ಕೇಂದ್ರ ರೈಲ್ವೇ ಖಾತೆಯ ರಾಜ್ಯ ಸಚಿವ ಸುರೇಶ್ ಅಂಗಡಿ ಇನ್ನಿಲ್ಲ

ಹೊಸದಿಲ್ಲಿ: ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ವಿಧಿವಶರಾಗಿದ್ದಾರೆ. ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ಅವರು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.

ಸಂಸದ ಸುರೇಶ್ ಅಂಗಡಿ ಅವರಿಗೆ ಕಳೆದ ವಾರ ಕೋವಿಡ್ ಸೋಂಕು ತಗಲಿತ್ತು. ಯಾವುದೇ ರೋಗ ಲಕ್ಷಣ ಇಲ್ಲದೇ ಇದ್ದರೂ ಸುರೇಶ್ ಅಂಗಡಿ ಅವರು ವೈದ್ಯರ ಸಲಹೆ ಮೇರೆಗೆ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು.

ಕೋವಿಡ್ ಸೋಂಕಿನ ಕಾರಣದಿಂದ ಸುರೇಶ್ ಅಂಗಡಿ ಅವರು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ 65 ವರ್ಷದ ಸಂಸದ ಅಂಗಡಿ ಅವರು ಇಂದು ಸಾಯಂಕಾಲ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಇದೀಗ ಲಭಿಸಿದೆ.

ಸುರೇಶ್ ರವರು ಸೋಮವ್ವ ಮತ್ತು ಚೆನ್ನಬಸಪ್ಪ ಅಂಗಡಿ ದಂಪತಿಗೆ 1955 ಜೂನ್ 1 ಜನಿಸಿದರು. ಅವರಿಗೆ ಮದುವೆಯಾಗಿ 2 ಹೆಣ್ಣು ಮಕ್ಕಳಿದ್ದಾರೆ. ಅವರು ಬೆಳಗಾವಿ ಜಿಲ್ಲೆಯ ಬೆಳಗಾವಿ ತಾಲ್ಲೂಕಿನ ಕೆ.ಕೆ. ಕೊಪ್ಪಾ ಗ್ರಾಮದವರು.

4 ಬಾರಿ ಲೋಕಸಭೆ ಸಂಸದರಾಗಿ ಸುರೇಶ್ ಅಂಗಡಿ ಆಯ್ಕೆಯಾಗಿದ್ದರು. 2004, 2009, 2014 ಮತ್ತು 2019ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಗೆದ್ದಿದ್ದರು.

ಸುರೇಶ್ ಅಂಗಡಿ ಅವರು ಬೆಳಗಾವಿಯ ಎಸ್.ಎಸ್.ಎಸ್.ಸಮಿತಿ ಕಾಲೇಜ್ ಆಫ್ ಕಾಮರ್ಸ್ ನಿಂದ ಪದವಿಯನ್ನು ಪಡೆದಿದ್ದರು. ನಂತರ ಅವರು ಬೆಳಗಾವಿಯ ಪ್ರತಿಷ್ಠಿತ ರಾಜ ಲಖಮ್ ಗೌಡ ಕಾನೂನು ಕಾಲೇಜಿನಿಂದ ಕಾನೂನು ಪದವಿ ಪಡೆದರು.

Spread the love
  • Related Posts

    ಹಾಸನಾಂಬೆ ದರ್ಶನೋತ್ಸವಕ್ಕೆ ಭಕ್ತಸಾಗರ; ಈ ಬಾರಿ ₹29.55 ಕೋಟಿ ದಾಖಲೆಯ ಆದಾಯ!

    ಹಾಸನ: ವರ್ಷಕ್ಕೊಮ್ಮೆ ಮಾತ್ರ ದರ್ಶನ ನೀಡುವ ಶಕ್ತಿ ದೇವತೆ ಹಾಸನಾಂಬೆ ದರ್ಶನೋತ್ಸವವು ಈ ಬಾರಿ ಎಲ್ಲಾ ಹಳೆಯ ದಾಖಲೆಗಳನ್ನು ಮುರಿದು ಸಾರ್ವಕಾಲಿಕ ಇತಿಹಾಸ ನಿರ್ಮಿಸಿದೆ. ದೇವಾಲಯದ ಹುಂಡಿ ಎಣಿಕೆ ಕಾರ್ಯವು ಗುರುವಾರ ಸಂಪೂರ್ಣಗೊಂಡಿದ್ದು, ಈ ವರ್ಷ ಬರೋಬ್ಬರಿ 29 ಕೋಟಿ 55…

    Spread the love

    ಉಜಿರೆ–ಬೆಳ್ತಂಗಡಿಯಲ್ಲಿ ಮೊಬೈಲ್ ಕಳ್ಳರ ಹಾವಳಿ! ಮಹಿಳೆಯರೇ ಟಾರ್ಗೆಟ್? ಬಸ್ ಹತ್ತುವ ಮಹಿಳೆಯರ ಮೊಬೈಲ್‌ಗೆ ಕಳ್ಳರ ಕಣ್ಣು!

