ಅಗ್ನಿ ಆಕಸ್ಮಿಕದಿಂದ ಹೊತ್ತಿ ಉರಿದ ಗ್ಯಾರೇಜ್ ವಿಟ್ಲದ ಚಂದಳಿಕೆ ಎಂಬಲ್ಲಿ ನಡೆದ ಘಟನೆ

ವಿಟ್ಲ:  ಆಕಸ್ಮಿಕ ಅಗ್ನಿ ಅವಘಡ ಉಂಟಾಗಿ ಗ್ಯಾರೇಜ್ ಹೊತ್ತಿ ಉರಿದಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ – ಪುತ್ತೂರು ರಸ್ತೆಯಲ್ಲಿರುವ ಚಂದಳಿಕೆ ಎಂಬಲ್ಲಿ ನಡೆದಿದೆ.

ಚಂದಳಿಕೆ ಹರೀಶ್ ಅವರಿಗೆ ಸೇರಿದ ಕಾರು ಗ್ಯಾರೇಜ್ ಗೆ ಬೆಂಕಿ ತಗುಲಿದೆ. ಗ್ಯಾರೇಜ್ ಒಳಗಡೆ 10 ಕ್ಕಿಂತಲೂ ಅಧಿಕ ವಾಹನಗಳಿದ್ದು, ಅವುಗಳನ್ನು ಬದಿಗೆ ಸರಿದ ಸ್ಥಳೀಯರು ತೆರವುಗೊಳಿಸುತ್ತಿದ್ದಾರೆ.

ಪುತ್ತೂರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದ್ದು, ಅವರು ಬರುವಷ್ಟರಲ್ಲಿ ಗ್ಯಾರೇಜ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಗ್ಯಾರೇಜ್ ಒಳಗಡೆ ರಿಪೇರಿಗೆಂದು ಇರಿಸಲಾದ ಕಾರು ಸಂಪೂರ್ಣವಾಗಿ ನಾಶಗೊಂಡಿದೆ. ಕೆಲವು ವಾಹನಗಳ ಪಾರ್ಟ್ ಗಳು ಕೂಡಾ ಬೆಂಕಿಗಾಹುತಿಯಾಗಿದೆ.

ಸುತ್ತಮುತ್ತಲಿನಲ್ಲಿ ಮನೆ, ಅಂಗಡಿಗಳು ಇದ್ದು, ಬೆಂಕಿ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರು ಪಿಕಪ್ ವಾಹನ ಗಳ ಮೂಲಕ ನೀರಿನ ವ್ಯವಸ್ಥೆ ಕಲ್ಪಿಸಿದ್ದಾರೆ. ಬಳಿಕ ಅಗ್ನಿಶಾಮಕ ದಳವರು ಆಗಮಿಸಿದ್ದು, ಬೆಂಕಿ ನಂದಿಸಿದರು. ಅಗ್ನಿಶಾಮಕ ವಾಹನದಲ್ಲಿ ನೀರು ಖಾಲಿಯಾಗಿದ್ದರಿಂದ ಕಾರ್ಯಾಚರಣೆ ಸ್ಥಗಿತಗೊಂಡಿತ್ತು. ಬಳಿಕ ಸ್ಥಳೀಯವಾಗಿ ವಾಹನಕ್ಕೆ ನೀರು ತುಂಬಿಸಿ ಕಾರ್ಯಾಚರಣೆ ಮುಂದುವರಿಸಿದರು. ಇದರಿಂದ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.

Spread the love
  • Related Posts

    ನೀವು SSLC (10ನೇ ತರಗತಿ) ವಿದ್ಯಾರ್ಥಿಗಳಾ? ಹಾಗಾದರೆ ನಿಮಗಿದೆ ಇಲ್ಲೊಂದು ಸುವರ್ಣಾವಕಾಶ!

    ಪರೀಕ್ಷಾ ಸಿದ್ಧತೆ, ಆತ್ಮವಿಶ್ವಾಸ ವೃದ್ಧಿ ಹಾಗೂ ಮುಂದಿನ ಶೈಕ್ಷಣಿಕ ಆಯ್ಕೆಗಳ ಕುರಿತು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಮಾರ್ಗದರ್ಶನ ಬೆಳ್ತಂಗಡಿ: ಎಕ್ಸೆಲ್ ಪಿಯು ಕಾಲೇಜಿನ ವತಿಯಿಂದ 10ನೇ ತರಗತಿಯ ವಿದ್ಯಾರ್ಥಿಗಳು ಹಾಗೂ ಪೋಷಕರಿಗಾಗಿ ‘10 PLUS’ ಒಂದು ದಿನದ ವಿಶೇಷ ಕಾರ್ಯಾಗಾರವನ್ನು ನವೆಂಬರ್…

