ಇತಿಹಾಸ ಪ್ರಸಿದ್ದ ಮೂಡಡ್ಕ ಉರೂಸ್ ಸಮಾರಂಭಕ್ಕೆ ಇಂದು ಚಾಲನೆ

ಸರಳಿಕಟ್ಟೆ: ಇತಿಹಾಸ ಪ್ರಸಿದ್ಧ ಉಪ್ಪಿನಂಗಡಿ ಸಮೀಪದ ಸರಳಿಕಟ್ಟೆ – ಮೂಡಡ್ಕ ದರ್ಗಾ ಶರೀಫ್ ಉರೂಸ್ ಗೆ ಇಂದು (ಮಾ.11) ಚಾಲನೆ ನೀಡಲಿದ್ದು, ಮಾರ್ಚ್ 14 ಆದಿತ್ಯವಾರದಂದು ಸಮಾರೋಪಗೊಳ್ಳಲಿದೆ.

ಇಂದು ರಾತ್ರಿ ಸಯ್ಯದ್ ಇಸ್ಮಾಯಿಲ್ ತಂಙಳ್ ಉಜಿರೆ ದುವಾಶಿರ್ವಚನಗೈಯಲಿದ್ದು, ಖ್ಯಾತ ವಾಗ್ಮಿ ಪೇರೋಡ್ ಮುಹಮ್ಮದ್ ಅಝ್ಹರಿ ಮುಖ್ಯ ಪ್ರಭಾಷಣಗೈಯಲಿದ್ದಾರೆ.

ಮಾರ್ಚ್ 12ರಂದು ಶುಕ್ರವಾರ ರಾತ್ರಿ ಶೈಖುನಾ ಅಬ್ಬಾಸ್ ಸ ಅದಿ ಉಸ್ತಾದ್ ಮದರ್ರಿಸ್ ಸರಳಿಕಟ್ಟೆ ಅವರು ದುಆ ನೆರವೇರಿಸಲಿದ್ದು, ಹುಸೈನ್ ಸಅದಿ ಕೆ.ಸಿರೋಡ್ ಧಾರ್ಮಿಕ ಪ್ರವಚನಗೈಯಲಿದ್ದಾರೆ.

ಮಾರ್ಚ್ 13 ರಂದು ಜಲಾಲಿಯ್ಯ ಮಜ್ಲಿಸ್ ಮತ್ತು ಮೂಡಡ್ಕ ವಿದ್ಯಾ ಸಂಸ್ಥೆಯ ಸ್ಥಾಪಕ ಶೈಖುನಾ T.H ಉಸ್ತಾದರ ಆಂಡ್ ನೇರ್ಚೆ ನಡೆಯಲಿದ್ದು, ದ.ಕ ಜಿಲ್ಲಾ ಸಂಯುಕ್ತ ಖಾಝಿ ಶೈಖುನಾ ಖುರ್ರತುಸ್ಸಾದಾತ್ ಕೂರತ್ ತಂಙಳ್ ದುವಾಶೀರ್ವಚನ ನೀಡಲಿದ್ದು, ಸಯ್ಯದ್ ಜಾಫರ್ ಸ್ವಾದಿಕ್ ತಂಙಳ್ ಕುಂಬೋಳ್ ಜಲಾಲಿಯ್ಯ ಮಜ್ಲೀಸ್ ಗೆ ನೇತೃತ್ವ ನೀಡಲಿದ್ದಾರೆ.
ಹಮೀದ್ ಫೈಝಿ ಕಿಲ್ಲೂರು ಮುಖ್ಯ ಪ್ರಬಾಷಣ ನಡೆಸಲಿದ್ದು, ಮೂಡಡ್ಕ ಸಂಸ್ಥೆಯ ಜನರಲ್ ಮ್ಯಾನೇಜರ್ ಅಶ್ರಫ್ ಸಖಾಫಿ ಮಾಡಾವು ಅನುಸ್ಮರಣಾ ಭಾಷಣ ನಡೆಸಲಿದ್ದಾರೆ.

