ಬ್ರಿಟನ್ ನಲ್ಲಿ ರೂಪಾಂತರಗೊಂಡ ಕೊರೊನಾ ವೈರಸ್…! ಇದರ ಪರಿಣಾಮ ಹೇಗಿರಲಿದೆ ಗೊತ್ತಿದೆಯೇ….?

ಬೆಂಗಳೂರು: ಬ್ರಿಟನ್ ನಲ್ಲಿ ಕಾಣಿಸಿಕೊಂಡಿರುವಂತ ಹೊಸ ಕೊರೋನಾ ವೈರಸ್ ತಳಿ, ಭಾರತಕ್ಕೂ ಕಾಲಿಟ್ಟು, ಕರುನಾಡಿಗೂ ಕಾಲಿಟ್ಟಿದ್ಯಾ ಎಂಬ ಆತಂಕ ರಾಜ್ಯದಲ್ಲಿ ಶುರುವಾಗಿದೆ. ಇದೇ ಕಾರಣದಿಂದಾಗಿ ಹೈ ಅಲರ್ಟ್ ಆಗಿರುವಂತ ರಾಜ್ಯ ಆರೋಗ್ಯ ಇಲಾಖೆ, ಇಂಗ್ಲೆಂಡ್ ನಿಂದ ಬಂದ 138 ಮಂದಿ ಪ್ರಯಾಣಿಕರ ಪತ್ತೆಗಾಗಿ ಆಪರೇಷನ್ ಶುರು ಮಾಡಿದೆ.

ಕಳೆದ ಇತ್ತೀಚೆಗೆ ಯುಕೆಯಿಂದ 138 ಜನರು ರಾಜ್ಯಕ್ಕೆ ಆಗಮಿಸಿದ್ದಾರೆ. ಅವರೆಲ್ಲರೂ ಕೊರೋನಾ ಹೊಸ ತಳಿಯ ಪರೀಕ್ಷೆ ಮಾಡಿಸದೇ ಬೆಂಗಳೂರು ಮೂಲಕ ರಾಜ್ಯಕ್ಕೆ ಆಗಮಿಸಿರುವುದಾಗಿ ತಿಳಿದು ಬಂದಿದೆ. ಹೀಗಾಗಿ ಅವರ ಕಾಂಟ್ಯಾಕ್ಟ್ ಮಾಹಿತಿಯನ್ನು ಪಡೆಯುತ್ತಿರುವಂತ ಆರೋಗ್ಯ ಇಲಾಖೆ, ಬಿಬಿಎಂಪಿ ಜೊತೆಗೂಡಿ, ಅವರ ಪತ್ತೆಗೆ ಇಳಿದಿದೆ.

ಈಗಾಗಲೇ ಆರೋಗ್ಯ ಇಲಾಖೆಯು ಹೊಸ ಕೊರೋನಾ ತಳಿಯ ಬಗ್ಗೆ ಜಾಗ್ರತೆ ವಹಿಸಿದ್ದು, ವಿದೇಶದಿಂದ ರಾಜ್ಯಕ್ಕೆ ಮರಳುತ್ತಿರುವಂತ ಪ್ರಯಾಣಿಕರಿಗೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿಯೇ ಆರ್ ಟಿ-ಪಿಸಿಆರ್ ಮೂಲಕ ಸ್ಯಾಂಪಲ್ ಸಂಗ್ರಹಿಸಿ, ನಿಮ್ಹಾನ್ಸ್ ನಲ್ಲಿರುವಂತ ಲ್ಯಾಬ್ ಗೆ ಪರೀಕ್ಷೆಗಾಗಿ ಕಳುಹಿಸಿ ಕೊಡಲಾಗುತ್ತಿದೆ. ಅಲ್ಲದೇ ವಿದೇಶದಿಂದ ಬಂದ ಪ್ರಯಾಣಿಕರನ್ನು 14 ದಿನ ಕಡ್ಡಾಯವಾಗಿ ಹೋಂ ಕ್ವಾರಂಟೈನ್ ನಲ್ಲಿ ಇರುವಂತೆಯೂ ಆದೇಶಿಸಿದೆ.

