“ಈ ಕೂಸು ಆಕಸ್ಮಿಕವಾಗಿ ಬಂದಿರುವ ಕೂಸು, ನಾನು ಲೆಕ್ಕಕ್ಕೆ ಇಟ್ಟಿಲ್ಲ ಹಾಸನ ಅಭಿವೃದ್ಧಿಗೆ ಮತ್ತೆ ನಾನೆ ಬರಬೇಕು”: ಹೆಚ್.ಡಿ. ರೇವಣ್ಣ ತಿರುಗೇಟು

ಹಾಸನ: ಈ ಕೂಸು ಆಕಸ್ಮಿಕವಾಗಿ ಬಂದಿರುವ ಕೂಸಾಗಿದೆ ಎಂದು ಹಾಸನ ಕ್ಷೇತ್ರದ ಶಾಸಕ ಪ್ರೀತಂ ಜೆ. ಗೌಡರ ವಿರುದ್ಧ ಕಿಡಿಕಾರಿದ ಅವರು, ಅಭಿವೃದ್ಧಿಗೆ ಮತ್ತೆ ನಾನೆ ಬರಬೇಕು ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣನವರು ತಿರುಗೇಟು ನೀಡಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನ ಶಾಸಕರು ಇದ್ಯಾವೊದೋ ಆಕಸ್ಮಿಕವಾಗಿ ಬಂದಿರುವ ಕೂಸು ಎಂದು ವ್ಯಂಗ್ಯವಾಡಿದರು. ಹಾಸನ ಜಿಲ್ಲೆಯಲ್ಲಿ ೧೯೬೨ನೆ ಸಾಲಿನಿಂದ ದೇವೆಗೌಡರು ಸೋಲು ಗೆಲುವು ನೋಡಿದ್ದಾರೆ. ಮಾಜಿ ಶಾಸಕ ದಿವಂಗತ. ಹೆಚ್.ಎಸ್. ಪ್ರಕಾಶ್ ರನ್ನು ಹಾಸನ ಜನತೆ ೪ ಬಾರಿ ಗೆಲ್ಲಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಹೊಸ ಕೆಲಸ ವಿಮಾನ ನಿಲ್ದಾಣ ಕಾಮಗಾರಿ ಮಾಡಲಿ, ೧೦೦ ಕೋಟಿ ವೆಚ್ಚದ ಜಿಲ್ಲಾ ಕೋರ್ಟ್ ಸ್ಥಾಪಿಸಿದ್ದೇನೆ. ಕೆಲವರು ಹಾಸನ, ಮಂಡ್ಯ ಬಜೆಟ್ ಎಂದು ಚಪ್ಪಾಳೆ ತಟ್ಟಿದವರು ಹಾಸನದಲ್ಲಿ ಯಾವ ಇಲಾಖೆಯಲ್ಲಿ ಲೂಟಿ ನಡೆಯುತ್ತಿದೆ ಎಂಬುದನ್ನು ಸಮಯ ಬಂದಾಗ ಹೇಳುತ್ತೇನೆ. ನಮ್ಮ ಕೈಯಲ್ಲಿ ಚಿನ್ನದ ಲೇಪನ ಮಾಡಲು ಆಗಲಿಲ್ಲ ಅವರೇ ಲೇಪನ ಮಾಡಲಿ ಎಂದ ಅವರು, ನಾನು ಕಟ್ಟಿರುವ ನರ್ಸಿಂಗ್ ಶಾಲೆ ಮತ್ತು ಕಟ್ಟಡಗಳಿಗೆ ಬಣ್ಣ ಹೊಡೆಯಲಿ ಎಂದು ಟಾಂಗ್ ನೀಡಿದರು. ಪ್ರೀತಂ ಜೆ. ಗೌಡ ಆರೋಪಕ್ಕೆ ನಾನು ಉತ್ತರ ನೀಡುವುದಿಲ್ಲ ಉತ್ತರ ನೀಡಿದ್ದರೆ ಪೊಳ್ಳೆದು ಹೊಗುತ್ತೇನೆ. .ಚನ್ನಪಟ್ಟಣ ಕೆರೆ ಅಭಿವೃದ್ಧಿ ವಿಚಾರ ಸಮಯ ಬಂದಾಗ ಹೇಳುತ್ತೆನೆ ಚನ್ನಪಟ್ಟಣ ಕೆರೆ ಎಂಗೆ ಮಾಡಿಸುವುದು ನನಗೆ ಗೊತ್ತಿದೆ. ಹಾಸನ ಹೈಟೆಕ್ ಬಸ್ಸು ನಿಲ್ದಾಣ ಮಾಡಲು ರೇವಣ್ಣ ಬರಬೇಕಿತ್ತಾ, ಹಾಸನ ತಾಲ್ಲೂಕು ರಸ್ತೆ ಅಭಿವೃದ್ಧಿಗೆ ೧೫೦ ಕೋಟಿ ಹಣ ನೀಡಿದ್ದೇನೆ ಎಂದು ಜೆಡಿಎಸ್ ಆಡಳಿತವಧಿಯ ಅಭಿವೃದ್ಧಿ ಕೆಲಸದ ಬಗ್ಗೆ ಎಳೆ ಎಳೆಯಾಗಿ ವಿವರಿಸಿದರು.