ಮಾರ್ಚ್ 14ರಂದು ಆದಿತ್ಯವಾರ ಬೆಳಿಗ್ಗೆ 10 ರಿಂದ ಖತಮುಲ್ ಕುರ್-ಆನ್ ಮಜ್ಲಿಸ್, ಹಳೆ ವಿದ್ಯಾರ್ಥಿ ಸಂಗಮ, ಗಲ್ಫ್ ಮೀಟ್ ಹಾಗೂ ಉರೂಸ್ ಸಮಾರೋಪ ಸಮಾರಂಭ ನಡೆಯಲಿದೆ. ಅಸ್ಸಯ್ಯದ್ ಇಸ್ಮಾಯಿಲ್ ಅಲ್-ಹಾದಿ ತಂಙಳ್ ಅಧ್ಯಕ್ಷತೆ ವಹಿಸಲಿದ್ದು, ಸಯ್ಯದ್ ಝೈನುಲ್ ಆಬಿದೀನ್ ತಂಙಳ್ ಕೂರಿಕುಝಿ ನೇತೃತ್ವ ನೀಡಲಿದ್ದಾರೆ. ಸಯ್ಯದ್ ಪಾಟ್ರಕೋಡಿ ತಂಙಳ್ ಖತಮುಲ್ ಕುರ್-ಆನ್ ಮಜ್ಲಿಸ್ ಗೆ ನೇತೃತ್ವ ನೀಡಲಿದ್ದಾರೆ.

ಖ್ಯಾತ ವಾಗ್ಮಿ ಎಂ.ಎ ಸ್ವಲಾವುದ್ದೀನ್ ಸಖಾಫಿ ಮಾಡನ್ನೂರು ಮುಖ್ಯ ಪ್ರಭಾಷಣಗೈಯಲಿದ್ದಾರೆ ಎಂದು ಉರೂಸ್ ಸಮಿತಿಯ ಕನ್ವೀನರ್ ಕೆ.ಎಂ. ಹಕೀಂ ತನಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Spread the love
  • Related Posts

    ಬೆಳ್ತಂಗಡಿ ತಾಲೂಕಿನಾದ್ಯಂತ ಗುಡುಗು-ಸಿಡಿಲು ಸಹಿತ ಮಳೆ: ನಿಡ್ಲೆ–ಕಳೆಂಜ ರಸ್ತೆಯಲ್ಲಿ ಮರ ಬಿದ್ದು ವಿದ್ಯುತ್ ಲೈನ್ ಹಾನಿ

    Belthangady: ತಾಲೂಕಿನ ಹಲವೆಡೆ ಶನಿವಾರ ಸಂಜೆ ಉತ್ತಮ ಮಳೆಯಾಗಿದೆ.Shishila, Kokkada, Dharmasthala, Arasinamakki, Ujire ಹಾಗೂ Nidle ಮೊದಲಾದ ಕಡೆಗಳಲ್ಲಿ ಗುಡುಗು-ಸಿಡಿಲು ಸಹಿತ ಉತ್ತಮ ಮಳೆ ಸುರಿದಿದೆ. ಉಳಿದ ಕೆಲವು ಪ್ರದೇಶಗಳಲ್ಲಿ ತುಂತುರು ಹಾಗೂ ಸಾಮಾನ್ಯ ಮಳೆಯಾಗಿದೆ.ತಾಲೂಕಿನಲ್ಲಿ ಫೆಬ್ರವರಿ 21ರಂದು ಕೆಲವೆಡೆ…

    Spread the love

    “ಬಂಗಾಡಿ ಕೊಲ್ಲಿ” 28ನೇ ವರ್ಷದ ‘ಸೂರ್ಯ – ಚಂದ್ರ’ ಜೋಡುಕರೆ ಕಂಬಳ

    ಬಂಗಾಡಿ: ಸೂರ್ಯ-ಚಂದ್ರ ಹೋಡುಕರೆ ಕಂಬಳ ಸಮಿತಿ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಕಂಬಳ ಅಸೋಸಿಯೇಶನ್, ಕರ್ನಾಟಕ ಸರಕಾರ ಮತ್ತು ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಭಾಗಿತ್ವದೊಂದಿಗೆ 28ನೇ ವರ್ಷದ ಹೊನಲು ಬೆಳಕಿನ ಸೂರ್ಯ-ಚಂದ್ರ ಜೋಡುಕರೆ “ಬಂಗಾಡಿ ಕೊಲ್ಲಿ” ಬಯಲು ಕಂಬಳವು ಶ್ರೀ…

