ಮೌಲ್ಯ ಕಳೆದುಕೊಂಡ ಮೌಲ್ಯಮಾಪನ! ವಿದ್ಯಾರ್ಥಿಗಳ ಖಿನ್ನತೆಗೆ ಇದೇ ಕಾರಣ, ಶಿಕ್ಷಣ ಸಚಿವರೇ ಈ ವ್ಯವಸ್ಥೆ ಯಾರಿಗಾಗಿ, ಯಾತಕ್ಕಾಗಿ?

🖊️• ಚೈತ್ರೇಶ್ ಸಿ. ಪತ್ರಕರ್ತರು, ಬೆಳ್ತಂಗಡಿ

ಶಿಕ್ಷಣವೆಂಬುದು ವ್ಯಾಪಾರ ಆದಾಗಿನಿಂದ ಫಲಿತಾಂಶವೆಂಬುದು ವಿದ್ಯಾರ್ಥಿಗಳ ಪಾಲಿಗೆ ಮಾನಸಿಕ ಖಿನ್ನತೆಯ ಭಾಗವಾಗಿದೆ. ಮೌಲ್ಯಮಾಪನ ಮಾಡುವ ಕೆಲ ಉಪನ್ಯಾಸಕರ ನಿಲುವಿನಿಂದ ಮೌಲ್ಯಮಾಪನ ಮೌಲ್ಯವನ್ನೇ ಕಳೆದುಕೊಳ್ಳುವಂತಾಗಿದೆ. ಇದಕ್ಕೆ ಕಾರಣ ಪ್ರಸಕ್ತ ಸಾಲಿನ ಸಾವಿರಾರು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶದಲ್ಲಿ ಉಂಟಾದ ಏರುಪೇರೇ ಕಾರಣ.

ರಾಜ್ಯದಲ್ಲಿ 2026 ರ ದ್ವಿತೀಯ ಪಿಯುಸಿ ಪರೀಕ್ಷೆಗೆ ನೋಂದಣಿಯಾದ 6,32,200 ಮಂದಿ ಪೈಕಿ 5,46, 698 ಮಂದಿ ತೇರ್ಗಡಿ ಹೊಂದಿದ್ದಾರೆ ಎಂಬುದು ಪಿಯು ಬೋರ್ಡ್ ವೆಬ್ ಸೈಟ್ ಪ್ರಕಟಿಸಿದೆ. ಈ ಮೂಲಕ ಶೇ.86.48 ಫಲಿತಾಂಶ ಹೊರಬಿದ್ದಂತಾಗಿದೆ. ವಿಜ್ಞಾನ ವಿಭಾಗದಲ್ಲಿ ಶೇ.91.69, ವಾಣಿಜ್ಯ ವಿಭಾಗದಲ್ಲಿ ಶೇ.88.04 ಹಾಗೂ ಕಲಾ ವಿಭಾಗದಲ್ಲಿ ಶೇ.72.86 ಫಲಿತಾಂಶ ಹೊರಬಿದ್ದಿದೆ.

ಅಂಕವೇ ಅಂಕುಶ!


