ವಿಶೇಷ ಚೇತನರಿಗೆ ಆಶ್ರಯವಾದ ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆ : ಶಾಸಕರಾದ ರಮೇಶ್ ಭೂಸನೂರ

ಸಿಂದಗಿ : ಪ್ರತಿಯೊಂದು ಮನುಷ್ಯನಿಗೆ ಸಮಾಜದಲ್ಲಿ ಸ್ವತಂತ್ರವಾಗಿ ಬದುಕಲು ಹಕ್ಕಿದೆ. ಕೆಲವರಿಗೆ ಈ ಸಾಮರ್ಥ್ಯವಿದ್ದರೆ ಹಲವರು ಸಂತೋಷವನ್ನು ಹುಟ್ಟಿನಿಂದಲೇ, ಯೌವನದಲ್ಲಿ ಅಥವಾ ವೃದ್ಧಾಪ್ಯದಲ್ಲಿ ಬೇರೆ ಬೇರೆ ಕಾರಣಗಳಿಂದ ಕಳೆದುಕೊಂಡಿರುತ್ತಾರೆ. ಕೆಲವರಿಗೆ ಹುಟ್ಟಿನಿಂದಲೇ ಕುರುಡು, ಅಂಗವಿಕಲತೆ ಸಮಸ್ಯೆಗಳು ಬಂದರೆ ಇನ್ನು ಕೆಲವರಿಗೆ ದುರದೃಷ್ಟವಶಾತ್ ಅಪಘಾತಗಳು, ಮಾರಕ ರೋಗಗಳು ಹಾಗೂ ವಯಸ್ಸಾದಾಗ ಕಾಣಿಸಿಕೊಳ್ಳುತ್ತದೆ. ಇದನ್ನು ಸಂಪೂರ್ಣ ಸರಿಪಡಿಸಲು ಆಗದಿದ್ದರೆ ಕೆಲವೊಂದು ಬದಲಿ ಪರಿಹಾರಗಳಿವೆ. ಈ ಎಲ್ಲಾ ಸಮಸ್ಯೆಗಳನ್ನು ಮನಗಂಡು ಪೂಜ್ಯರು ವಿಶೇಷ ಚೇತನರಿಗೆ ವಿವಿಧ ಸಲಕರಣೆಗಳನ್ನು ನೀಡುವ ಜನಮಂಗಲವೆನ್ನುವ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಕಾರ್ಯಕ್ರಮದಲ್ಲಿ ಗಾಲಿಕುರ್ಚಿ, (ವೀಲ್ ಚಯರ್) ನೀರಹಾಸಿಗೆ (ವಾಟರ್ ಬೆಡ್), ನಡುಗೋಲು, (ಯು ಶೇಪ್ ವಾಕರ್) ಊರುಗೋಲು (ಆಕ್ಸಿಲರಿ ಕ್ರಚಸ್), ಏಕಕಾಲಿನ ಕೈಗೋಲು (ಸಿಂಗಲ್ ಲೆಗ್ ವಾಕಿಂಗ್ ಸ್ಟಿಕ್), ಮೊದಲಾದ ಸಲಕರಣೆಗಳನ್ನು ಮಾನ್ಯ ಶಾಸಕರಾದ ರಮೇಶ್ ಭೂಸನೂರ ರವರಿಂದ ವಿತರಿಸಲಾಯಿತು.

