಿಂದ ಸ್ಥಗಿತಗೊಂಡಿದ್ದಂತ ರಾಜ್ಯ ಸಚಿವ ಸಂಪುಟ ವಿಸ್ತರಣೆ, ಮತ್ತೆ ಚುರುಕು ಪಡೆಯಲಿದೆ. ಸಚಿವ ಸಂಪುಟ ವಿಸ್ತರಣೆಯಾಗಿ ತಮಗೂ ಸಚಿವ ಸ್ಥಾನ ಸಿಗಲಿದೆ ಎಂಬುದಾಗಿ ಅನೇಕರು ರಾಜ್ಯದ ಬಿಜೆಪಿ ಮುಖಂಡರು ನಿರೀಕ್ಷೆ ಹೊಂದಿದ್ದರು. ಆದ್ರೇ, ಈ ನಿರೀಕ್ಷೆಗೆ ತಣ್ಣೀರೆರೆಚಿರುವ ಬಿಜೆಪಿ ಹೈಕಮಾಂಡ್, ಅಭಿವೃದ್ಧಿಯ ಬಗ್ಗೆ ಚರ್ಚೆ ಮಾಡುವುದಿದ್ದರೇ ದಿಲ್ಲಿಗೆ ಬನ್ನಿ. ಇದರ ಹೊರತಾಗಿ ಸಂಪುಟ ವಿಚಾರವಾಗಿ ಮಾತನಾಡುವುದಿದ್ದರೇ ದಿಲ್ಲಿ ಕಡೆಗೆ ಬರಬೇಡಿ ಎಂಬುದಾಗಿ ಖಡಕ್ ಸೂಚನೆ ನೀಡಿದೆಯಂತೆ. ಈ ಮೂಲಕ ಸಚಿವಾಕಾಂಕ್ಷಿಗಳಿಗೆ ಬಿಜೆಪಿ ಹೈಕಮಾಂಡ್ ಬಿಗ್ ಶಾಕ್ ನೀಡಿದೆ.
ರಾಜ್ಯದ ಸಚಿವ ಸಂಪುಟ ಸಭೆ ಮತ್ತೆ ವಿಸ್ತರಣೆಯಾಗಲಿದೆ. ತಮಗೂ ಸಚಿವ ಸ್ಥಾನ ಸಿಗಲಿದೆ ಎಂಬುದಾಗಿ ಯೋಜಿಸಿದ್ದಂತ ಅನೇಕ ಸಚಿವಾಕಾಂಕ್ಷಿಗಳು ದಿಲ್ಲಿಗೆ ತೆರಳಿ ಬಿಜೆಪಿ ಹೈಕಮಾಂಡ್ ಭೇಟಿ ಮಾಡಿ, ಸಚಿವಸ್ಥಾನಕ್ಕಾಗಿ ಲಾಭಿ ನಡೆಸಲು ತೆರಳುವ ಸೂಚನೆಯನ್ನು ಬಿಜೆಪಿ ಹೈಕಮಾಂಡ್ ಗೆ ನೀಡಿದ್ದರು. ಇದನ್ನು ಸೂಕ್ಷ್ಮವಾಗಿ ಅರಿತಿರುವ ಬಿಜೆಪಿ ಹೈಕಮಾಂಡ್, ಪಕ್ಷ ಸಂಘಟನೆ, ಅಭಿವೃದ್ಧಿ ಬಗ್ಗೆ ಮಾತ್ರ ಮಾತು. ಸದ್ಯ ಸಂಪುಟ ಅಜೆಂಡಾ ಬಗ್ಗೆ ಚರ್ಚೆ ಇಲ್ಲ. ಸಂಪುಟ ವಿಸ್ತರಣೆ, ಪುನಾರಚನೆ ಪ್ರಶ್ನೆ ಮಾತಿಲ್ಲ ಎಂಬುದಾಗಿ ರಾಜ್ಯ ಬಿಜೆಪಿ ನಾಯಕರಿಗೆ ಸ್ಪಷ್ಟ ಸಂದೇಶ ರವಾನಿಸಿದೆ.
ಸಂಪುಟ ವಿಚಾರಕ್ಕೆ ದಿಲ್ಲಿಗೆ ಬರದಂತೆ ಸೂಚನೆ ನೀಡಿರುವ ಬಿಜೆಪಿ ಹೈಕಮಾಂಡ್, ಅಭಿವೃದ್ಧಿ ವಿಚಾರ ಚರ್ಚೆಗೆ ಮಾತ್ರ ಭೇಟಿಗೆ ಬನ್ನಿ. ಅದರ ಹೊರತಾಗಿ ಸಂಪುಟ ವಿಸ್ತರಣೆ, ಪುನರ್ ರಚನೆ ಚರ್ಚೆಗೆ ಬರಬೇಡಿ ಎಂಬುದಾಗಿ ಖಡಕ್ ಸಂದೇಶವನ್ನು ರವಾನಿಸಿದೆ. ಈ ಮೂಲಕ ಸಚಿವಾಕಾಂಕ್ಷೆಯ ನಿರೀಕ್ಷೆಯಲ್ಲಿದ್ದಂತ ರಾಜ್ಯ ಬಿಜೆಪಿ ನಾಯಕರಿಗೆ ಬಿಗ್ ಶಾಕ್ ಅನ್ನು ಬಿಜೆಪಿ ಹೈಕಮಾಂಡ್ ನೀಡಿದೆ.