ಪ್ರತೀ ವರ್ಷದಿಂದ ವರ್ಷಕ್ಕೆ ಒಟ್ಟಾರೆ ಫಲಿತಾಂಶದಲ್ಲಿ ಏರಿಕೆ ಕಾಣುತ್ತಿರುವುದು ಸಂತಸ ಒಂದೆಡೆಯಾದರೆ, ವಯಕ್ತಿಕ ಫಲಿತಾಂಶದಲ್ಲಿ ಬಹಳಷ್ಟು ಏರುಪೇರಾಗುತ್ತಿರುವುದು ಪ್ರಶ್ನಾರ್ಥಕವಾಗಿದೆ. ಇದು ಯಾಕೆ ಎಂಬ ವಿಚಾರ ಸಾರ್ವಜನಿಕವಾಗಿ ಚರ್ಚಿತಗೊಂಡಾಗ ಬಹಳಷ್ಟು ಗಂಭೀರ ವಿಚಾರಗಳು ಬೆಳಕಿಗೆ ಬರುತ್ತಿದೆ. ಅದೇನಪ್ಪ ಅಂದರೆ 2026ರ ದ್ವಿತೀಯ ಪಿಯುಸಿ ಪ್ರಥಮ ಪರೀಕ್ಷೆಯ ಫಲಿತಾಂಶ ಘೋಷಣೆಯಾದಾಗ ಸಾವಿರಾರು ವಿದ್ಯಾರ್ಥಿಗಳು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು. ಕಾರಣ ಕಾಲೇಜಿನಲ್ಲಿ ಅತೀ ಹೆಚ್ಚು ಅಂಕ ಗಳಿಸುವವರಿಗೆ ನಿರೀಕ್ಷಿತ ಅಂಕಗಳು ಬಂದಿಲ್ಲ ಎಂಬುದು ಒಂದೆಡೆಯಾದರೆ ಕಡಿಮೆ ಅಂಕ ಬರುವವರಿಗೆ ಅನಿರೀಕ್ಷಿತ ಅಂಕ ಬಂದಿದೆ ಎಂಬುದು ಅಚ್ಚರಿ ಅಂಶ. ಇದರಿಂದ ಅದೆಷ್ಟೋ ವಿದ್ಯಾರ್ಥಿಗಳು ನಗೆ ಪಾಟಲಿಗೆ ಈಡಾಗಿರವುದು, ಕೆಲವರು ಮಾನಸಿಕವಾಗಿ ಖಿನ್ನತೆಗೊಳಗಾಗಿದ್ದಾರೆ. ಇನ್ನಷ್ಟು ಮಂದಿ ಅಧಿಕ ಅಂಕ ಗಳಿಸುವ ಮೂಲಕ ತೃಪ್ತಿ ಪಟ್ಟಿದ್ದಾರೆ. ಈ ಎಲ್ಲ ವಿಚಾರಗಳು ಶೈಕ್ಷಣಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಕರಡು ಫಲಿತಾಂಶ ಎಂದು ಘೋಷಿಸಿ!!!

2026 ರ ಪಿಯುಸಿ ಫಲಿತಾಂಶ ಬಂದ ಬಳಿಕ ರಾಜ್ಯದಲ್ಲಿ ಒಟ್ಟಾರೆ 9,132 ಮಂದಿ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅದರಂತೆ ಫಲಿತಾಂಶವು ಸುಮಾರು 389 ಪುಟಗಳಲ್ಲಿ ದಾಖಲಾಗಿದೆ. ಇದನ್ನ ಪರಿಶೀಲಿಸುವುದೇ ಒಂದು ಅರಸಾಹಸವಾಗಿದೆ. ಇಷ್ಟೊಂದು ವಿದ್ಯಾರ್ಥಿಗಳ ಅಂಕಗಳು ವ್ಯತ್ಯಾಸವಾಗುತ್ತದೆ ಎಂದಾದರೆ ಮೊದಲ ಮೌಲ್ಯಮಾಪನದಲ್ಲಿ ಯಾವುದೇ ಹುರುಳಿಲ್ಲವೇ ಎಂಬ ಅನುಮಾನ ವ್ಯಕ್ತವಾಗಿದೆ. ಮತ್ತೊಂದೆಡೆ ಮೊದಲ ಮೌಲ್ಯಮಾಪನದ ಫಲಿತಾಂಶವನ್ನು ಕರಡು ಫಲಿತಾಂಶ ಎಂದು ಘೋಷಿಸಿ ನಂತರ ಮರು ಮೌಲ್ಯಮಾಪನವೇ ಅಂತಿಮ ಎಂದು ಶಿಕ್ಷಣ ಇಲಾಖೆ ಘೋಷಿಸಿದಲ್ಲಿ ಅದಾದರು ಉತ್ತಮ ಎನ್ನುವ ಭಾವನೆ ಪೋಷಕರಲ್ಲಿ ಅಡಗಿದೆ.

ಮೌಲ್ಯಮಾಪಕರ ನಿರ್ಲಕ್ಷ್ಯ ಕ್ಕೆ ಶಿಕ್ಷೆ ಏನು???