ಹಾಸನ ಜಿಲ್ಲೆಯ ಅಭಿವೃದ್ಧಿಗೆ ಬಿಜೆಪಿ ಸರ್ಕಾರದ ಸಾಧನೆ ಎನು? ಅವರ ಕೊಡುಗೆ ಬಗ್ಗೆ ತಿಳಿಸಲಿ? ಎಂದು ಪ್ರಶ್ನಿಸಿದ ಅವರು, ನಾವು ಸಮ್ಮಿಶ್ರ ಸರ್ಕಾರದಲ್ಲಿ ಮಂಜೂರು ಮಾಡಿದ ಕೆಲಸವನ್ನು ಈಗ ತಡೆ ಹಿಡಿದಿದ್ದಾರೆ. ಹಾಸನ ಬೇಲೂರು ರಸ್ತೆ ಯಡೆಗೌಡನಹಳ್ಳಿ ಬಿಳಿಕೆರೆ ರಸ್ತೆ ಅಭಿವೃದ್ಧಿ ಕಾಮಗಾರಿ ತಡೆಹಿಡಿದಿದ್ದಾರೆ . ತಡೆಹಿಡಿದ ಕಾಮಗಾರಿಗಳು ಸದನದಲ್ಲಿ ಅಂಗಿಕಾರವಾಗಿ ಬಡ್ಜೆಟ್ ನಲ್ಲಿ ಬಂದ ಕಾಮಗಾರಿಗಳು ಅವುಗಳನ್ನು ತಡೆ ಹಿಡಿಯಲು ಸಾಧ್ಯವಿಲ್ಲ. ಈ ಜಿಲ್ಲೆಗೆ ಬಿಜೆಪಿ ಸರ್ಕಾರದ ಸಾಧನೆ ಏನು? ಗಡ್ಕರಿ ಅವರು ಫೌಂಡೇಶನ್ ಹಾಕಿದ್ದ ನೂತನ ಹೆದ್ದಾರಿಯನ್ನು ನಿಲ್ಲಿಸಿದರು. ಮಂತ್ರಿಯಾದವರು ಸರಿಯಾಗಿ ಮಾಹಿತಿ ಪಡೆದು ಹೇಳಿಕೆ ನೀಡಬೇಕು ಎಂದರು.

Spread the love
  • Related Posts

    ಇತಿಹಾಸ ನಿರ್ಮಾಣ!ಭಾರತೀಯ ಮಹಿಳಾ ಕ್ರಿಕೆಟಿಗರ ಮಡಿಲಿಗೆ ವಿಶ್ವಕಪ್🏆ಭಾರತದ ವನಿತೆಯರ ಮಡಿಲಿಗೆ ಏಕದಿನ ಕ್ರಿಕೆಟ್ ವಿಶ್ವಕಪ್‌

    ಬಹುನಿರೀಕ್ಷಿತ ಐಸಿಸಿ ವುಮೆನ್ಸ್ ಇಂಟರ್ ನ್ಯಾಷನಲ್ ವರ್ಲ್ಡ್ ಕಪ್ ನಲ್ಲಿ ಭಾರತದ ವನಿತೆಯರು ಮೇಲುಗೈ ಸಾಧಿಸಿಯೇ ಬಿಟ್ಟಿದ್ದಾರೆ. ಈ ಮೂಲಕ ಹಿಂದೆ ಫೈನಲ್ ನಲ್ಲಿ ಅನುಭವಿಸಿದ ಎರಡು ಸೋಲುಗಳಿಗೆ ಉತ್ತರ ಕಂಡುಕೊಂಡಿದ್ದಾರೆ. ವಿಶ್ವಕಪ್ ನಲ್ಲಿ ಈ ವರ್ಷ ಮೂರನೇ ಬಾರಿಗೆ ಫೈನಲ್…

