ಕೋಮು ಗಲಭೆಯಲ್ಲಿ ಆರ್​ಎಸ್​ಎಸ್​ ಮತ್ತು ಸಹ ಸಂಘಟನೆಗಳ ಪಾತ್ರ ಸಾಬೀತುಪಡಿಸಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸವಾಲು

ಬೆಂಗಳೂರು: ಕೋಮು ಗಲಭೆಯಲ್ಲಿ ಆರ್​ಎಸ್​ಎಸ್​ ಮತ್ತು ಸಹ ಸಂಘಟನೆಗಳ ಪಾತ್ರ ಸಾಬೀತುಪಡಿಸಿ, ಇಲ್ಲವೇ ಬೇಷರತ್ ಕ್ಷಮೆ ಕೋರಿ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ರವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸವಾಲು ಹಾಕಿದ್ದಾರೆ.

ಆರ್​ಎಸ್​ಎಸ್ ಮತ್ತು ಅದರ ಸಹ ಸಂಘಟನೆಗಳು ಕೋಮು ಗಲಭೆಯ ಸಂದರ್ಭದಲ್ಲಿ ಆಗಿರುವ ಹಾನಿಯನ್ನು ತುಂಬಿಕೊಡುವಂತೆ ಮಾಡಬೇಕು ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ಅತಿರೇಕದಿಂದ ಕೂಡಿದೆ. ಯಾವುದೇ ತನಿಖಾ ಸಂಸ್ಥೆ ಅಥವಾ ವಿಚಾರಣಾ ನ್ಯಾಯಾಲಯಗಳು ದೇಶದ ಯಾವುದೇ ಭಾಗದಲ್ಲಿ ನಡೆದ ಕೋಮು ಗಲಭೆಗಳಲ್ಲಿ ಯಾವತ್ತೂ ಆರ್​ಎಸ್​ಎಸ್ ಅಥವಾ ಅದರ ಸಹ ಸಂಘಟನೆಗಳು ಕಾರಣ ಎಂದು ಹೇಳಿಲ್ಲ. ಆದರೆ, ಸಿದ್ದರಾಮಯ್ಯ ಈ ರೀತಿ ಆರೋಪ ಮಾಡುತ್ತಿದ್ದಾರೆ ಎಂದು ಕಟೀಲ್ ಕಟು ಶಬ್ದಗಳಿಂದ ಖಂಡಿಸಿದರು.

ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಗಲಭೆಯಿಂದ ಆದ ಹಾನಿಯನ್ನು ಗಲಭೆಕೋರರಿಂದ ವಸೂಲಿ ಮಾಡುವ ಸರ್ಕಾರದ ಕ್ರಮಕ್ಕೆ ಪ್ರತಿಯಾಗಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಿಗೆ ಕೆಲವು ದಿನಗಳ ಹಿಂದೆ ಬರೆದಿರುವ 13 ಅಂಶಗಳನ್ನೊಳಗೊಂಡ 2 ಪುಟಗಳ ಪತ್ರದಲ್ಲಿ ಸಂಘ ಪರಿವಾರ ಈ ಹಿಂದೆ ನಡೆದಿರುವ ಕೋಮುಗಲಭೆಗಳಲ್ಲಿ ಆದ ಹಾನಿಯನ್ನು ತುಂಬಿಕೊಡುವಂತೆ ಮಾಡಬೇಕು ಎಂದು ಉಲ್ಲೇಖಿಸುವುದನ್ನು ಟೀಕಿಸಿದ್ದಾರೆ.

ಸಿದ್ದರಾಮಯ್ಯನವರು ಸಂಘಪರಿವಾರದಿಂದ ಹಾನಿ ವಸೂಲಿ ಮಾಡಬೇಕು ಎಂದು ಹೇಳುವ ಮೂಲಕ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆಯಲ್ಲಿ ಗಲಭೆ ಮಾಡಿದವರು ಅಲ್ಪಸಂಖ್ಯಾತರೇ ಎಂದು ಒಪ್ಪಿಕೊಂಡು ಅವರನ್ನು ರಕ್ಷಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದು ಅಲ್ಪಸಂಖ್ಯಾತರನ್ನು ಓಲೈಸುವ ಅವರ ಪಕ್ಷದ ನೀತಿಯ ಮತ್ತು ಮತ ಬ್ಯಾಂಕ್ ರಾಜಕಾರಣದ ಭಾಗವಾಗಿದೆ ಎಂದು ಪತ್ರಿಕಾ ಹೇಳಿಕೆ ಮೂಲಕ ವಾಗ್ದಾಳಿ ನಡೆಸಿದ್ದಾರೆ.

Spread the love
  • Related Posts

    ಉಭಯ ಜಿಲ್ಲೆಗಳಾದ ದಕ್ಷಿಣಕನ್ನಡ, ಉಡುಪಿಯಲ್ಲಿ ನಾಳೆ ಸಾರ್ವತ್ರಿಕ ರಜೆ

    ಮಂಗಳೂರು: ಉಭಯ ಜಿಲ್ಲೆಗಳಲ್ಲಿ ಚಂದ್ರದರ್ಶನವಾದ ಹಿನ್ನೆಲೆಯಲ್ಲಿ ಕರಾವಳಿಯಾದ್ಯಂತ (ದ.ಕ ಉಡುಪಿ) ಈದುಲ್ ಫಿತ್ ಹಬ್ಬವನ್ನು ನಾಳೆ (ಮಾ.20, ಶುಕ್ರವಾರ) ಆಚರಿಸಲಾಗುವುದು ಎಂದು ಜಿಲ್ಲಾ ಖಾಝಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಚಂದ್ರ ದರ್ಶನ ಹಿನ್ನೆಲೆಯಲ್ಲಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈದುಲ್ ಫಿತರ್…

    Spread the love

    ಕನ್ಯಾಡಿ ಸೇವಾಭಾರತಿಯಿಂದ ಉಡುಪಿಯಲ್ಲಿ 4 ಮಂದಿ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಗಾಲಿಕುರ್ಚಿ ವಿತರಣೆ :

    ಉಡುಪಿ : ಬೆಂಗಳೂರು APD ಸಂಸ್ಥೆಯ ಸಹಕಾರದೊಂದಿಗೆ ಪ್ರಸ್ತುತ ವರ್ಷದಲ್ಲಿ 100 ಗಾಲಿಕುರ್ಚಿಯನ್ನು ನೀಡುವ ಯೋಜನೆಯನ್ನು ಹೊಂದಿದ್ದು. ಅದರಂತೆ, ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಸೇವಾಧಾಮವು 8ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಸಂದರ್ಭದಲ್ಲಿ 30 ಗಾಲಿಕುರ್ಚಿಗಳನ್ನು ವಿತರಿಸಲಾಗಿತ್ತು. ಈ ತಿಂಗಳಲ್ಲಿ 32 ಗಾಲಿಕುರ್ಚಿಗಳನ್ನು…

    Spread the love

    You Missed

    ಉಭಯ ಜಿಲ್ಲೆಗಳಾದ ದಕ್ಷಿಣಕನ್ನಡ, ಉಡುಪಿಯಲ್ಲಿ ನಾಳೆ ಸಾರ್ವತ್ರಿಕ ರಜೆ

    • By admin
    • March 19, 2026
    • 33 views
    ಉಭಯ ಜಿಲ್ಲೆಗಳಾದ ದಕ್ಷಿಣಕನ್ನಡ, ಉಡುಪಿಯಲ್ಲಿ ನಾಳೆ ಸಾರ್ವತ್ರಿಕ ರಜೆ

    ಕನ್ಯಾಡಿ ಸೇವಾಭಾರತಿಯಿಂದ ಉಡುಪಿಯಲ್ಲಿ 4 ಮಂದಿ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಗಾಲಿಕುರ್ಚಿ ವಿತರಣೆ :

    • By admin
    • March 18, 2026
    • 29 views
    ಕನ್ಯಾಡಿ ಸೇವಾಭಾರತಿಯಿಂದ ಉಡುಪಿಯಲ್ಲಿ 4 ಮಂದಿ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಗಾಲಿಕುರ್ಚಿ ವಿತರಣೆ :

    ನದಿಯಲ್ಲಿ ಸ್ನಾನಕ್ಕೆ ತೆರಳಿದ ಬಾಲಕ ನೀರಿನಲ್ಲಿ ಮುಳುಗಿ ಸಾವು

    • By admin
    • March 18, 2026
    • 96 views
    ನದಿಯಲ್ಲಿ ಸ್ನಾನಕ್ಕೆ ತೆರಳಿದ ಬಾಲಕ ನೀರಿನಲ್ಲಿ ಮುಳುಗಿ ಸಾವು

    ಉತ್ತರ ಕರ್ನಾಟಕದಲ್ಲಿ ಆಲಿಕಲ್ಲು ಮಳೆಯ ಅಬ್ಬರ – ಕಾಶ್ಮೀರದಂತಾದ ದೃಶ್ಯ, ಸಂಚಾರಕ್ಕೆ ಅಡಚಣೆ

    • By admin
    • March 18, 2026
    • 68 views
    ಉತ್ತರ ಕರ್ನಾಟಕದಲ್ಲಿ ಆಲಿಕಲ್ಲು ಮಳೆಯ ಅಬ್ಬರ – ಕಾಶ್ಮೀರದಂತಾದ ದೃಶ್ಯ, ಸಂಚಾರಕ್ಕೆ ಅಡಚಣೆ

    ಕನ್ಯಾಡಿ ಸೇವಾಭಾರತಿಯಿಂದ ಶಿರಸಿಯಲ್ಲಿ 3 ಮಂದಿ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಗಾಲಿಕುರ್ಚಿ ವಿತರಣೆ

    • By admin
    • March 18, 2026
    • 40 views
    ಕನ್ಯಾಡಿ ಸೇವಾಭಾರತಿಯಿಂದ ಶಿರಸಿಯಲ್ಲಿ 3 ಮಂದಿ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಗಾಲಿಕುರ್ಚಿ ವಿತರಣೆ

    ಉಜಿರೆ: ಶುಭ ಜ್ಯುವೆಲ್ಲರ್ಸ್‌ನಲ್ಲಿ “ಶುಭ-ಗೋಲ್ಡ್” ಯೋಜನೆ ಆರಂಭ

    • By admin
    • March 17, 2026
    • 188 views
    ಉಜಿರೆ: ಶುಭ ಜ್ಯುವೆಲ್ಲರ್ಸ್‌ನಲ್ಲಿ “ಶುಭ-ಗೋಲ್ಡ್” ಯೋಜನೆ ಆರಂಭ