ರಾಗಿ ಮುದ್ದೆ ಅಥವಾ ರಾಗಿಯಿಂದ ತಯಾರಿಸಿದ ಆಹಾರ ತಿನ್ನೋದ್ರಿಂದ ಶರೀರಕ್ಕೆ ಏನ್ ಲಾಭವಿದೇ ಗೊತ್ತೇ

ನಾವುಗಳು ಸೇವನೆ ಮಾಡುವಂತ ಆಹಾರ ನಮ್ಮ ಆರೋಗ್ಯವನ್ನು ವೃದ್ಧಿಸುತ್ತದೆ, ಸಿಕ್ಕ ಸಿಕ್ಕ ಜಂಕ್ ಫುಡ್ ಸೇವನೆ ಮಾಡಿ ಅನಾರೋಗ್ಯ ತಂದುಕೊಳ್ಳುವ ಬದಲು ಉತ್ತಮವಾದ ಆರೋಗ್ಯವನ್ನು ವೃದ್ಧಿಸಿಕೊಳ್ಳಲು ಪ್ರೊಟೀನ್ ಅಂಶವುಳ್ಳ ಆಹಾರವನ್ನು ತಿನ್ನುವುದು ಒಳ್ಳೆಯದು. ರಾಗಿ ಮುದ್ದೆ ರಾಗಿ ರೊಟ್ಟಿ ರಾಗಿ ಅಂಬಲಿ ಎಲ್ಲವು ಕೂಡ ಶರೀರಕ್ಕೆ ಉತ್ತಮ ಅನ್ನೋದನ್ನ ಹೀಗಾಗಲೇ ತಿಳಿಯಲಾಗಿದೆ.

ಮುಖ್ಯವಾಗಿ ಮತ್ತೊಂದು ವಿಚಾರ ಏನು ಅನ್ನೋದಾದರೆ ರಾಗಿ ರೊಟ್ಟಿ ಅಥವಾ ರಾಗಿ ಮುದ್ದೆಯೊಂದಿಗೆ ಈ ಚಟ್ನಿ ಮಾಡಿ ಸೇವನೆ ಮಾಡೋದ್ರಿಂದ ದೇಹದ ಅನಗತ್ಯ ಬೊಜ್ಜು ನಿವಾರಣೆಯಾಗುವುದರ ಜೊತೆಗೆ ದೇಹದ ತೂಕ ಕಡಿಮೆ ಮಾಡಿಕೊಳ್ಳಲು ಇದು ಸಹಕಾರಿ. ಇನ್ನು ಈ ಚಟ್ನಿ ದೇಹಕ್ಕೆ ಯಾಕೆ ಉಪಯೋಗಕಾರಿ ಅಂದರೆ ಇದರಲ್ಲಿ ಬೆಳ್ಳುಳ್ಳಿ ಹಾಗೂ ಕಾಳುಮೆಣಸು, ತೊಗರಿಬೇಳೆ ಇತ್ಯಾದಿಗಳು ಇರೋದ್ರಿಂದ ಇದು ಶರೀರಕ್ಕೆ ಯಾವುದೇ ರೋಗಗಳು ಬೇಗನೆ ತಗಲದಂತೆ ತಡೆಯುತ್ತೆ ಅಲ್ಲದೆ ಆರೋಗ್ಯವನ್ನು ವೃದ್ಧಿಸುತ್ತದೆ.

READ ALSO

ಚಟ್ನಿ ತಯಾರಿಸೋದು ಹೇಗೆ? ಎರಡು ಬೆಳ್ಳುಳ್ಳಿಯ ಎಸಳು, ಮೆಣಸಿನ ಕಾಳು ೭-೮, ಸ್ವಲ್ಪ ತೊಗರಿಬೇಳೆ, ತೆಂಗಿನ ತೂರಿ ಸ್ವಲ್ಪ, ಕೊಂಚ ಸೈoದವ ಇವೆಲ್ಲವನ್ನೂ ಒಟ್ಟಿಗೆ ಅರೆದು ಚಟ್ನಿ ತಯಾರಿಸಿಕೊಳ್ಳಬೇಕು ನಂತರ ಈ ಚಟ್ನಿಯನ್ನು ರಾಗಿ ಮುದ್ದೆ ಅಥವಾ ರಾಗಿ ರೊಟ್ಟಿಯೊಂದಿಗೆ ಸೇವಿಸುತ್ತಾ ಬಂದ್ರೆ ಉತ್ತಮ ಫಲಿತಾಂಶ ಕಾಣಬಹುದು.

ರಾಗಿ ಶರೀರಕ್ಕೆ ಪ್ರೊಟೀನ್ ಅಂಶವನ್ನು ದೊರಕಿಸುತ್ತದೆ ಅಲ್ದೆ ಅನಗತ್ಯ ಬೊಜ್ಜು ಬೆಳೆಯದಂತೆ ನಿಯಂತ್ರಿಸುತ್ತದೆ ಆದ್ದರಿಂದ ವಾರದಲ್ಲಿ ೨ ರಿಂದ ೩ ಬಾರಿಯಾದ್ರು ರಾಗಿಯಿಂದ ತಯಾರಿಸಿದ ಆಹಾರವನ್ನು ತಿನ್ನುವುದು ಉತ್ತಮ