    Spread the love

    ಸ.ಉ.ಹಿ.ಪ್ರಾ.ಶಾಲೆ ಕನ್ಯಾಡಿ-2ನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

    ಧರ್ಮಸ್ಥಳ: ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕನ್ಯಾಡಿ -2. 70ನೇಯ ವರ್ಷದ ಕನ್ನಡ ರಾಜ್ಯೋತ್ಸವವನ್ನು ಶಾಲೆಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಶಾಲಾ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ಶ್ರೀಯುತ ಕೆ ನಂದ ಇವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮವು ಬಹಳ ಅಚ್ಚುಕಟ್ಟಾಗಿ ನೆರವೇರಿತು. ತಾಯಿ ಭುವನೇಶ್ವರಿ…

    Spread the love

    You Missed

    ಇತಿಹಾಸ ನಿರ್ಮಾಣ!ಭಾರತೀಯ ಮಹಿಳಾ ಕ್ರಿಕೆಟಿಗರ ಮಡಿಲಿಗೆ ವಿಶ್ವಕಪ್🏆ಭಾರತದ ವನಿತೆಯರ ಮಡಿಲಿಗೆ ಏಕದಿನ ಕ್ರಿಕೆಟ್ ವಿಶ್ವಕಪ್‌

    • By admin
    • November 2, 2025
    • 22 views
    ಇತಿಹಾಸ ನಿರ್ಮಾಣ!ಭಾರತೀಯ ಮಹಿಳಾ ಕ್ರಿಕೆಟಿಗರ ಮಡಿಲಿಗೆ ವಿಶ್ವಕಪ್🏆ಭಾರತದ ವನಿತೆಯರ ಮಡಿಲಿಗೆ  ಏಕದಿನ ಕ್ರಿಕೆಟ್ ವಿಶ್ವಕಪ್‌

    ಬೆಳಾಲು ಶ್ರೀ ಧ. ಮಂ. ಅನುದಾನಿತ ಪ್ರೌಢ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

    • By admin
    • November 2, 2025
    • 13 views
    ಬೆಳಾಲು ಶ್ರೀ ಧ. ಮಂ. ಅನುದಾನಿತ ಪ್ರೌಢ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

    ಸ.ಉ.ಹಿ.ಪ್ರಾ.ಶಾಲೆ ಕನ್ಯಾಡಿ-2ನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

    • By admin
    • November 2, 2025
    • 12 views
    ಸ.ಉ.ಹಿ.ಪ್ರಾ.ಶಾಲೆ ಕನ್ಯಾಡಿ-2ನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

    ಬಿಜೆಪಿ ರಾಜ್ಯಾಧ್ಯಕ್ಷ BYV ಕುಕ್ಕೆ ಸುಬ್ರಹ್ಮಣ್ಯ ಭೇಟಿ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಸಾಥ್

    • By admin
    • November 2, 2025
    • 52 views
    ಬಿಜೆಪಿ ರಾಜ್ಯಾಧ್ಯಕ್ಷ BYV ಕುಕ್ಕೆ ಸುಬ್ರಹ್ಮಣ್ಯ ಭೇಟಿ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಸಾಥ್

    ಬೆಳ್ತಂಗಡಿ : ಮೊಗ್ರು ಗ್ರಾಮ ಮುಗೇರಡ್ಕ ನೇತ್ರಾವತಿ ನದಿಯಲ್ಲಿ ಮೊಸಳೆ ಪತ್ತೆ🐊

    • By admin
    • October 31, 2025
    • 46 views
    ಬೆಳ್ತಂಗಡಿ : ಮೊಗ್ರು ಗ್ರಾಮ ಮುಗೇರಡ್ಕ ನೇತ್ರಾವತಿ ನದಿಯಲ್ಲಿ ಮೊಸಳೆ ಪತ್ತೆ🐊

    ಬೆಳ್ತಂಗಡಿ ದೀಪಾವಳಿ ದೋಸೆ ಹಬ್ಬದಂದು ತಡೆಯಾದ ಜೈ ಭಜರಂಗಿ ಬಲಿ ತುಳು ನಾಟಕ ನವೆಂಬರ್ 01 ರಂದು ಮತ್ತೊಮ್ಮೆ ಪ್ರದರ್ಶನ

    • By admin
    • October 29, 2025
    • 59 views
    ಬೆಳ್ತಂಗಡಿ ದೀಪಾವಳಿ ದೋಸೆ ಹಬ್ಬದಂದು ತಡೆಯಾದ ಜೈ ಭಜರಂಗಿ ಬಲಿ ತುಳು ನಾಟಕ  ನವೆಂಬರ್ 01 ರಂದು ಮತ್ತೊಮ್ಮೆ ಪ್ರದರ್ಶನ