ಚಾರ್ಮಾಡಿ–ಪುಂಜಾಲಕಟ್ಟೆ ಹೆದ್ದಾರಿ ಕಾಮಗಾರಿ ನಡುವೆ ಅಪಾಯಕಾರಿ ಮರಗಳ ಭೀತಿ: ನಿರ್ಲಕ್ಷ್ಯ ಮುಂದುವರಿದರೆ ಆಪತ್ತು ಕಟ್ಟಿಟ್ಟ ಬುತ್ತಿ

ಜೀವ ಬಲಿಯಾದ ಬಳಿಕವೇ ಕ್ರಮವೇ? ಹೆದ್ದಾರಿಯಲ್ಲಿ ಮರ ಧರಾಶಾಹಿ – ಅಪಾಯಕಾರಿ ಮರಗಳ ತೆರವಿಗೆ ಸಾರ್ವಜನಿಕರ ಆಗ್ರಹ

ಬೆಳ್ತಂಗಡಿ, ಜೂನ್ 9: ನಿರ್ಮಾಣ ಹಂತದಲ್ಲಿರುವ ಚಾರ್ಮಾಡಿ–ಪುಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ವಿಸ್ತರಣೆ ಹಾಗೂ ಅಭಿವೃದ್ಧಿ ಕಾಮಗಾರಿಗಳು ಭರದಿಂದ ಸಾಗುತ್ತಿವೆ. ಆದರೆ ಹೆದ್ದಾರಿಯ ಹಲವು ಭಾಗಗಳಲ್ಲಿ ರಸ್ತೆ ಬದಿಯಲ್ಲಿರುವ ಅಪಾಯಕಾರಿ ಮರಗಳನ್ನು ತೆರವುಗೊಳಿಸದೇ ಕಾಮಗಾರಿ ಮುಂದುವರಿದಿರುವುದು ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಮಳೆ ಹಾಗೂ ಬಿರುಗಾಳಿಯ ಪರಿಣಾಮವಾಗಿ ಹೆದ್ದಾರಿ ಬದಿಯ ಮರಗಳು ನಿರಂತರವಾಗಿ ಧರಾಶಾಹಿಯಾಗುತ್ತಿದ್ದು, ವಾಹನ ಸವಾರರು ಜೀವಭಯದಲ್ಲೇ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತೀಚಿನ ದಿನಗಳಲ್ಲಿ ಮರಗಳು ರಸ್ತೆ ಹಾಗೂ ವಿದ್ಯುತ್ ಕಂಬಗಳ ಮೇಲೆ ಬಿದ್ದು ಸಂಚಾರಕ್ಕೆ ಅಡಚಣೆ ಉಂಟುಮಾಡಿದ ಹಲವು ಘಟನೆಗಳು ವರದಿಯಾಗಿವೆ.ಹೆದ್ದಾರಿ ಕಾಮಗಾರಿ ಆರಂಭಕ್ಕೂ ಮುನ್ನ ಅಪಾಯಕಾರಿಯಾಗಿ ವಾಲಿರುವ ಹಾಗೂ ಬೇರುಗಳು ದುರ್ಬಲಗೊಂಡಿರುವ ಮರಗಳ ಸಮಗ್ರ ಪರಿಶೀಲನೆ ನಡೆಸಿ ಅಗತ್ಯವಿರುವ ಮರಗಳನ್ನು ತೆರವುಗೊಳಿಸಬೇಕಾಗಿತ್ತು. ಆದರೆ ಈ ಕುರಿತು ಸಮರ್ಪಕ ಕ್ರಮ ಕೈಗೊಳ್ಳದ ಕಾರಣ ಮುಂದಿನ ದಿನಗಳಲ್ಲಿ ಭಾರಿ ಅನಾಹುತ ಸಂಭವಿಸುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತವಾಗಿದೆ.

ಚಾರ್ಮಾಡಿ–ಪುಂಜಾಲಕಟ್ಟೆ ಹೆದ್ದಾರಿಯ ಮುಂಡಾಜೆ ಸೀಟುಕಾಡು ಸಮೀಪ ರಸ್ತೆ ಬದಿಯಲ್ಲಿದ್ದ ಮರಗಳು ಏಕಾಏಕಿ ಧರಾಶಾಹಿಯಾಗಿ ರಸ್ತೆಯ ಮೇಲೆ ಬಿದ್ದ ಪರಿಣಾಮ ಕೆಲಕಾಲ ವಾಹನ ಸಂಚಾರ ಸ್ಥಗಿತಗೊಂಡಿತು. ಘಟನೆ ನಡೆದ ತಕ್ಷಣ ಸಮಾಜಸೇವಕರಾದ ಸಚಿನ್ ಭಿಡೆ ಹಾಗೂ ಗಣೇಶ್ ಬಂಗೇರ ಅವರ ನೇತೃತ್ವದಲ್ಲಿ ಸ್ಥಳೀಯರ ಸಹಕಾರದೊಂದಿಗೆ ಜೆಸಿಬಿ ಬಳಸಿ ಮರಗಳನ್ನು ತೆರವುಗೊಳಿಸಿ ಸಂಚಾರವನ್ನು ಪುನಃ ಸುಗಮಗೊಳಿಸಲಾಯಿತು.

“ಅಪಘಾತ ಸಂಭವಿಸಿ ಜೀವಹಾನಿಯಾದ ನಂತರ ಕ್ರಮ ಕೈಗೊಳ್ಳುವುದಕ್ಕಿಂತ ಮುಂಚಿತವಾಗಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ. ನಿರ್ಲಕ್ಷ್ಯ ಮುಂದುವರಿದರೆ ಆಪತ್ತು ಕಟ್ಟಿಟ್ಟ ಬುತ್ತಿಯಾಗಲಿದೆ” ಎಂದು ವಾಹನ ಸವಾರರು ಹಾಗೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಬಂಧಪಟ್ಟ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ತಕ್ಷಣ ಸ್ಥಳ ಪರಿಶೀಲನೆ ನಡೆಸಿ ಅಪಾಯಕಾರಿ ಮರಗಳನ್ನು ಗುರುತಿಸಿ ತೆರವುಗೊಳಿಸುವ ಮೂಲಕ ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Spread the love
  • Related Posts

    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿರುದ್ಧ ದ ಆರೋಪ ಆಧಾರರಹಿತ: ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ವಜಾ

    ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿರುದ್ಧ ರಂಜನ್ ರಾವ್ ಯರ್ಡೂರು ಸುಪ್ರಿಂ ಕೋರ್ಟ್ ನಲ್ಲಿ ಸಲ್ಲಿಸಿದ್ದ ಮೇಲ್ಮನವಿಯನ್ನು ಆಲಿಸಿದ ನ್ಯಾಯಾಲಯ ದೂರುದಾರರು ನೀಡಿದ ಈ ದೂರು ಆಧಾರ ರಹಿತವಾಗಿದೆ ಎಂದು, ದಾವೆಯನ್ನು ಪ್ರಾಥಮಿಕ ಹಂತದಲ್ಲೇ ವಜಾಗೊಳಿಸಿದೆ. ಶ್ರೀ ಕ್ಷೇತ್ರ…

    Spread the love

    ಧರ್ಮ–ಸಂಸ್ಕೃತಿಯ ಸಾರ ಹೊತ್ತು ವಿಜೃಂಭಿಸಿದ ಚಿರಂಜೀವಿಯ 35ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ

    ಕಡಿರುದ್ಯಾವರ: ಚಿರಂಜೀವಿ ಯುವಕ ಮಂಡಲ (ರಿ) ಕಾನರ್ಪ, ಶ್ರೀ ದುರ್ಗಾಶಕ್ತಿ ಮಹಿಳಾ ಸಂಘ ಮತ್ತು 35ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿ ಇದರ ವತಿಯಿಂದ 35ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಧಾರ್ಮಿಕ ಪೂಜಾ ಕಾರ್ಯಕ್ರಮ ಹಾಗೂ ವಿವಿಧ ಗ್ರಾಮೀಣ ಕ್ರೀಡಾಕೂಟಗಳು…

    Spread the love

    You Missed

    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿರುದ್ಧ ದ ಆರೋಪ ಆಧಾರರಹಿತ: ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ವಜಾ

