ಮಂಗಳೂರು: ಮಂಗಳೂರು ನಗರದ ಕೋರ್ಟ್ ರಸ್ತೆಯಲ್ಲಿ ವಿವಾದಾತ್ಮಕ ಗೋಡೆ ಬರಹವನ್ನು ಉರ್ದು ಭಾಷೆಯಲ್ಲಿ ಬರೆದಿದ್ದು, ಮೊನ್ನೆಯಷ್ಟೇ ನಗರದಲ್ಲಿ ಉಗ್ರ ಸಂಘಟನೆಯ ಪರವಾಗಿ ಗೋಡೆ ಬರಹ ಬರೆದ ಘಟನೆ ಮರೆಯಾಗುವ ಮುನ್ನವೇ ಮತ್ತೆ ದುಷ್ಕರ್ಮಿಗಳು ವಿವಾದಾತ್ಮಕ ಗೋಡೆ ಬರಹವನ್ನು ಬರೆಯುವ ಮೂಲಕ ಶಾಂತಿ ಕದಡುವ ಪ್ರಯತ್ನ ಮಾಡುತ್ತಿದ್ದಾರೆ.
ಕಿಡಿಗೇಡಿಗಳು ಗೋಡೆಯ ಮೇಲೆ ಪ್ರವಾದಿಗಳಿಗೆ ಕೋಪ ಬಂದರೆ ಒಂದೇ ಶಿಕ್ಷೆ. ತಲೆ ದೇಹದಿಂದ ಬೇರ್ಪಡುವುದು ಎಂಬರ್ಥದಲ್ಲಿ ಉರ್ದು ಭಾಷೆಯಲ್ಲಿ ಬರೆಯಲಾಗಿದೆ.
ನಗರದಲ್ಲಿ ಉಗ್ರ ಸಂಘಟನೆಯ ಪರವಾಗಿ ಗೋಡೆ ಬರಹ ಬರೆದ ಘಟನೆ ಮರೆಯಾಗುವ ಮುನ್ನವೇ ಮತ್ತೆ ದುಷ್ಕರ್ಮಿಗಳು ವಿವಾದಾತ್ಮಕ ಗೋಡೆ ಬರಹ ಬರೆದಿದ್ದಾರೆ.
ಮಂಗಳೂರಿನ ಕೋರ್ಟ್ ರಸ್ತೆಯ ಆವರಣದಲ್ಲಿರುವ ಹಳೆ ಪೊಲೀಸ್ ಲೇ ