ಅನಧಿಕೃತವಿದ್ದ ದೇವಾಲಯಗಳನ್ನು ಅಧಿಕೃತ ಮಾಡಲಿ: ಡಾ. ಡಿ ವೀರೇಂದ್ರ ಹೆಗ್ಗಡೆ

ಮಂಗಳೂರು : ದೇವಸ್ಥಾನಗಳನ್ನು ನಿರ್ಮಾಣ ಮಾಡುವಾಗ ಅಧಿಕೃತವಾಗಿ ಕಾನೂನು ಪ್ರಕಾರ ಸರಿಯಾದ ಅನುಮತಿಗಳನ್ನು ತೆಗೆದುಕೊಂಡು ನಿರ್ಮಾಣ ಮಾಡುವುದು ಒಳ್ಳೆಯದು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.

ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾನೂನು ಪ್ರಕಾರ ಸರಿಯಾದ ಆಜ್ಞೆಗಳನ್ನು ಪಡೆದುಕೊಂಡು ಅಧಿಕೃತವಾಗಿ ದೇವಾಲಯಗಳನ್ನು ನಿರ್ಮಾಣ ಮಾಡಬೇಕು ಎಂದು ಹೇಳಿದರು.

READ ALSO

ಹಾಗೇನಾದರು ಮಾಡದಿದ್ದರೆ ಖಡಿತವಾಗಿಯೂ ಅಪಾಯವಿದೆ‌. ಏಕೆಂದರೆ ಕಾನೂನಿನ ಅಸ್ತ್ರ ಎಲ್ಲರ ಮೇಲೆ ಹರಿಯುತ್ತದೆ. ಇಂತಹ ಕಾನೂನುಗಳನ್ನು ಸರಕಾರ ಗಮನದಲ್ಲಿಟ್ಟುಕೊಂಡು ಅನಧಿಕೃತವಿದ್ದ ದೇವಾಲಯಗಳನ್ನು ಅಧಿಕೃತ ಮಾಡಲಿ ಎಂದು ಡಾ. ಡಿ ವೀರೇಂದ್ರ ಹೆಗ್ಗಡೆಯವರು ಆಗ್ರಹಿಸಿದರು.

ಮೈಸೂರಿನ ನಂಜನಗೂಡಿನಲ್ಲಿ ದೇವಾಲಯವೊಂದನ್ನು ಕೆಡವಲಾಗಿದೆ. ಆದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನಧಿಕೃತ ದೇವಾಲಯಗಳೇ ಇಲ್ಲ ಎಂದು ಅವರು ಹೇಳಿದರು.