    • By admin
    • September 8, 2026
    • 4 views
    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿರುದ್ಧ ದ ಆರೋಪ ಆಧಾರರಹಿತ: ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ವಜಾ

    ಧರ್ಮ–ಸಂಸ್ಕೃತಿಯ ಸಾರ ಹೊತ್ತು ವಿಜೃಂಭಿಸಿದ ಚಿರಂಜೀವಿಯ 35ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ

    • By admin
    • September 8, 2026
    • 9 views
    ಧರ್ಮ–ಸಂಸ್ಕೃತಿಯ ಸಾರ ಹೊತ್ತು ವಿಜೃಂಭಿಸಿದ ಚಿರಂಜೀವಿಯ 35ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ

    ಬೆಳಾಲಿನಲ್ಲಿ ರಸ್ತೆಯ ಮಧ್ಯೆ ಕಾಡಾನೆ ಪ್ರತ್ಯಕ್ಷ: ಬೈಕ್ ಸವಾರ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರು

    • By admin
    • September 3, 2026
    • 12 views
    ಬೆಳಾಲಿನಲ್ಲಿ ರಸ್ತೆಯ ಮಧ್ಯೆ ಕಾಡಾನೆ ಪ್ರತ್ಯಕ್ಷ: ಬೈಕ್ ಸವಾರ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರು

    ಧರ್ಮಸ್ಥಳ ಕೊಕ್ಕಡ ಹೆದ್ದಾರಿ ಬದಿಯಲ್ಲಿ ಕಾಡಾನೆ ಪ್ರತ್ಯಕ್ಷ, ವಾಹನ ಸವಾರರು ಮುನ್ನೆಚ್ಚರಿಕೆ ವಹಿಸುವುದು ಸೂಕ್ತ

    • By admin
    • September 3, 2026
    • 7 views
    ಧರ್ಮಸ್ಥಳ ಕೊಕ್ಕಡ ಹೆದ್ದಾರಿ ಬದಿಯಲ್ಲಿ ಕಾಡಾನೆ ಪ್ರತ್ಯಕ್ಷ, ವಾಹನ ಸವಾರರು ಮುನ್ನೆಚ್ಚರಿಕೆ ವಹಿಸುವುದು ಸೂಕ್ತ

    APK ಬಳಿಕ .IMG, .ISO ಫೈಲ್‌ಗಳ ಮೂಲಕ ಸೈಬರ್ ದಾಳಿ; WhatsApp Web ಬಳಕೆದಾರರಿಗೆ ಎಚ್ಚರಿಕೆ

    • By admin
    • September 3, 2026
    • 10 views
    APK ಬಳಿಕ .IMG, .ISO ಫೈಲ್‌ಗಳ ಮೂಲಕ ಸೈಬರ್ ದಾಳಿ; WhatsApp Web ಬಳಕೆದಾರರಿಗೆ ಎಚ್ಚರಿಕೆ

    ಚಿರಂಜೀವಿ ಯುವಕ ಮಂಡಲ ಕಾನರ್ಪದಲ್ಲಿ ಸೆ.6ರಂದು 35ನೇ ವರ್ಷದ ಮೊಸರು ಕುಡಿಕೆ ಅಷ್ಟಮಿ ಉತ್ಸವ ಹಾಗೂ ಕೆಸರುಗದ್ದೆಯಲ್ಲಿ ಗ್ರಾಮೀಣ ಕ್ರೀಡಾಕೂಟ ಆಯೋಜನೆ

    • By admin
    • September 3, 2026
    • 16 views
    ಚಿರಂಜೀವಿ ಯುವಕ ಮಂಡಲ ಕಾನರ್ಪದಲ್ಲಿ ಸೆ.6ರಂದು 35ನೇ ವರ್ಷದ ಮೊಸರು ಕುಡಿಕೆ ಅಷ್ಟಮಿ ಉತ್ಸವ ಹಾಗೂ ಕೆಸರುಗದ್ದೆಯಲ್ಲಿ ಗ್ರಾಮೀಣ ಕ್ರೀಡಾಕೂಟ ಆಯೋಜನೆ