ಪ್ರತಿವರ್ಷ ಫಲಿತಾಂಶ ಪ್ರಕಟವಾದಾಗ ಈ ಚರ್ಚೆ ಸಾಮಾನ್ಯವಾಗಿ ಬಿಟ್ಟಿದೆ. ಬಹಳಷ್ಟು ಉಪನ್ಯಾಸಕರು ಸಮರ್ಪಕವಾಗಿ ಪರೀಕ್ಷಾ ಮೌಲ್ಯಮಾಪನ ಮಾಡುವುದಿಲ್ಲ ಎಂಬ ಕೂಗು ಕೇಳಿ ಬಂದರೂ, ಈ ಬಾರಿ ಮತ್ತಷ್ಟು ಗಂಭೀರ ಸ್ವರೂಪ ತಾಳಿದೆ. ಇದು ಯಾಕೆ ಹೀಗೆ, ಮೌಲ್ಯಮಾಪನ ಮಾಡುವ ಕೆಲ ಉಪನ್ಯಾಸಕರ ನಿರ್ಲಕ್ಷ್ಯದ ಪರಿಣಾಮ ಇಷ್ಟೆಲ್ಲ ಹೊಡೆತಗಳು ಬೀಳುತ್ತಿದೆ. ಇದಕ್ಕೆ ಪರಿಹಾರವೇನು? ಯಾರು ಜವಾಬ್ದಾರರು? ಇದಕ್ಕೆ ಏನು ಶಿಕ್ಷೆ? ಯಾರನ್ನು ಹೊಣೆಯಾಗಿಸಬೇಕು? ಅನೇಕ ಪ್ರಶ್ನೆಗಳು ಎದುರಾಗಿದೆ. ಪ್ರತಿ ವಿಷಯದಲ್ಲಿ ಮೂರು ಅಥವಾ ನಾಲ್ಕು ಅಂಕಗಳಿಗಿಂತಲೂ ಹೆಚ್ಚಾಗಿ ವ್ಯತ್ಯಾಸ ಬರುವ ಪೇಪರ್ ಗಳ ಮೌಲ್ಯಮಾಪನ ಮಾಡಿದ ಉಪನ್ಯಾಸಕರ ವಿವರವನ್ನು ವೆಬ್ ಸೈಟ್ ನಲ್ಲಿ ಪ್ರಕಟಿಸಬೇಕು. ಇದರಿಂದ ಮಾನಸಿಕ ಹಿಂಸೆಯನ್ನು ಅನುಭವಿಸುವ ವಿದ್ಯಾರ್ಥಿಗಳ ನೋವಿಗೆ
ಪ್ರಾಯಶ್ಚಿತವಾದರೂ ಸಿಗಬಹುದೇನೋ! ಇದರಿಂದ ಉಪನ್ಯಾಸಕರಿಗೂ ಸರಕಾರಕ್ಕೂ ಹಣದ ಉಳಿತಾಯವಾದರೂ ಆಗಬಹುದು.

ಅವೈಜ್ಞಾನಿಕವಾದ ಎರಡನೇ ಪರೀಕ್ಷೆ:

ಮೊದಲ ಪರೀಕ್ಷೆ ಕಥೆ ಹೀಗಾದರೆ, ಎರಡನೇ ಪರೀಕ್ಷೆ ಕಥೆ ಮತ್ತೊಂದು. 30-4-2026 ರಿಂದ ಎರಡನೇ ಪರೀಕ್ಷೆ ಬರೆಯಲು ಪಿಯು ಬೋರ್ಡ್ ಅವಕಾಶ ಕಲ್ಪಿಸಿದೆ. ಈ ಪರೀಕ್ಷೆಯ ಅವಧಿಯಲ್ಲಿ 02-05-2026 ರಸಾಯನಶಾಸ್ತ್ರ ಪರೀಕ್ಷೆ ಇದೆ, 03-5-2026 ರಂದು ನೀಟ್ ಪರೀಕ್ಷೆ ಇದೆ. 4-5-2026 ರಂದು ಇಂಗ್ಲೀಷ್ ಪರೀಕ್ಷೆ ಇದೆ. ಒಬ್ಬ (Improvement) ಮಾಡಬೇಕೆಂಬ ವಿದ್ಯಾರ್ಥಿ ಹೇಗೆ ಅಧ್ಯಯನ ಮಾಡಲು ಸಾಧ್ಯ? ಈ ಬಗ್ಗೆ ಪರೀಕ್ಷಾ ಮಂಡಳಿಗೆ ಮಾಹಿತಿ ಇರಲಿಲ್ಲವೇ.?