ಅಂದಹಾಗೇ ಬ್ರಿಟಂನ್ ನಿಂದ ರಾಜ್ಯಕ್ಕೆ ನಿನ್ನೆಯವರೆಗೆ 537 ಜನರು ಬಂದಿದ್ದಾರೆ. ಟೆಸ್ಟ್ ಮಾಡಿಸದೇ ಬಂದವರಿಗೆ ಕ್ವಾರಂಟೈನ್ ಕಡ್ಡಾಯಗೊಳಿಸಿರುವಂತ ಆರೋಗ್ಯ ಇಲಾಖೆ, ಯುಕೆಯಿಂದ ಬಂದವರಿಗೆ ಕ್ವಾರಂಟೈನ್ ಕಡ್ಡಾಯ ಮಾಡಿದೆ. ಕಳೆದ ನಿನ್ನೆಯಿಂದಲೇ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿದೇಶಿಗರ ತಪಾಸಣೆಗಾಗಿ ಲ್ಯಾಬ್ ರೆಡಿ ಮಾಡಲಾಗಿದೆ. ಇಂತಹ ಲ್ಯಾಬ್ ನಲ್ಲಿ ವಿದೇಶದಿಂದ ಬಂದವರ ಸ್ಯಾಂಪಲ್ ಸಂಗ್ರಹಿಸಿ ಲ್ಯಾಬ್ ಗೆ ರವಾನಿಸಲಾಗುತ್ತಿದೆ.

Spread the love
  • Related Posts

    ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 54ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭದ ವೈಭವ,106ಜೋಡಿ ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ

    ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಬುಧವಾರ ಸಂಜೆ ಗಂಟೆ 6.40ರ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ ನಡೆದ 54ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ 106 ಜೊತೆ ವಧೂ-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದರು. ಬುಧವಾರ ಬೆಳಿಗ್ಗೆ ಧರ್ಮಾಧಿಕಾರಿ…

    Spread the love

    ಬೆಂಗಳೂರಿನಲ್ಲಿ ಘನಘೋರ ದುರಂತ ಬೌರಿಂಗ್ ಆಸ್ಪತ್ರೆಯ ಕೌಂಪೌಂಡು ಕುಸಿದು ಮೂವರು ಮಕ್ಕಳ ಸಹಿತ 8ಮಂದಿಯ ದುರ್ಮರಣ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಇಂದು ಸಂಜೆ ಆರ್ಭಟಿಸಿದ ವರುಣನ ಅಬ್ಬರಕ್ಕೆ ಭೀಕರ ದುರಂತವೊಂದು ಸಂಭವಿಸಿದೆ. ಶಿವಾಜಿನಗರದಲ್ಲಿರುವ ಬೌರಿಂಗ್ ಆಸ್ಪತ್ರೆಯ ಎಮರ್ಜೆನ್ಸಿ ವಿಭಾಗದ ಬಳಿಯ ಕಾಂಪೌಂಡ್ ಗೋಡೆ ಕುಸಿದು ಬಿದ್ದ ಪರಿಣಾಮ, ಮೂವರು ಮಕ್ಕಳು ಸೇರಿದಂತೆ ಒಟ್ಟು 8 ಜನರು ಮೃತಪಟ್ಟಿದ್ದಾರೆ. ಬುಧವಾರ…

    Spread the love

    You Missed

    ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 54ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭದ ವೈಭವ,106ಜೋಡಿ ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ

    • By admin
    • April 29, 2026
    • 6 views
    ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 54ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭದ ವೈಭವ,106ಜೋಡಿ ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ

    ಬೆಂಗಳೂರಿನಲ್ಲಿ ಘನಘೋರ ದುರಂತ ಬೌರಿಂಗ್ ಆಸ್ಪತ್ರೆಯ ಕೌಂಪೌಂಡು ಕುಸಿದು ಮೂವರು ಮಕ್ಕಳ ಸಹಿತ 8ಮಂದಿಯ ದುರ್ಮರಣ

    • By admin
    • April 29, 2026
    • 44 views
    ಬೆಂಗಳೂರಿನಲ್ಲಿ ಘನಘೋರ ದುರಂತ ಬೌರಿಂಗ್ ಆಸ್ಪತ್ರೆಯ ಕೌಂಪೌಂಡು ಕುಸಿದು ಮೂವರು ಮಕ್ಕಳ ಸಹಿತ 8ಮಂದಿಯ   ದುರ್ಮರಣ

    ಕುಂಟುತ್ತಿರುವ ಕಾಮಗಾರಿಯಿಂದ ಬಿಸಿಲ ಬೇಗೆಗೆ ಬೆಂಡಾದ ಜನ: ಟ್ರಾಫಿಕ್ ಜಾಮ್ ನಿಂದ ಹೈರಾಣಾದ ಜನ

    • By admin
    • April 29, 2026
    • 88 views
    ಕುಂಟುತ್ತಿರುವ ಕಾಮಗಾರಿಯಿಂದ ಬಿಸಿಲ ಬೇಗೆಗೆ ಬೆಂಡಾದ ಜನ: ಟ್ರಾಫಿಕ್ ಜಾಮ್ ನಿಂದ ಹೈರಾಣಾದ ಜನ

    ಬಿರು ಬಿಸಿಲಿನಲ್ಲಿ ಪ್ರಾಣಿ–ಪಕ್ಷಿಗಳಿಗೆ ನೀರುಣಿಸುವ ಮಹತ್ವದ ಕಾರ್ಯಕ್ಕೆ ಮುಂದಾಗೋಣ

    • By admin
    • April 29, 2026
    • 44 views
    ಬಿರು ಬಿಸಿಲಿನಲ್ಲಿ ಪ್ರಾಣಿ–ಪಕ್ಷಿಗಳಿಗೆ ನೀರುಣಿಸುವ ಮಹತ್ವದ ಕಾರ್ಯಕ್ಕೆ ಮುಂದಾಗೋಣ

    ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ (ರಿ) ಬೆಳ್ತಂಗಡಿ ಇದರ ವತಿಯಿಂದ ಕು.ಪ್ರಾಪ್ತಿ ಎಂ ಗೌಡರಿಗೆ ಗೌರವ ಸನ್ಮಾನ

    • By admin
    • April 28, 2026
    • 84 views
    ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ (ರಿ) ಬೆಳ್ತಂಗಡಿ ಇದರ ವತಿಯಿಂದ ಕು.ಪ್ರಾಪ್ತಿ ಎಂ ಗೌಡರಿಗೆ ಗೌರವ ಸನ್ಮಾನ

    SSLC ಪರೀಕ್ಷೆಯಲ್ಲಿ ರಾಜ್ಯಕ್ಕೆ 6ಸ್ಥಾನ ಪಡೆದ ಪ್ರಾಪ್ತಿ.ಎಂ ಗೌಡ, ಪ್ರಗತಿ ಸಂಘದಿಂದ ವಿದ್ಯಾರ್ಥಿನಿಗೆ ಸನ್ಮಾನ

    • By admin
    • April 28, 2026
    • 80 views
    SSLC ಪರೀಕ್ಷೆಯಲ್ಲಿ ರಾಜ್ಯಕ್ಕೆ 6ಸ್ಥಾನ ಪಡೆದ ಪ್ರಾಪ್ತಿ.ಎಂ ಗೌಡ, ಪ್ರಗತಿ ಸಂಘದಿಂದ ವಿದ್ಯಾರ್ಥಿನಿಗೆ ಸನ್ಮಾನ