ತುಮಕೂರು: ಇಷ್ಟು ದಿನ ಎಲ್ಲೋ ಮತಾಂತರ ನಡೆಯುತ್ತಿದೆ ಎಂದು ಸುದ್ದಿಯನ್ನು ಕೇಳುತ್ತಿದ್ದ, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳನ್ನು ನೋಡುತ್ತಿದ್ದ ಕಲ್ಪತರು ನಾಡು ತಿಪಟೂರಿನ ಜನತೆಗೆ ದೊಡ್ಡ ಶಾಕ್ ಎದುರಾಗಿದೆ.
ತಿಪಟೂರು ತಾಲೂಕಿನ ಗೊರವನಹಳ್ಳಿ ಎಂಬಲ್ಲಿ ಬಾಡಿಗೆ ಮನೆ ಪಡೆದು ಮತಾಂತರ ಮಿಷನರಿಗಳು ಹೊರ ಜಗತ್ತಿಗೆ ತಿಳಿಯದಂತೆ ಮುಗ್ಧ ಜನರಿಗೆ ಸಹಾಯನೀಡುವ ನೆಪದಲ್ಲಿ ಮತಾಂತರ ಮಾಡಲು ಸಂಚು ರೂಪಿಸಿಕೊಂಡು ಸುಮಾರು 30ಕ್ಕೂ ಅಧಿಕ ಮಂದಿಯನ್ನು ಸೇರಿಸಿ ಮತಾಂತರ ಮಾಡಲು ಮುನ್ನುಡಿ ಬರೆಯುತ್ತಿದ್ದಂತೆ ಪೋಲೀಸರ ಅತಿಥಿಯಾಗಿದ್ದಾರೆ.
ಮತಾಂತರದ ವಿಷ ಬೀಜ ಮೊಳಕೆಯೊಡೆಯುತ್ತಿರುವುದು ಅತ್ಯಂತ ಆಶ್ಚರ್ಯಕರ ಹಾಗೂ ದುರದೃಷ್ಟಕರ ಸಂಗತಿ. ಹಣ, ಜಮೀನು ಕೊಡಿಸುತ್ತೇವೆ ಎಂಬ ಆಮಿಷವೊಡ್ಡಿ ಬಡವರನ್ನು ಒತ್ತಾಯ ಪೂರ್ವಕವಾಗಿ ಮತಾಂತರ ಮಾಡುತ್ತಿರುವುದು ಕಾನೂನು ಬಾಹಿರ ಚಟುವಟಿಕೆಯಾಗಿದ್ದರೂ ಇಂತಹ ಹೇಯ ಕೃತ್ಯ ಮಾಡುವ ಕಾನೂನು ವಿರೋಧಿ ಕ್ರಿಮಿಗಳಿಗೆ ಸೂಕ್ತ ಶಿಕ್ಷೆಯನ್ನು ನೀಡಬೇಕು ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಸ್ಥಳೀಯರ ಮಾಹಿತಿಯಂತೆ ಸ್ಥಳಕ್ಕೆ ಬೇಟಿ ನೀಡಿದ ಪೋಲೀಸರು ಮತಾಂತರ ಮಾಡುತ್ತಿರುವ ಮಿಷನರಿಗಳ ಏಜೆಂಟುಗಳನ್ನು ವಶಪಡಿಸಿಕೊಂಡು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದ್ದಾರೆ.