ಈ ಸಂದರ್ಭ ಸಿಂದಗಿ ವಿಧಾನಸಭಾ ಕ್ಷೇತ್ರದ ಶಾಸಕರಾದ ರಮೇಶ್ ಭೂಸನೂರ ರವರು ಕೊರೋನಾದಂತಹ ತುರ್ತು ಸಂದರ್ಭದಲ್ಲೂ ಶ್ರೀ ಕ್ಷೇತ್ರ ಧರ್ಮಸ್ಥಳದ ಯೋಜನೆಯ ಕಾರ್ಯಕ್ರಮದ ಪರಿಕಲ್ಪನೆಯನ್ನು ನಾನು ಕಣ್ಣಾರೆ ಕಂಡಿದ್ದು ಇದನ್ನು ಮನಸಾರೆ ಕೊಂಡಾಡುತ್ತೇನೆ. ಧರ್ಮಸ್ಥಳ ಪುಣ್ಯ ಕ್ಷೇತ್ರದ ಅಭಯ ಹಸ್ತದ ನೆರಳು ನನ್ನ ವೈಯಕ್ತಿಕ ಸಂಸಾರ ಜೀವನದಲ್ಲೂ ಇದೆ ಎಂದು ತಿಳಿಸುತ್ತಾ, ಸಾಮಾಜಿಕ ಕಳಕಳಿ, ಬಡ ವಿದ್ಯಾರ್ಥಿಗಳಿಗೆ ವಿದ್ಯಾ ದಾನ, ಗ್ರಾಮೀಣ ಭಾಗದಲ್ಲಿ ಕೆಲಸ ಮಾಡುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯ ಸಮಾಜಮುಖಿ ಕೆಲಸಗಳು ಸಮಾಜದ ಅಸಹಾಯಕರು, ನಿರ್ಗತಿಕರು, ದುರ್ಬಲರ ಸೇವೆ ಮಾಡುವುದು ದೇವರ ಸೇವೆ ಎಂದು ತಮ್ಮ ಆಂತರಿಕ ಭಾವನೆಗಳನ್ನು ಹಂಚಿಕೊಂಡರು. ಇನ್ನು ಈ ರೀತಿಯ ಕಾರ್ಯಕ್ರಮಗಳು ಯೋಜನೆಯಿಂದ ಮೂಡಿ ಬರಲಿ ಇದರೊಂದಿಗೆ ನಾವು ಕೈ ಜೋಡಿಸುತ್ತೇವೆ ಎಂದು ಪೂಜ್ಯ ಖಾವಂದರು ದಂಪತಿಗಳಿಗೆ ವಂದಿಸಿದರು.

ಜ್ಞಾನದೀಪ ಶಿಕ್ಷಕರಿಗೆ ಶಾಸಕರಿಂದ ಗೌರವಧನ ವಿತರಣೆ
ಸುಜ್ಞಾನನಿಧಿ ಶಿಷ್ಯವೇತನದ ಮಂಜೂರಾತಿ ಪತ್ರವನ್ನು ಶಾಸಕರು ನೀಡುತ್ತಿರುವುದು.

ಈ ಕಾರ್ಯಕ್ರಮದಲ್ಲಿ ವಿಶೇಷ ಚೇತನರು, ಆರೋಗ್ಯ ರಕ್ಷಾ ಫಲಾನುಭವಿಗಳು, ಜ್ಞಾನದೀಪ ಶಿಕ್ಷಕರು, ಸುಜ್ಞಾನನಿಧಿ ಫಲಾನುಭವಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು.
ಕ್ಷೇತ್ರ ಯೋಜನಾಧಿಕಾರಿಗಳಾದ ಗಿರೀಶ್ ಕುಮಾರ್ ಎಮ್, ಶ್ರೀ ಕ್ಷೇತ್ರ ಧರ್ಮಸ್ಥಳ ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳ, ಯೋ!ಜನೆಯ ಕಾರ್ಯ ವೈಖರಿಗಳ ಬಗ್ಗೆ ಪ್ರಾಸ್ತಾವಿಕವಾಗಿ ಮಾಹಿತಿಯನ್ನು ನೀಡಿದರು. ಈ ಸಂದರ್ಭ ಸುಶಾಂತ ಪೂಜಾರಿ ಉಪಸ್ಥಿತರಿದ್ದರು.

Spread the love
  • Related Posts

    ಬೆಳ್ತಂಗಡಿ ಪೊಲೀಸ್ ಇನ್ಸ್ಪೆಕ್ಟರ್ BG ಸುಬ್ಬಾಪುರಮಠ ವರ್ಗಾವಣೆ

    ಬೆಳ್ತಂಗಡಿ: ಬೆಳ್ತಂಗಡಿಯ ಪೋಲೀಸ್ ಇನ್ಸ್ಪೆಕ್ಟರ್ ಬಸವಲಿಂಗಯ್ಯ ಜಿ. ಸುಬ್ಬಾಪುರಮಠ ಸೇರಿದಂತೆ ರಾಜ್ಯದ 129 ಪೋಲೀಸ್ ಇನ್ಸ್ಪೆಕ್ಟರ್ ಗಳ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಬೆಳ್ತಂಗಡಿ ತಾಲೂಕಿನಲ್ಲಿ ಹಲವು ವರ್ಷಗಳಿಂದ ಉತ್ತಮ ಸೇವೆ ಸಲ್ಲಿಸಿದ ಪೋಲೀಸ್ ಇನ್ಸ್ಪೆಕ್ಟರ್ ಬಸವಲಿಂಗಯ್ಯ ಜಿ ಸುಬ್ಬಾಪುರಮಠ…