    Spread the love

    ಶುಭ ಸಮಾರಂಭಗಳಿಗೆ ರುಚಿಕರ ಭೋಜನದ ಸವಿರುಚಿ – ದಿಶಾನ್ ಕ್ಯಾಟರರ್ಸ್

    ಬೆಳ್ತಂಗಡಿ: ಮದುವೆ, ನಿಶ್ಚಿತಾರ್ಥ, ಹುಟ್ಟುಹಬ್ಬ ಸೇರಿದಂತೆ ವಿವಿಧ ಶುಭ ಸಮಾರಂಭಗಳಲ್ಲಿ ಅತಿಥಿಗಳಿಗೆ ರುಚಿಕರ ಹಾಗೂ ಗುಣಮಟ್ಟದ ಭೋಜನ ಒದಗಿಸುವುದು ಪ್ರತಿಯೊಂದು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದೆ. ಈ ನಿಟ್ಟಿನಲ್ಲಿ ದಿಶಾನ್ ಕ್ಯಾಟರರ್ಸ್ (Dishan Caterers) ಉತ್ತಮ ಆಹಾರ ಸೇವೆಯೊಂದಿಗೆ ಗ್ರಾಹಕರಿಗೆ ಆತ್ಮೀಯ ಆತಿಥ್ಯ…

    Spread the love

    You Missed

    ನೀವು SSLC (10ನೇ ತರಗತಿ) ವಿದ್ಯಾರ್ಥಿಗಳಾ? ಹಾಗಾದರೆ ನಿಮಗಿದೆ ಇಲ್ಲೊಂದು ಸುವರ್ಣಾವಕಾಶ!

    • By admin
    • November 24, 2026
    • 5 views
    ನೀವು SSLC (10ನೇ ತರಗತಿ) ವಿದ್ಯಾರ್ಥಿಗಳಾ? ಹಾಗಾದರೆ ನಿಮಗಿದೆ ಇಲ್ಲೊಂದು ಸುವರ್ಣಾವಕಾಶ!

    ಶುಭ ಸಮಾರಂಭಗಳಿಗೆ ರುಚಿಕರ ಭೋಜನದ ಸವಿರುಚಿ – ದಿಶಾನ್ ಕ್ಯಾಟರರ್ಸ್

    • By admin
    • November 21, 2026
    • 9 views
    ಶುಭ ಸಮಾರಂಭಗಳಿಗೆ ರುಚಿಕರ ಭೋಜನದ ಸವಿರುಚಿ –  ದಿಶಾನ್ ಕ್ಯಾಟರರ್ಸ್

    ಎಕ್ಸೆಲ್ ಪಿಯು ಕಾಲೇಜಿನಲ್ಲಿ ಉದ್ಯೋಗಾವಕಾಶ: ಪ್ರಮುಖ ಹುದ್ದೆಗಳಿಗೆ 100ಕ್ಕೂ ಅಧಿಕ ಅರ್ಹ ಅಭ್ಯರ್ಥಿಗಳು ಬೇಕಾಗಿದ್ದಾರೆ

    • By admin
    • November 21, 2026
    • 10 views
    ಎಕ್ಸೆಲ್ ಪಿಯು ಕಾಲೇಜಿನಲ್ಲಿ ಉದ್ಯೋಗಾವಕಾಶ: ಪ್ರಮುಖ ಹುದ್ದೆಗಳಿಗೆ 100ಕ್ಕೂ ಅಧಿಕ ಅರ್ಹ ಅಭ್ಯರ್ಥಿಗಳು ಬೇಕಾಗಿದ್ದಾರೆ

    ಕರ್ನಾಟಕ ಬ್ಯಾಂಕ್ ನೂತನ ಎಂಡಿ, ಸಿಇಓ ಆಗಿ ಉದಯಕುಮಾರ್ ಹೆಬ್ಬಾರ್ ನೇಮಕ

    • By admin
    • November 19, 2026
    • 11 views
    ಕರ್ನಾಟಕ ಬ್ಯಾಂಕ್ ನೂತನ ಎಂಡಿ, ಸಿಇಓ ಆಗಿ ಉದಯಕುಮಾರ್ ಹೆಬ್ಬಾರ್ ನೇಮಕ

    ಎಕ್ಸೆಲ್ ಪಿಯು ಕಾಲೇಜಿನಲ್ಲಿ ಉದ್ಯೋಗಾವಕಾಶ: ಸ್ಟೂಡೆಂಟ್ ವೆಲ್ಫೇರ್ ಆಫೀಸರ್ ಹಾಗೂ ವಾರ್ಡನ್ ಹುದ್ದೆಗಳಿಗೆ ನೇಮಕಾತಿ

    • By admin
    • November 17, 2026
    • 19 views
    ಎಕ್ಸೆಲ್ ಪಿಯು ಕಾಲೇಜಿನಲ್ಲಿ ಉದ್ಯೋಗಾವಕಾಶ: ಸ್ಟೂಡೆಂಟ್ ವೆಲ್ಫೇರ್ ಆಫೀಸರ್ ಹಾಗೂ ವಾರ್ಡನ್ ಹುದ್ದೆಗಳಿಗೆ ನೇಮಕಾತಿ

    ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಮನೋಹರ್ ಬಳಂಜರಿಗೆ ಸನ್ಮಾನ

    • By admin
    • November 16, 2026
    • 12 views
    ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಮನೋಹರ್ ಬಳಂಜರಿಗೆ ಸನ್ಮಾನ