ಉದ್ದೇಶಪೂರ್ವಕ ಅಂಕ ಕಡಿತ!

ಮತ್ತೊಂದೆಡೆ ಮೂರನೇ ಪರೀಕ್ಷೆ ಈ ಬಾರಿ ಇಲ್ಲ ಎಂದು ಹೇಳಲಾಗಿದೆ. ಆದರೆ ಮೂರನೇ ಪರೀಕ್ಷೆಗೆ ಅವಕಾಶ ನೀಡಬೇಕು ಎಂಬುದು ಶಿಕ್ಷಣ ತಜ್ಞರ ಮತ್ತು ಪೋಷಕರ ಕೂಗಾಗಿದೆ. ಯಾಕೆಂದರೆ ಉಪನ್ಯಾಸಕರ ಬೇಜವಾಬ್ದಾರಿತನದಿಂದಾಗಿ ಅದೆಷ್ಟೋ ವಿದ್ಯಾರ್ಥಿಗಳು ನಕಲು ಪ್ರತಿ ಶುಲ್ಕ 530 ರೂ., ಮರು ಮೌಲ್ಯಮಾಪನ ಶುಲ್ಕ 1670 ರೂ. ಪಾವತಿಸಿ ಅಂಕ ಪಡೆಯಬೇಕಾದ ಪರಿಸ್ಥಿತಿ ಬಂದಿದೆ ಎಂದಾದರೆ ಇದಕ್ಕೆ ಯಾರು ಹೊಣೆ? ಈ ವರ್ಷದ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಕೆಲವೊಂದು ಬದಲಾವಣೆಗಳು ಇದಕ್ಕೆ ಕಾರಣ ಎಂದು ಹೆಸರು ಹೇಳಲು ಇಚ್ಛಿಸದ ಅನುಭವಿ ಉಪನ್ಯಾಸಕರು ಹೇಳುತ್ತಾರೆ. ಅವರು ಹೇಳುವುದೇನೆಂದರೆ ಈ ವರ್ಷ ಮೌಲ್ಯಮಾಪನ ಮಾಡುವ ಸಂದರ್ಭದಲ್ಲಿ ಯಾರಾದರೂ ವಿದ್ಯಾರ್ಥಿಗಳು 72 ಕ್ಕಿಂತ ಅಧಿಕ ಅಂಕ ನೀಡಿದ ಉತ್ತರ ಪತ್ರಿಕೆಗಳು ಬಂದಲ್ಲಿ ಅದನ್ನು (Review) ಕಮಿಟಿಗೆ ತೋರಿಸಬೇಕೆಂಬ ನಿಯಮವಿದೆ. ಆ ಸಂದರ್ಭದಲ್ಲಿ ಕೆಲವು ಉಪನ್ಯಾಸಕರು ತಾನು (Review) ಹೋದರೆ ನನ್ನ ಮೌಲ್ಯಮಾಪನ ಕಾರ್ಯವೆಲ್ಲ ತುಂಬಾ ವಿಳಂಬವಾಗುತ್ತದೆ ಎಂದು ಉದ್ದೇಶಪೂರ್ವಕವಾಗಿಯೇ ಅಂಕಗಳನ್ನು ಕಡಿತಗೊಳಿಸುತ್ತಾರೆ ಎಂಬ ವಿಚಾರ ಹೇಳಿದ್ದಾರೆ. ಮರು ಮೌಲ್ಯಮಾಪನ ಸಂದರ್ಭದಲ್ಲಿಯೂ ಕೂಡ ಈಗಾಗಲೇ ಮೌಲ್ಯಮಾಪನ ಮಾಡಿದವರು ನಮ್ಮಂತೆ ಉಪನ್ಯಾಸಕರು, ಅವರಿಗೆ ಫೈನ್ ಅಥವಾ ದಂಡ ಬರಬಾರದು ಎಂಬ ಕಾರಣಕ್ಕೆ ಮತ್ತು ವಿದ್ಯಾರ್ಥಿಗಳು 1670 ಹಣ ಕಟ್ಟಿದ್ದಾರಲ್ಲ ಎಂಬ ಕಾರಣಕ್ಕೆ ಸರಿಯಾಗಿ ಮರು ಮೌಲ್ಯಮಾಪನವನ್ನು ಮಾಡದೆ ಒಂದೆರಡು ಅಂಕ ಹೆಚ್ಚು ಮಾಡಿ ಕಳಿಸುವ ಉಪನ್ಯಾಸಕರು ಇದ್ದಾರಂತೆ.