    Spread the love

    ಕರಾವಳಿಯ ಜಾನಪದ ಕ್ರೀಡೆಯನ್ನಾಧರಿಸಿದ “ವೀರ ಕಂಬಳ” ಚಿತ್ರ ಫೆ.27ಕ್ಕೆ ಬಿಡುಗಡೆ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ ವೀರೇಂದ್ರ ಹೆಗ್ಗಡೆಯವರು

    ಮಂಗಳೂರು: ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ, ಕರಾವಳಿಯ ಜಾನಪದ ಕ್ರೀಡೆ ಕಂಬಳದ ಹಿನ್ನೆಲೆಯುಳ್ಳ ‘ವೀರ ಕಂಬಳ’ ಚಿತ್ರವು ಫೆಬ್ರವರಿ 27, 2026 ರಂದು ತೆರೆಗೆ ಬರಲಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಈ ಚಿತ್ರದಲ್ಲಿ…

    Spread the love

    You Missed

    ಬೆಳ್ತಂಗಡಿ ಪೊಲೀಸ್ ಇನ್ಸ್ಪೆಕ್ಟರ್ BG ಸುಬ್ಬಾಪುರಮಠ ವರ್ಗಾವಣೆ

    • By admin
    • February 11, 2026
    • 312 views
    ಬೆಳ್ತಂಗಡಿ ಪೊಲೀಸ್ ಇನ್ಸ್ಪೆಕ್ಟರ್ BG ಸುಬ್ಬಾಪುರಮಠ ವರ್ಗಾವಣೆ

    ಕರಾವಳಿಯ ಜಾನಪದ ಕ್ರೀಡೆಯನ್ನಾಧರಿಸಿದ “ವೀರ ಕಂಬಳ” ಚಿತ್ರ ಫೆ.27ಕ್ಕೆ ಬಿಡುಗಡೆ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ ವೀರೇಂದ್ರ ಹೆಗ್ಗಡೆಯವರು

    • By admin
    • February 11, 2026
    • 136 views
    ಕರಾವಳಿಯ ಜಾನಪದ ಕ್ರೀಡೆಯನ್ನಾಧರಿಸಿದ “ವೀರ ಕಂಬಳ” ಚಿತ್ರ ಫೆ.27ಕ್ಕೆ ಬಿಡುಗಡೆ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ ವೀರೇಂದ್ರ ಹೆಗ್ಗಡೆಯವರು

    ಬೆಳ್ತಂಗಡಿ ಚಿರತೆ ಹಾವಳಿ ಕ್ರಮಕ್ಕೆ ಒತ್ತಾಯಿಸಿ ಸ್ನೇಹಜ್ಯೋತಿ ಮಹಿಳಾ ತಾಲೂಕು ಒಕ್ಕೂಟ ದಿಂದ ಮನವಿ

    • By admin
    • February 10, 2026
    • 53 views
    ಬೆಳ್ತಂಗಡಿ ಚಿರತೆ ಹಾವಳಿ ಕ್ರಮಕ್ಕೆ ಒತ್ತಾಯಿಸಿ ಸ್ನೇಹಜ್ಯೋತಿ ಮಹಿಳಾ ತಾಲೂಕು ಒಕ್ಕೂಟ ದಿಂದ ಮನವಿ

    ದಕ್ಷಿಣ ಕನ್ನಡ ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶರ ಭೇಟಿ

    • By admin
    • February 10, 2026
    • 37 views
    ದಕ್ಷಿಣ ಕನ್ನಡ ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶರ ಭೇಟಿ

    ಚಿರತೆ ದಾಳಿ ಕೂಲಿಕಾರ್ಮಿಕರಿಗೆ ಗಾಯ ಆನೆಹಾವಳಿಯ ಬಳಿಕ ಇದೀಗ ಚಿರತೆ ಕಾಟಕ್ಕೆ ಬೆಚ್ಚಿಬಿದ್ದ ಕಾರ್ಮಿಕರು

    • By admin
    • February 9, 2026
    • 76 views
    ಚಿರತೆ ದಾಳಿ ಕೂಲಿಕಾರ್ಮಿಕರಿಗೆ ಗಾಯ ಆನೆಹಾವಳಿಯ ಬಳಿಕ ಇದೀಗ ಚಿರತೆ ಕಾಟಕ್ಕೆ ಬೆಚ್ಚಿಬಿದ್ದ ಕಾರ್ಮಿಕರು

    ಶ್ರೀ ಕ್ಷೇತ್ರ ಮೊಂಟೆತ್ತಡ್ಕದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ

    • By admin
    • February 8, 2026
    • 49 views
    ಶ್ರೀ ಕ್ಷೇತ್ರ ಮೊಂಟೆತ್ತಡ್ಕದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