ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಶಾಸಕರಿಗೆ ಮೊಬೈಲ್ ವರ್ತಕರ ಸಂಘದ ಅಧ್ಯಕ್ಷರಿಂದ ಮನವಿ

READ ALSO

ಬೆಳ್ತಂಗಡಿ: ಲಾಕ್ಡೌನ್ ನ ಈ ಸಮಯದಲ್ಲಿ ತಾಲೂಕಿನ ಸುಮಾರು 65ಕ್ಕೂ ಹೆಚ್ಚು ಮೊಬೈಲ್ ಅಂಗಡಿಗಳು ಸಂಪೂರ್ಣ ಬಂದ್ ಆಗಿದ್ದು, ಗ್ರಾಹಕರು ತುಂಬಾ ಪರದಾಡುವಂತಾಗಿದೆ, ಕೆಲವರ ಮೊಬೈಲ್ ಕೆಟ್ಟು ಹೋಗಿ ಮಕ್ಕಳ ಆನ್ಲೈನ್ ಕ್ಲಾಸ್ ಗೆ ತುಂಬಾನೇ ತೊಂದರೆ ಆಗುತ್ತಿದೆ, ಹಳ್ಳಿಗಳಲ್ಲಿ ಸಣ್ಣ ರಿಚಾರ್ಜ್ ಗು ಮೊಬೈಲ್ ಅಂಗಡಿಯನ್ನು ಅವಲಂಬಿಸಿದ್ದು ಜನರು ತುಂಬಾ ಪರದಾಡುವಂತಾಗಿದೆ, ಕೆಲವರ ಸಿಮ್ ಹಾಳಾಗುತ್ತಿದ್ದು ಮೊಬೈಲ್ ಇಲ್ಲದೆ ತುಂಬ ಕಷ್ಟ ಅನುಭವಿಸುತಿದ್ದರೆ ಅದಲ್ಲದೆ ಸರ್ಕಾರ Online ಸೇವೆಗಳಾದ amazon flipcart ಗಳಿಗೆ ಅವಕಾಶ ಕೊಟ್ಟು ತಾಲೂಕಿನ ಎಲ್ಲಾ ವರ್ತಕರಿಗೆ ಅನ್ಯಾಯ ಆಗುತ್ತಿದೆ.ನಾವು ಬಡಪಾಯಿ ವರ್ತಕರು ಲಾಕ್ ಡೌನ್ ಓಪನ್ ಅದ ಕೂಡಲೇ ವ್ಯಾಪಾರವಿಲ್ಲದೆ ಬೀದಿಗೆ ಬರುವ ಪರಿಸ್ಥಿತಿ ಬರಬಹುದು, ಅಂಗಡಿ ಬಂದ್ ಇದ್ದ ಸಮಯದಲ್ಲಿ ಬಾಡಿಗೆ ಕೆಲಸದವರ ಖರ್ಚು, ಮನೆ ಖರ್ಚು, ಎಲ್ಲವನ್ನು ನಿಭಾಯಿಸುವುದು ಕಷ್ಟವಾಗಿದೆ, ಗ್ರಾಹಕರು ಆನ್ಲೈನ್ ಗೆ ಹೋಗುತ್ತಿರುವುದರಿಂದ ಇನ್ನು ಲಾಕ್ ಡೌನ್ ಓಪನ್ ಅದ ನಂತರ ಅಂಗಡಿ ಮಾಲೀಕರು ತುಂಬಾನೇ ನಷ್ಟ ಅನುಭವಿಸುವುದು ಗ್ಯಾರಂಟಿ, ಹಾಗಾಗಿ ನಮ್ಮ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಮೊಬೈಲ್ ಕೂಡ ಅಗತ್ಯ ವಸ್ತುಗಳಲ್ಲಿ ಒಂದು ಎಂದು ಪರಿಗಣಿಸಿ,