    Spread the love

    You Missed

    ಬೆಳ್ತಂಗಡಿ ತಾಲೂಕಿನಾದ್ಯಂತ ಗುಡುಗು-ಸಿಡಿಲು ಸಹಿತ ಮಳೆ: ನಿಡ್ಲೆ–ಕಳೆಂಜ ರಸ್ತೆಯಲ್ಲಿ ಮರ ಬಿದ್ದು ವಿದ್ಯುತ್ ಲೈನ್ ಹಾನಿ

    • By admin
    • March 15, 2026
    • 62 views
    ಬೆಳ್ತಂಗಡಿ ತಾಲೂಕಿನಾದ್ಯಂತ ಗುಡುಗು-ಸಿಡಿಲು ಸಹಿತ ಮಳೆ: ನಿಡ್ಲೆ–ಕಳೆಂಜ ರಸ್ತೆಯಲ್ಲಿ ಮರ ಬಿದ್ದು ವಿದ್ಯುತ್ ಲೈನ್ ಹಾನಿ

    “ಬಂಗಾಡಿ ಕೊಲ್ಲಿ” 28ನೇ ವರ್ಷದ ‘ಸೂರ್ಯ – ಚಂದ್ರ’ ಜೋಡುಕರೆ ಕಂಬಳ

    • By admin
    • March 14, 2026
    • 102 views
    “ಬಂಗಾಡಿ ಕೊಲ್ಲಿ” 28ನೇ ವರ್ಷದ ‘ಸೂರ್ಯ – ಚಂದ್ರ’ ಜೋಡುಕರೆ ಕಂಬಳ

    ಹಾವು ಕಡಿತಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರೆಗುಡ್ಡೆಯ ಮಹೇಶ್ ಮನೆಗೆ ಡಿ.ಕಿರಣ್ ಚಂದ್ರ ಪುಷ್ಪಗಿರಿ ಭೇಟಿ

    • By admin
    • March 14, 2026
    • 43 views
    ಹಾವು ಕಡಿತಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರೆಗುಡ್ಡೆಯ ಮಹೇಶ್ ಮನೆಗೆ  ಡಿ.ಕಿರಣ್ ಚಂದ್ರ ಪುಷ್ಪಗಿರಿ ಭೇಟಿ

    KSRTC ಬಸ್ ಹಾಗೂ ಕಾರಿನ ನಡುವೆ ಭೀಕರ ರಸ್ತೆ ಅಪಘಾತ ಮೂವರು ಸಾವು

    • By admin
    • March 13, 2026
    • 610 views
    KSRTC ಬಸ್ ಹಾಗೂ ಕಾರಿನ ನಡುವೆ ಭೀಕರ ರಸ್ತೆ ಅಪಘಾತ ಮೂವರು ಸಾವು

    ಎಕ್ಸೆಲ್ ಪಿ.ಯು ಕಾಲೇಜಿನಲ್ಲಿ ಎಲೆಕ್ಟ್ರಿಷಿಯನ್ ಮತ್ತು ಪ್ಲಂಬರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

    • By admin
    • March 10, 2026
    • 150 views
    ಎಕ್ಸೆಲ್ ಪಿ.ಯು ಕಾಲೇಜಿನಲ್ಲಿ ಎಲೆಕ್ಟ್ರಿಷಿಯನ್ ಮತ್ತು ಪ್ಲಂಬರ್ ಹುದ್ದೆಗಳಿಗೆ  ಅರ್ಜಿ ಆಹ್ವಾನ

    ಗುರುವಾಯನಕೆರೆ ಎಕ್ಸೆಲ್ ಟೆಕ್ ಶಾಲೆಯಲ್ಲಿ ಕೆ.ಜಿ ಮಕ್ಕಳ ಘಟಿಕೋತ್ಸವ

    • By admin
    • March 10, 2026
    • 63 views
    ಗುರುವಾಯನಕೆರೆ ಎಕ್ಸೆಲ್ ಟೆಕ್ ಶಾಲೆಯಲ್ಲಿ ಕೆ.ಜಿ ಮಕ್ಕಳ ಘಟಿಕೋತ್ಸವ