ರಾಜ್ಯದಲ್ಲಿಂದು ವೈರಲ್ ವೈರಸ್ ಸೋಂಕಿಗೆ ಬಲಿಯಾದವರೇಷ್ಟು? ಸೋಂಕಿತರೇಷ್ಟು?

ಬೆಂಗಳೂರು: ರಾಜ್ಯಾದ್ಯಂತ ಕೊರೋನಾ ಮಹಾಮಾರಿ ವೈರಸ್ ಆರ್ಭಟ ದಿನೆದಿನೇ ಏರಿಕೆಯಾಗುತ್ತಿದ್ದು ರಾಜ್ಯದ 30 ಜಿಲ್ಲೆಯಲ್ಲೂ ವೈರಸ್ ಕಾಟ ಕಾಡುತ್ತಿದೆ.

ರಾಜ್ಯದಲ್ಲಿಂದು3648 ಸೋಂಕಿತರು ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 67420 ಕ್ಕೆ ಏರಿಕೆಯಾಗಿದೆ.

READ ALSO

ರಾಜ್ಯದಲ್ಲಿ ಕೊರೋನಾ ಮರಣ ಮೃದಂಗಕ್ಕೆ72 ಮಂದಿ ಬಲಿಯಾಗಿದ್ದು ಸಾವಿನ ಸಂಖ್ಯೆ 1403ಕ್ಕೆ ಏರಿಕೆಯಾಗಿದೆ.

ಬೆಂಗಳೂರಿನಲ್ಲಿಂದು 1452 ಸೋಂಕಿತರು ಪತ್ತೆಯಾಗಿದ್ದು 31ಮಂದಿಯನ್ನು ಹೆಮ್ಮಾರಿ ಬಲಿ ಪಡೆದಿದೆ.

ಬೆಂಗಳೂರು, ಬಳ್ಳಾರಿ,ವಿಜಯಪುರ ಸೇರಿದಂತೆ ಪ್ರಮುಖ ಜಿಲ್ಲೆಯಲ್ಲಿ ಅತೀ ಹೆಚ್ಚಿನ ಸೋಂಕಿತರು ಪತ್ತೆಯಾಗಿದ್ದಾರೆ.

ರಾಜ್ಯದಲ್ಲಿಂದು 730 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿರುತ್ತಾರೆ.

ಕಾಲನಿರ್ಣಯನ್ಯೂಸ್ ವಾಟ್ಸಾಪ್ ಗ್ರೂಫ್ ಸೇರಲು ಇಲ್ಲಿ ಕ್ಲಿಕ್ ಮಾಡಿ https://chat.whatsapp.com/CTDH16qVW5RL023JwWgknA