ಬೆಳ್ಳಿಗೆ 10 ಗಂಟೆ ಯ ತನಕ ಮೊಬೈಲ್ ಶಾಪ್ ತೆರೆಯಲು ಅವಕಾಶ ಕೊಡಬೇಕಾಗಿ ಹಾಗೆ ತಾಲೂಕಿನ ಯುವ ಜನತೆ ನಿಮ್ಮ ಮಾತನ್ನು ಕೇಳುವುದರಿಂದ online ನಲ್ಲಿ ಖರೀದಿಯನ್ನು ಕಡಿಮೆ ಮಾಡಿ ಹತ್ತಿರದ ಅಂಗಡಿಯಿಂದ ಖರೀದಿಮಾಡುವಂತೆ ಮನವಿ ಮಾಡಿಕೊಂಡು ಒಂದು ಅಭಿಯಾನ ಮಾಡಿದರೆ ಮೊಬೈಲ್ ಮಾರಾಟಗಾರರಿಗೆ ಅಲ್ಲ ಎಲ್ಲಾ ವರ್ತಕರಿಗೂ ಉಪಯೋಗ ಆಗುವುದು ಹಾಗೂ
ಸರಕಾರದಿಂದ ಮೊಬೈಲ್ ವರ್ತಕರ ಬಿಸಿನೆಸ್ ಲೋನ್ emi ಯನ್ನು 3ತಿಂಗಳ ಮಟ್ಟಿಗೆ ಯಾವುದೇ ಬಡ್ಡಿ ಹಾಕದೆ ಮುಂದೆ ಹಾಕುವಂತೆ ಸರಕಾರವನ್ನು ಒತ್ತಾಯಿಸಬೇಕಾಗಿ ಹಾಗೂ
ಎಲ್ಲಾ ಮೊಬೈಲ್ ಅಂಗಡಿ ಮಾಲೀಕರು ಮತ್ತು ನೌಕರರಿಗೆ ವಾಕ್ಸಿನೇಷನ್ ಗೆ ಅರೋಗ್ಯ ಅಧಿಕಾರಿಗಳಲ್ಲಿ ಸಂಘದಿಂದ ಅರ್ಜಿ ಕೊಟ್ಟು 1ವಾರ ಕಳೆದಿದ್ದರು, ಇನ್ನು ವ್ಯಾಕ್ಸಿನೇಷನ್ ಬಗ್ಗೆ ಯಾವುದೇ ಸಕಾರಾತ್ಮಕ ಉತ್ತರ ಬರದೇ ಇದ್ದ ಕಾರಣ ಆದಷ್ಟು ಬೇಗ ವ್ಯಾಕ್ಸಿನೇಶನ್ ಕೊಡಿಸಬೇಕಾಗಿ ಮನವಿ ಮಾಡಲಾಯಿತು, ಸರಕಾರದ ವಾಣಿಜ್ಯ ಸಂಕೀರ್ಣ ದಲ್ಲಿ ವ್ಯವರಿಸುವ ಅಂಗಡಿಯ ಕನಿಷ್ಠ 2 ತಿಂಗಳು ಬಾಡಿಗೆ ಮನ್ನಾ ಮಾಡುವ ಕುರಿತು. ಖಾಸಗಿ ವಾಣಿಜ್ಯ ಸಂಕೀರ್ಣ ದಲ್ಲಿ ವ್ಯವಹಾರ ನಡೆಸುವವರಿಗೆ ಬಾಡಿಗೆ ರಿಯಾಯಿತಿ ಮಾಡುವಂತೆ ಪತ್ರಿಕಾ ಹೇಳಿಕೆ ನೀಡುವಂತೆ
ಮೊಬೈಲ್ ರೆಟೈಲರ್ಸ್ ಪರವಾಗಿ ಬೆಳ್ತಂಗಡಿ ತಾಲೂಕು ಮೊಬೈಲ್ ರೆಟೈಲರ್ಸ್ ಯೂನಿಯನ್ ಅಧ್ಯಕ್ಷರಾದ ವೀರಚಂದ್ರ ಜೈನ್, ಜೈನ್ ಮೊಬೈಲ್ ಮಾಲೀಕರಿಂದ ಶಾಸಕರಲ್ಲಿ ವಿನಂತಿ ಮಾಡಲಾಯಿತು.