ರಾಜ್ಯಮಟ್ಟದ ರ್ಯಾಂಕ್ ಅಥವಾ ಅತಿ ಹೆಚ್ಚು ಅಂಕ ಪಡೆದವರು ಯಾರು ಎಂದು ಗುರುತಿಸುವಾಗ ಭಾಷಾ ವಿಷಯಗಳನ್ನು ದಯವಿಟ್ಟು ಪರಿಗಣಿಸಬೇಡಿ.
ವಿಪರ್ಯಾಸವೇನೆಂದರೆ ವಿಜ್ಞಾನ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಪಡೆದವರು ಯಾರು ಎಂದು ಕೇಳಿದರೆ ಭಾಷಾ ವಿಷಯಗಳನ್ನು ನೋಡಬೇಕಾಗುತ್ತದೆ. ಇದು ದುರಂತವೇ ಸರಿ. ಆದ್ದರಿಂದ ಇನ್ನು ಮುಂದೆ ವಿಜ್ಞಾನ ವಿಭಾಗದ ಟಾಪರ ನ್ನು ವಿಜ್ಞಾನ ವಿಷಯದ ಅಂಕಗಳ ಮೇಲೆ ಗುರುತಿಸುವುದು ಒಳ್ಳೆಯದು. ಅದೇ ರೀತಿ ವಾಣಿಜ್ಯ ವಿಭಾಗದ ಟಾಪರ್ ಗುರುತಿಸುವಾಗ ವಾಣಿಜ್ಯ ವಿಷಯಗಳನ್ನು ಪರಿಗಣಿಸಿದರೆ ಒಳ್ಳೆಯದು, ಕಲಾ ವಿಭಾಗಕ್ಕೂ ಅಷ್ಟೇ. ಬೇಕಾದರೆ ಭಾಷಾ ವಿಷಯಗಳಿಗೂ ಪ್ರತ್ಯೇಕವಾಗಿ ರ್ಯಾಂಕ್ ನೀಡಲಿ.

ಮೊದಲ ಸಲ ಫಲಿತಾಂಶ ಘೋಷಣೆಯಾದ ದಿನ ಸಂತಸ ಸಂಭ್ರಮವಾಗಲಿ ಮರು ಮೌಲ್ಯಮಾಪನದಲ್ಲಿ ಬರಲು ಸಾಧ್ಯವಿಲ್ಲ. ಕೆಲವೊಂದು ಉಪನ್ಯಾಸಕರ ತಪ್ಪಿನಿಂದಾಗಿ ವಿದ್ಯಾರ್ಥಿಗಳು ಅನುಭವಿಸುವ ಸಂಕಟಗಳಿಗೆ ನೋವುಗಳಿಗೆ ಪರಿಹಾರವೂ ಇಲ್ಲ. JEE NEET KCET ಮುಂತಾದ ಪರೀಕ್ಷೆಗಳಂತೆ (Objective) ಮಾದರಿ ಮಾಡಿ ಮೌಲ್ಯಮಾಪನ ಮಾಡಿದರೆ, ಅದೇ ಉತ್ತಮ.

