ಬೆಂಗಳೂರು : ಕೊರೋನಾ 2ನೇ ಅಲೆಯ ಆರ್ಥಿಕ ಸಂಕಷ್ಟದ ಹೊಡೆತದಿಂದಾಗಿ ಸಂಕಷ್ಟದಲ್ಲಿರುವಂತ ತಮ್ಮ ಗ್ರಾಹಕರನ್ನು ಸೆಳೆಯುವ ಸಲುವಾಗಿ, ನಂದಿನಿ ತನ್ನ ಉತ್ಪನ್ನಗಳ ದರವನ್ನು ಇಳಿಕೆ ಮಾಡಿದೆ. ತುಪ್ಪ, ಬೆಣ್ಣೆ ಹಾಗೂ ಹಾಲಿನ ಪುಡಿ ದರಗಳನ್ನು ಇಳಿಕೆ ಮಾಡಿ, ಗ್ರಾಹಕರಿಗೆ ಗುಡ್ ನ್ಯೂಸ್ ನೀಡಿದೆ.
ಈ ಕುರಿತಂತೆ ಕರ್ನಾಟಕ ಹಾಲು ಮಹಾಮಂಡಳಿ ನಿಯಮಿತ ವ್ಯವಸ್ಥಾಪಕ ನಿರ್ದೇಶಕರು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದು, ನಂದಿನ ತುಪ್ಪದ ದರವನ್ನು ಪ್ರತಿ ಕೆಜಿಗೆ ರೂ.20 ಇಳಿಕೆ ಮಾಡಲಾಗಿದೆ. ರೂ.440ಕ್ಕೆ ಮಾರಾಟವಾಗುತ್ತಿದ್ದಂತ 1 ಕೆಜಿ ಬೆಣ್ಣೆ ದರವನ್ನು ರೂ.420ಕ್ಕೆ ಮಾರಾಟ ಮಾಡಲಾಗುತ್ತಿದೆ.
ಕೆನೆರಹಿತ ಹಾಲಿನ ಪುಡಿ ದರವನ್ನು ರೂ.300 ರಿಂದ 270ಕ್ಕೆ ಇಳಿಕೆ ಮಾಡಲಾಗಿದೆ ಎಂಬುದಾಗಿ ತಿಳಿಸಿದೆ.
ಕೊರೋನಾ ಸಂಕಷ್ಟದ ಕಾಲದಲ್ಲಿ ಗ್ರಾಹಕರಿಗೆ ಅನುಕೂಲವಾಗಲಿ ಎನ್ನುವ ಕಾರಣಕ್ಕಾಗಿ ದರವನ್ನು ಇಳಿಕೆ ಮಾಡಲಾಗಿದೆ. ಬೆಣ್ಣೆ, ತುಪ್ಪ ಹಾಗೂ ಹಾಲಿನ ಪುಡಿ ದರ ಕಡಿತಗೊಳಿಸಲಾಗಿದ್ದು, ನಂದಿನ ಪನ್ನೀರ್ ಜೊತೆಗೆ ಚೀಸ್ ಉಚಿತವಾಗಿ ನೀಡಲಾಗುತ್ತದೆ. ಗ್ರಾಹಕರು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಿದೆ.