ಮಂಗಳೂರಿನ ಒಂದು ಗ್ರಾಮ ಪಂಚಾಯ್ತಿಯಲ್ಲಿ ನಮ್ಮ ಸ್ವಂತ ಬಲದಲ್ಲಿ ಗೆದ್ದಿದ್ದೇವೆ : ಎಚ್.ಡಿ.ಡಿ

ಹಾಸನ: ಇನ್ನೂ ಮೂರು ತಿಂಗಳಲ್ಲಿ ಇಡೀ ಹಾಸನ ಜಿಲ್ಲೆ ಪ್ರವಾಸ ಮಾಡುವೆ ಪಕ್ಷ ಸಂಘಟನೆ ಮಾಡಲು ಕುಮಾರಸ್ವಾಮಿ ಸಾಕಷ್ಟು ಕಾರ್ಯಕ್ರಮ ರೂಪಿಸಿಕೊಂಡಿದ್ದಾರೆ ಎಂದು ಮಾಜಿ ಪ್ರಧಾನಿ, ರಾಜ್ಯಸಭಾ ಸದಸ್ಯ ಹೆಚ್​.ಡಿ ದೇವೇಗೌಡ ರವರು ಗುರುವಾರ ಹೇಳಿದ್ದಾರೆ.

ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಚುನಾವಣೆ ಹಿನ್ನೆಲೆ ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾ ಪಂಚಾಯತ್, ತಾ.ಪಂಚಾಯತ್ ಬಿ ಫಾರಂ ಕೊಡುತ್ತೇವೆ. ಮಾರ್ಚ್ ಕೊನೆಯಲ್ಲಿ ಮತ್ತೊಂದು ಮಹಿಳಾ ಅಥವಾ ಮೈನಾರಿಟಿ ಕಾರ್ಯಕ್ರಮ ಮಾಡುತ್ತೇವೆ. ಹಿಂದೆ ಪಕ್ಷದಲ್ಲಿ ಮಾಡಿದ ಕಾರ್ಯಕ್ರಮದಂತೆ ಅವುಗಳನ್ನೆ ಮುಂದುವರೆಸುತ್ತೇವೆ ಎಂದಿದ್ದಾರೆ.

READ ALSO

ಇನ್ನು ಪಕ್ಷದ ಕುಂದು-ಕೊರತೆ ನೀಗಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತೇವೆ. ಮಂಗಳೂರಿನ ಒಂದು ಗ್ರಾಮ ಪಂಚಾಯ್ತಿಯಲ್ಲಿ ನಮ್ಮ ಸ್ವಂತ ಬಲದಲ್ಲಿ ಗೆದ್ದಿದ್ದೇವೆ.

ಮಂಗಳೂರು ಆ ಗ್ರಾಮ ಪಂಚಾಯತ್ ಉದ್ಘಾಟನೆಗೆ ನಮ್ಮನ್ನ ಆಹ್ವಾನಿಸಿದ್ದಾರೆ. ಬಿಜಾಪುರದಲ್ಲಿ ಭಾಗದಲ್ಲೂ ಗ್ರಾಮ ಪಂಚಾಯತಿ ಗೆದ್ದಿದ್ದೇವೆ. ಶರಣಗೌಡ ಪಾಟೀಲ್ ತುಂಬಾ ಆಯಕ್ಟೀವ್​ ಆಗಿ ಕೆಲಸ ಮಾಡುತ್ತಿದ್ದಾರೆ. ಹೈದ್ರಾಬಾದ್ ಕಾರ್ನಾಟಕದಲ್ಲಿ ನಮ್ಮ ಶಕ್ತಿ ಬೆಳೆಸಲು ನಿಖಿಲ್, ಪ್ರಜ್ವಲ್, ಕುಮಾರಸ್ವಾಮಿ ಎಲ್ಲಾ ಹೋಗುತ್ತಿದ್ದಾರೆ.

2023ರ ಒಳಗೆ ಇರೋದೇ ಇಲ್ಲ ಅಂತ ಕೆಲ ಮಹಾನುಭವರು ಹೇಳಿದರು. ಈ ಪಕ್ಷವನ್ನ ಮುಗಿಸಲು ಯಾರಿಂದನೂ ಆಗಲ್ಲ, ಎಲ್ಲರೂ ಪಕ್ಷದಲ್ಲೇ ಇದ್ದಾರೆ. ಉಹಾಪೋಹಕ್ಕೆ ಕರೆದರು ಅಂತ ಹೇಳ್ತಾರೆ ಎಂದು ಹಾಸನದಲ್ಲಿ ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡ ಅವರು ಮಾತನಾಡಿದ್ದಾರೆ.