ನೀರವ್ ಮೋದಿ ಭಾರತಕ್ಕೆ ಗಡಿಪಾರು ಬ್ರಿಟನ್ ಕೋರ್ಟ್ ಮಹತ್ವದ ಆದೇಶ

ನವದೆಹಲಿ: ಪಂಜಾಬ್ ನ್ಯಾಶನಲ್ ಬ್ಯಾಂಕ್ ಸೇರಿದಂತೆ ವಿವಿಧ ಬ್ಯಾಂಕ್‍ಗಳಿಗೆ ಸುಮಾರು 14 ಸಾವಿರ ಕೋಟಿ ರೂ. ವಂಚಿಸಿದ ಪ್ರಕರಣದ ಆರೋಪಿ, ಉದ್ಯಮಿ ನೀರವ್ ಮೋದಿಯನ್ನು ಭಾರತಕ್ಕೆ ಗಡಿಪಾರು ಮಾಡುವ ಬಗ್ಗೆ ಬ್ರಿಟನ್ ಕೋರ್ಟ್ ಗುರುವಾರ ಮಹತ್ವದ ಆದೇಶ ನೀಡಿದೆ.

ನೀರವ್ ಮೋದಿ 2018ರಲ್ಲಿ ವಂಚನೆ ಪ್ರಕಣದಲ್ಲಿ ಭಾರತವನ್ನು ತೊರೆದು ಬ್ರಿಟನ್‍ನಲ್ಲಿ ನೆಲೆಸಿದ್ದು, ಈತನನ್ನು ಹಸ್ತಾಂತರಿಸುವಂತೆ ಭಾರತ ಬ್ರಿಟನ್ ಸರಕಾರಕ್ಕೆ ಮನವಿ ಸಲ್ಲಿಸಿತ್ತು. ಆದರೆ, ನೀರವ್ ಮೋದಿ ಭಾರತಕ್ಕೆ ಗಡಿಪಾರು ಮಾಡದಂತೆ ಬ್ರಿಟನ್ ಕೋರ್ಟ್ ಮೆಟ್ಟಿಲೇರಿದ್ದ. ಸುಧೀರ್ಘ ವಿಚಾರಣೆ ನಡೆಸಿದ ಬ್ರಿಟನ್ ಕೋರ್ಟ್ ಕೊನೆಗೂ ನೀರವ್ ಮೋದಿಯನ್ನು ಗಡಿಪಾರು ಮಾಡಿ ಆದೇಶ ಹೊರಡಿಸಿದೆ.

READ ALSO

ಮೂರು ವರ್ಷದ ಹಿಂದಿನ ವಂಚನೆ ಪ್ರರಕಣದಲ್ಲಿ ಪ್ರಮುಖ ಆರೋಪಿಯಾಗಿರುವ ನೀರವ್ ಮೋದಿಗೆ ಸೇರಿದ ಆಸ್ತಿಗಳನ್ನು ಕಳೆದ ವರ್ಷ ಭಾರತ ಸರಕಾರ ಮುಟ್ಟುಗೋಲು ಹಾಕಿಕೊಂಡಿತ್ತು. ಇದೀಗ ಗಡಿಪಾರು ಆದೇಶ ಹೊರಬಿದ್ದಿದ್ದು, ಇದು ಭಾರತದ ಕಾನೂನು ಹೋರಾಟಕ್ಕೆ ಸಿಕ್ಕ ದೊಡ್ಡ ಜಯವಾಗಿದೆ.