    ಉಜಿರೆ–ಬೆಳ್ತಂಗಡಿಯಲ್ಲಿ ಮೊಬೈಲ್ ಕಳ್ಳರ ಕೈಚಳಕ!ಮಹಿಳೆಯರೇ ಟಾರ್ಗೆಟ್!? ಬಸ್ ಏರುವ ವೇಳೆ ಮೊಬೈಲ್ ಕಳ್ಳತನದ ಆತಂಕ ಬೆಳ್ತಂಗಡಿ: ಉಜಿರೆ ಹಾಗೂ ಬೆಳ್ತಂಗಡಿ ಭಾಗದಲ್ಲಿ ಬಸ್ ಪ್ರಯಾಣಿಕರ ಮೊಬೈಲ್ ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಆತಂಕ ವ್ಯಕ್ತವಾಗಿದೆ. ವಿಶೇಷವಾಗಿ ಬೆಳಿಗ್ಗೆ ಹಾಗೂ ಸಂಜೆ ಜನದಟ್ಟಣೆ…

    Spread the love

    You Missed

    ಹಾಸನಾಂಬೆ ದರ್ಶನೋತ್ಸವಕ್ಕೆ ಭಕ್ತಸಾಗರ; ಈ ಬಾರಿ ₹29.55 ಕೋಟಿ ದಾಖಲೆಯ ಆದಾಯ!

    • By admin
    • November 12, 2026
    • 4 views
    ಹಾಸನಾಂಬೆ ದರ್ಶನೋತ್ಸವಕ್ಕೆ ಭಕ್ತಸಾಗರ; ಈ ಬಾರಿ ₹29.55 ಕೋಟಿ ದಾಖಲೆಯ ಆದಾಯ!

    ಉಜಿರೆ–ಬೆಳ್ತಂಗಡಿಯಲ್ಲಿ ಮೊಬೈಲ್ ಕಳ್ಳರ ಹಾವಳಿ! ಮಹಿಳೆಯರೇ ಟಾರ್ಗೆಟ್? ಬಸ್ ಹತ್ತುವ ಮಹಿಳೆಯರ ಮೊಬೈಲ್‌ಗೆ ಕಳ್ಳರ ಕಣ್ಣು!

    • By admin
    • November 6, 2026
    • 12 views
    ಉಜಿರೆ–ಬೆಳ್ತಂಗಡಿಯಲ್ಲಿ ಮೊಬೈಲ್ ಕಳ್ಳರ ಹಾವಳಿ! ಮಹಿಳೆಯರೇ ಟಾರ್ಗೆಟ್? ಬಸ್ ಹತ್ತುವ ಮಹಿಳೆಯರ ಮೊಬೈಲ್‌ಗೆ ಕಳ್ಳರ ಕಣ್ಣು!

    ಹಿರಿಯ ಸಾಹಿತಿ, ಸಂಶೋಧಕ ಡಾ. ವ್ಯಾಸರಾವ್ ನಿಂಜೂರು ನಿಧನ

    • By admin
    • November 3, 2026
    • 10 views
    ಹಿರಿಯ ಸಾಹಿತಿ, ಸಂಶೋಧಕ ಡಾ. ವ್ಯಾಸರಾವ್ ನಿಂಜೂರು ನಿಧನ

    ಮಂಗಳೂರಿನಲ್ಲಿ ಡ್ರಗ್ಸ್ ಜಾಲ ಪತ್ತೆ: ₹15.30 ಲಕ್ಷದ MDMA ಸಹಿತ ಬೆಳ್ತಂಗಡಿ ಮೂಲದ ಮಹಿಳೆ ಅರೆಸ್ಟ್!

    • By admin
    • November 2, 2026
    • 11 views
    ಮಂಗಳೂರಿನಲ್ಲಿ ಡ್ರಗ್ಸ್ ಜಾಲ ಪತ್ತೆ: ₹15.30 ಲಕ್ಷದ MDMA ಸಹಿತ ಬೆಳ್ತಂಗಡಿ ಮೂಲದ ಮಹಿಳೆ ಅರೆಸ್ಟ್!

    ಕಂಬಳದ ಸೊಬಗು, ಮೈಸೂರು ದಸರಾಗೆ ಹೊಸ ಮೆರುಗು ನೀಡಿದ ತುಳುನಾಡಿನ ಜನಪದ ಕ್ರೀಡೆ

    • By admin
    • November 1, 2026
    • 17 views

    ಬೆಳ್ತಂಗಡಿ ತಾಲೂಕಿನ 7ಮಂದಿಗೆ ಒಲಿದು ಬಂದ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

    • By admin
    • November 1, 2026
    • 11 views
    ಬೆಳ್ತಂಗಡಿ ತಾಲೂಕಿನ 7ಮಂದಿಗೆ ಒಲಿದು ಬಂದ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