ಉಪನ್ಯಾಸಕರು ತಪ್ಪು ಮಾಡಿದಾಗ ಅವರಿಗೆ ಕೇವಲ ದಂಡ ವಿಧಿಸಿದರೆ ಅದು ಮುಂದಿನ ದಿನಗಳಲ್ಲಿ ಏನೂ ಪ್ರಯೋಜನಕ್ಕೆ ಬರುವುದಿಲ್ಲ, ವಿದ್ಯಾರ್ಥಿಗಳ ಮಾನಸಿಕ ಹಿಂಸೆಗೆ ದಂಡವು ಸರಿಯಾದ ಪ್ರಾಯಶ್ಚಿತವಾಗಲು ಸಾಧ್ಯವಿಲ್ಲ. ಹೀಗಾಗಿ ಸಂಬಂಧಪಟ್ಟ ಶಿಕ್ಷಣ ಸಚಿವರು, ಶಿಕ್ಷಣ ಇಲಾಖೆ ಅಧಿಕಾರಿಗಳು, ತಜ್ಞರ ಸಮಾಗಮದಲ್ಲಿ ಒಂದು ಸಮರ್ಥ ನಿಲುವು ತಾಳಬೇಕಿದೆ. ಇಲ್ಲವೇ ಮುಂದಿನ ದಿನಗಳಲ್ಲಿ ಬದಲಾದ ಹಾಗೂ ಸ್ಪಷ್ಟ ಫಲಿತಾಂಶಕ್ಕಾಗಿ ತಾಂತ್ರಿಕತೆ ಅಭಿವೃದ್ಧಿ ಪಡಿಸಿದರಷ್ಟೇ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಲಿದೆ. ಇದರ ಜತೆಗೆ ಜನಪ್ರತಿನಿಧಿಗಳು, ಪೋಷಕರು, ಶೈಕ್ಷಣ ಸಂಸ್ಥೆ ವಿದ್ಯಾರ್ಥಿಗಳ ಪರವಾಗಿ ಧ್ವನಿಯಾಗಬೇಕಿದೆ.

Spread the love
  • Related Posts

    ಕೇಮಾರು ಶ್ರೀ ಕ್ಷೇತ್ರ ಸಾಂದೀಪನಿ ಕೇಮಾರು ಸಾಧನಾಶ್ರಮಕ್ಕೆ ₹1 ಕೋಟಿ ಅನುದಾನ, ರಾಜ್ಯ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ ಈಶ ವಿಠಲದಾಸ ಸ್ವಾಮೀಜಿ

    ಮೂಡುಬಿದಿರೆ: ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಮೂಡುಬಿದಿರೆಯ ಕೇಮಾರುವಿನಲ್ಲಿರುವ ಶ್ರೀ ಕ್ಷೇತ್ರ ಸಾಂದೀಪನಿ ಸಾಧನಾಶ್ರಮಕ್ಕೆ ಮುಖ್ಯಮಂತ್ರಿ ಡಿ. ಕೆ. ಶಿವಕುಮಾ‌ರ್ ಅವರು ₹1 ಕೋಟಿ ಅನುದಾನ ಘೋಷಿಸಿದ್ದು, ಈ ಕುರಿತು ಮಠದ ಈಶ ವಿಠಲದಾಸ ಸ್ವಾಮೀಜಿ ಹರ್ಷ ವ್ಯಕ್ತಪಡಿಸಿದ್ದಾರೆ.…

    Spread the love

    ಕಸ್ತೂರಿ ರಂಗನ್ ವರದಿ ಕುರಿತು ರೈತರ ಆತಂಕ ನಿವಾರಣೆಗೆ ಸರ್ಕಾರ ಬದ್ಧ: ಸಿ.ಎಂ ಡಿಕೆಶಿ

    ರೈತರ ಸಮಸ್ಯೆಗಳ ಕುರಿತು ಪ್ರತ್ಯೇಕವಾಗಿ ಚರ್ಚೆ; ಕರಾವಳಿ ಅಭಿವೃದ್ಧಿಗೆ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರಗಳ ನಿರೀಕ್ಷೆ ಮಂಗಳೂರು: ಕಸ್ತೂರಿ ರಂಗನ್ ವರದಿಯನ್ನು ರಾಜ್ಯ ಸರ್ಕಾರ ಈ ಹಿಂದೆಯೇ ಸ್ಪಷ್ಟವಾಗಿ ತಿರಸ್ಕರಿಸಿದೆ. ಆದರೂ ಕೇಂದ್ರ ಸರ್ಕಾರದಿಂದ ಬಂದಿರುವ ನಿರ್ದೇಶನಗಳ ಹಿನ್ನೆಲೆಯಲ್ಲಿ ಸ್ಥಳೀಯ ರೈತರಲ್ಲಿ…

