ಬೆಳ್ತಂಗಡಿ ಮುಂಡಾಜೆ ಸೀಟ್ ರಕ್ಷಿತಾರಣ್ಯದಲ್ಲಿ 6 ಮಂಗಗಳ ಮೃತದೇಹ ಪತ್ತೆ!

ಬೆಳ್ತಂಗಡಿ : ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ -73 ರ  ಮುಂಡಾಜೆ ಗ್ರಾಮದ ಕಾಯರ್ತೋಡಿ ರಸ್ತೆಯ ಸೀಟ್ ಬಳಿ ರಕ್ಷಿತಾರಣ್ಯ ಪ್ರದೇಶದಲ್ಲಿ ರಸ್ತೆ ಬದಿ 6 ಮಂಗಗಳ ಮೃತದೇಹ ಇಂದು ಬೆಳಿಗ್ಗೆ ಪತ್ತೆಯಾಗಿದ್ದು ಸುತ್ತಮುತ್ತ ಆತಂಕ ಸೃಷ್ಟಿಯಾಗಿದೆ.

ಈಗಾಗಲೇ ಹಲವು ಕಡೆಗಳಲ್ಲಿ ಮಂಗನ ಕಾಯಿಲೆಯ ಆತಂಕ ಇರುವುದರಿಂದ ಈ ರೀತಿ ರಸ್ತೆ ಬದಿ ಮೃತ ದೇಹಗಳು ಪತ್ತೆಯಾಗಿರುವುದರಿಂದ ಜನರು ಗಾಬರಿಗೊಳ್ಳುವಂತಾಗಿದೆ. ಅದಲ್ಲದೆ ರಸ್ತೆಯ ಬದಿಯಲ್ಲಿ ಏನಾದರೂ ವಿಷ ಪದಾರ್ಥ ಅಥವಾ ಯಾರಾದರೂ ವಿಷವಿಕ್ಕಿದ್ದಾರೆಯೇ ಅಥವಾ ಇನ್ನೇನಾದರೂ ಆಗಿದೆಯೇ ಎಂಬುವುದು ತನಿಖೆಯಿಂದ ತಿಳಿದು ಬರಬೇಕಾಗಿದೆ.

READ ALSO

ಈಗಾಗಲೇ ಅರಣ್ಯ ಇಲಾಖೆ, ಆರೋಗ್ಯ ಇಲಾಖೆ, ಹಾಗೂ ಪಂಚಾಯಿತಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಅಧಿಕಾರಿಗಳು ಬಂದ ನಂತರವೇ ಹೆಚ್ಚಿನ ಮಾಹಿತಿ ತಿಳಿಯಬೇಕಾಗಿದೆ.