“ಶುಭಂ” ಕರೋತಿ ಮೈತ್ರೇಯೀ ಗುರುಕುಲ’ ದಲ್ಲಿ ಸಿಗಲಿದೆ ಉಚಿತ ಶಿಕ್ಷಣ

ಬೆಂಗಳೂರು: ಕರ್ನಾಟಕದ ಹೆಮ್ಮೆಯ ಪ್ರಥಮ ಹೆಣ್ಣುಮಕ್ಕಳ ಗುರುಕುಲ ‘ಶುಭಂ ಕರೋತಿ ಮೈತ್ರೇಯೀ ಗುರುಕುಲ’ ಇದರ ಚಟುವಟಿಕೆಗಳು ಸಮಾಜದ ಸಹಕಾರದಿಂದ ಬಹಳ ಸೊಗಸಾಗಿ ನಡೆಯುತ್ತಿದೆ.

ನಿಮಗೆಲ್ಲಾ ತಿಳಿದಂತೆ ಆಹಾರ, ವಸತಿಗಳೊಂದಿಗೆ , ನಮ್ಮ ಭಾರತೀಯ ಸಂಸ್ಕೃತಿಯ ಹಿನ್ನಲೆಯಲ್ಲಿ ,ಪಠ್ಯ ಶಿಕ್ಷಣ ಒಳಗೊಂಡಂತೆ , ಪಠ್ಯೇತರ ಕೌಶಲ್ಯಗಳಾದ ಭರತನಾಟ್ಯ, ಯಕ್ಷಗಾನ, ಸಂಗೀತ, ಕೀಬೋರ್ಡ್, ಕೊಳಲು, ವಸ್ತು ತಯಾರಿಕೆ ಮುಂತಾದ ತರಬೇತಿಯನ್ನು ಉಚಿತವಾಗಿ ನೀಡುತ್ತಾ ಬಂದಿದ್ದು, ಕಳೆದ 26 ವರ್ಷಗಳಿಂದ ಜನರ ಪ್ರೀತಿಗೆ, ಪ್ರೋತ್ಸಾಹಕ್ಕೆ ಸಾಕ್ಷಿಯಾಗಿ ಬೆಳೆದುಬಂದಿದೆ.

READ ALSO

ಇದೀಗ 6ನೇ ತರಗತಿಗೆ ಹೆಣ್ಣು ಮಕ್ಕಳ ಪ್ರವೇಶಾತಿ ಪ್ರಕ್ರಿಯೆಯು ಆರಂಭಗೊಂಡಿದೆ. 6ನೇ ತರಗತಿಯಿಂದ ಮುಂದಿನ 12 ವರ್ಷಗಳ ಉಚಿತ ಶಿಕ್ಷಣವನ್ನು ಪಡೆದುಕೊಳ್ಳಲು ಇದೊಂದು ಸುವರ್ಣಾವಕಾಶ.

ಪ್ರವೇಶಾತಿ ಅರ್ಜಿಗಳನ್ನು ತೆಗೆದುಕೊಳ್ಳಲು ನಮ್ಮ ವೆಬ್ಸೈಟ್ ಅನ್ನು ಸಂಪರ್ಕಿಸಬಹುದು, ಇಲ್ಲವೇ ನೇರವಾಗಿ ಈ ಕೆಳಗಿನ ವಿಳಾಸಕ್ಕೆ ಸಂಪರ್ಕಿಸಬಹುದು.

ವಿಳಾಸ:-
ಶುಭಂ” ಕರೋತಿ ಮೈತ್ರೇಯೀ ಗುರುಕುಲ
#52/1, ದೊಡ್ಡ ಆಲದ ಮರ ರಸ್ತೆ, ರಾಮೋಹಳ್ಳಿ, ಕೆಂಗೇರಿ ಹೋಬಳಿ, ಬೆಂಗಳೂರು -560074
ದೂರವಾಣಿ : 080-28437423, +919900051846.
Web: shubhamkarotigurukula.Com