ನವದೆಹಲಿ : ದ್ವಿಚಕ್ರ ವಾಹನ ಸವಾರರಿಗೆ ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಮಹತ್ವದ ಸೂಚನೆಯೊಂದನ್ನು ನೀಡಿದ್ದು, 2021 ರ ಜೂ.1 ರಿಂದ ದೇಶಾದ್ಯಂತ ಭಾರತೀಯ ಗುಣಮಟ್ಟ ಮಾನಕ ಸಂಸ್ಥೆ (BIS) ಹೆಲ್ಮೆಟ್ ಗಳನ್ನೇ ದ್ವಿಚಕ್ರ ವಾಹನ ಸವಾರರು ಬಳಕೆ ಮಾಡಬೇಕು ಎಂದು ಹೇಳಿದೆ.
ಕೇಂದ್ರ ರಸ್ತೆ ಸಾರಿಗೆ ಸಚಿವಾಲಯವು, ಬಿಐಎಸ್ ಪ್ರಮಾಣಿತ ಹೆಲ್ಮೆಟ್ ಗಳನ್ನು ಮಾತ್ರವೇ ಮಾರಾಟ ಮಾಡಬೇಕು ಎಂದು ಆದೇಶ ಹೊರಡಿಸಿದ್ದು, ಜೂನ್ 1 ರಿಂದ ದ್ವಿಚಕ್ರ ವಾಹನ ಸವಾರರು ಬಿಐಎಸ್ ಹೆಲ್ಮೆಟ್ ಗಳನ್ನು ಧರಿಸುವುದು ಕಡ್ಡಾಯ ಎಂದು ಹೇಳಿದೆ