ಬೆಳ್ತಂಗಡಿ: ಸ್ಪಂದನಾ ಸೇವಾ ಸಂಘ ಬೆಳ್ತಂಗಡಿ ಇದರ ವತಿಯಿಂದ ಮಗಳ ಮಾನಸಿಕ ಆರೋಗ್ಯ ಸಮಸ್ಯೆ, ಮೊಮ್ಮಕ್ಕಳ ಶಿಕ್ಷಣದ ಹೊರೆ ಹಾಗೂ ಕಡುಬಡತನ ಮೊದಲಾದ ಸಮಸ್ಯೆಗಳಿಂದ ಬಳಲುತ್ತಿರುವ ಬೆಳ್ತಂಗಡಿ ತಾಲೂಕು ನಿಡ್ಲೆ ಗ್ರಾಮದ ಸಂಕದಕಟ್ಟೆ ನಿವಾಸಿ ಶ್ರೀಯುತ ಚೆನ್ನಪ್ಪ ಗೌಡ – ಕಮಲ ದಂಪತಿಯ ಕುಟುಂಬಕ್ಕೆ ರೂ15,000/-ದ ಚೆಕ್ಕನ್ನು ನಿಡ್ಲೆ ಗ್ರಾಮ ಸಮಿತಿಯ ಅಧ್ಯಕ್ಷರಾದ ನಿವೃತ್ತ ಉಪ ತಹಶೀಲ್ದಾರ ಶ್ರೀಯುತ ಚೆನ್ನಪ್ಪ ಗೌಡ ಇವರ ಮೂಲಕ ಹಸ್ತಾಂತರ ಮಾಡಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಮೋಹನ್ ಗೌಡ ಕೊಯ್ಯೂರು, ತಾಲೂಕು ಸಂಘದ ನಿರ್ದೇಶಕರಾದ ಆನಂದ ಗೌಡ ಡಿ. ಉಜಿರೆ, ವಾಣಿ ಸೌಹಾರ್ದ ಕೋ-ಆಪರೇಟಿವ್ ಲಿ. ನ ನಿರ್ದೇಶಕರಾದ ಸುರೇಶ್ ಕೌಡಂಗೆ, ತಾಲೂಕು ಯುವ ವೇದಿಕೆಯ ಸದಸ್ಯರಾದ ಮಂಜುನಾಥ ನಿಡ್ಲೆ ಮತ್ತು ನಿತಿನ್ ಗೌಡ ಹೆಚ್. ಕಲ್ಮಂಜ, ನಿಡ್ಲೆ ಗ್ರಾಮದ ಯುವ ವೇದಿಕೆಯ ಕಾರ್ಯದರ್ಶಿ ರಾಜೇಂದ್ರ ನಿಡ್ಲೆ, ಸ್ಪಂದನಾ ಸೇವಾ ಸಂಘದ ಸಂಚಾಲಕರಾದ ಸೀತರಾಮ್ ಬೆಳಾಲು ಹಾಗೂ ಸ್ಥಳೀಯ ನಿಡ್ಲೆ ಗ್ರಾಮದ ಸ್ವಜಾತಿ ಬಾಂಧವರು ಉಪಸ್ಥಿತರಿದ್ದರು.