ಮಂಗಳೂರು : ಕೊರೋನಾ ಆತಂಕದ ಮಧ್ಯೆಯೇ ಅತ್ಯಂತ ಸರಳವಾಗಿ ದೇಶದಾದ್ಯಂತ ಗಣೇಶ ಹಬ್ಬವನ್ನು ಸರಳವಾಗಿ ಆಚರಿಸಲಾಯಿತು. ಬಹುತೇಕರು ಮನೆಯಲ್ಲಿಯೇ ಹಬ್ಬ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಆ ಖುಷಿಯ ಕ್ಷಣಗಳ ಫೋಟೋಗಳನ್ನು ಹಂಚಿಕೊಂಡು ಸಂತಸ ಪಟ್ಟಿದ್ದಾರೆ.
ಹಬ್ಬದ ಸಂಭ್ರಮದಲ್ಲಿದ್ದ ಮಂದಿಯ ಸಡಗರವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಆದ ಹಾಡೊಂದು ಇನ್ನಷ್ಟು ಹೆಚ್ಚಿಸಿದೆ . ಉಡುಪಿಯ ಕಲಾವಿದೆ ಮಾನಸಿ ಸುಧೀರ್ ಅವರು ಹಾಡಿರುವ ಗಣಪನ ಕುರಿತಾದ ಹಾಡು . “ಅಪ್ಪನು ಮಾಡಿದ ಚೌತಿಯ ಪ್ರತಿಮೆಗೆ ಆನೆಯ ಸೊಂಡಿಲಿನ ಮೊಗವಿತ್ತು” ಅನ್ನೋ ದಿವಂಗತ. ಮುಂಡಾಜೆ ರಾಮಚಂದ್ರ ಭಟ್ ಅವರ ಹಾಡಿಗೆ, ಮಾನಸಿ ಧ್ವನಿಯಾಗಿದ್ದಾರೆ.
ಈ ಹಾಡಿನ ಪ್ರತಿಯೊಂದು ಸಾಲು ಕನ್ನಡ ವರ್ಣಮಾಲೆಯ ಸ್ವರಾಕ್ಷರಗಳಿಂದ ಆರಂಭವಾಗೋದು ವಿಶೇಷ. ಈ ಸುಂದರವಾದ ಹಾಡಿಗೆ ಮಾನಸಿ ತಮ್ಮ ಅದ್ಭುತ ಅಭಿನಯ ಹಾಗೂ ಕಂಠದ ಮೂಲಕ ಜೀವ ತುಂಬಿದ್ದಾರೆ. ಪುಟಾಣಿ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಎಲ್ಲರೂ ಇಷ್ಟವಡುವಂತ ಹಾಡು ಇದಾಗಿದ್ದು, ಚೌತಿ ಮುಗಿದರೂ ಈ ಹಾಡನ್ನು ಕೇಳುವ ಆನಂದ ಒಂಚೂರು ಕಡಿಮೆಯಾಗಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಈ ಹಾಡು ಸಾಕಷ್ಟು ಸದ್ದು ಮಾಡುತ್ತಿದ್ದು, ವಾಟ್ಸಾಫ್, ಫೇಸ್ ಬುಕ್, ಇನ್ಸ್ಟಾಗ್ರಾಮ್ ಹೀಗೆ ಎಲ್ಲ ಕಡೆ ಶೇರ್ ಆಗುತ್ತಿದೆ. ಅಷ್ಟು ಮುದ್ದಾಗಿದೆ ಮಾನಸಿ ಸುಧೀರ್ ಅವರ ಹಾಡು ಹಾಗೂ ಅಭಿನಯ.
ಹಾಗಾದ್ರೆ ಯಾಕೆ ತಡ ನೀವು ಒಮ್ಮೆ ಹಾಡನ್ನು ಕೇಳಿ, ಆನಂದಿಸಿ