    Spread the love

    You Missed

    ಕೇಮಾರು ಶ್ರೀ ಕ್ಷೇತ್ರ ಸಾಂದೀಪನಿ ಕೇಮಾರು ಸಾಧನಾಶ್ರಮಕ್ಕೆ ₹1 ಕೋಟಿ ಅನುದಾನ, ರಾಜ್ಯ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ ಈಶ ವಿಠಲದಾಸ ಸ್ವಾಮೀಜಿ

    • By admin
    • September 19, 2026
    • 5 views
    ಕೇಮಾರು ಶ್ರೀ ಕ್ಷೇತ್ರ ಸಾಂದೀಪನಿ ಕೇಮಾರು ಸಾಧನಾಶ್ರಮಕ್ಕೆ ₹1 ಕೋಟಿ ಅನುದಾನ, ರಾಜ್ಯ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ ಈಶ ವಿಠಲದಾಸ ಸ್ವಾಮೀಜಿ

    ನಾವೂರು–ಕುತ್ಲೂರು ದುರ್ಗಮ ಪ್ರದೇಶಗಳ ವಿದ್ಯುದೀಕರಣಕ್ಕೆ ವನ್ಯಜೀವಿ ಅನುಮತಿ11 ಕೆ.ವಿ. ಮಾರ್ಗವನ್ನು ಭೂಗತ ಕೇಬಲ್ ಮೂಲಕ ಅಳವಡಿಸಲು ಅವಕಾಶ – ಶಾಸಕ ಹರೀಶ್ ಪೂಂಜ

    • By admin
    • September 18, 2026
    • 14 views

    ಕಸ್ತೂರಿ ರಂಗನ್ ವರದಿ ಕುರಿತು ರೈತರ ಆತಂಕ ನಿವಾರಣೆಗೆ ಸರ್ಕಾರ ಬದ್ಧ: ಸಿ.ಎಂ ಡಿಕೆಶಿ

    • By admin
    • September 18, 2026
    • 11 views
    ಕಸ್ತೂರಿ ರಂಗನ್ ವರದಿ ಕುರಿತು ರೈತರ ಆತಂಕ ನಿವಾರಣೆಗೆ ಸರ್ಕಾರ ಬದ್ಧ: ಸಿ.ಎಂ ಡಿಕೆಶಿ

    ಆಟಿಡೊಂಜಿದಿನ ಧರ್ಮಸ್ಥಳ ಕನ್ಯಾಡಿ 2

    • By admin
    • September 15, 2026
    • 23 views

    ನಾಡಿನೆಲ್ಲೆಡೆ ಗಣಪನ ಹಬ್ಬದ ಸಡಗರ ಸಂಭ್ರಮ ಬೆಳ್ತಂಗಡಿ ತಾಲೂಕಿನಾದ್ಯಂತ 2026ರಲ್ಲಿ ವಿವಿಧೆಡೆ ಆಚರಿಸಲ್ಪಟ ಗಣಪನ ನೋಡಬನ್ನಿ

    • By admin
    • September 15, 2026
    • 31 views
    ನಾಡಿನೆಲ್ಲೆಡೆ ಗಣಪನ ಹಬ್ಬದ ಸಡಗರ ಸಂಭ್ರಮ ಬೆಳ್ತಂಗಡಿ ತಾಲೂಕಿನಾದ್ಯಂತ 2026ರಲ್ಲಿ ವಿವಿಧೆಡೆ ಆಚರಿಸಲ್ಪಟ ಗಣಪನ ನೋಡಬನ್ನಿ

    ಕಡಿರುದ್ಯಾವರ: ಗ್ರಾಮೀಣ ರಸ್ತೆಯಲ್ಲಿ ಮರ ಸಾಗಾಟದ ಲಾರಿಗಳ ಹಾವಳಿ — ರಸ್ತೆ ಹಾಳಾಗುತ್ತಿರುವ ಆರೋಪ

    • By admin
    • September 13, 2026
    • 16 views
    ಕಡಿರುದ್ಯಾವರ: ಗ್ರಾಮೀಣ ರಸ್ತೆಯಲ್ಲಿ ಮರ ಸಾಗಾಟದ ಲಾರಿಗಳ ಹಾವಳಿ — ರಸ್ತೆ ಹಾಳಾಗುತ್ತಿರುವ ಆರೋಪ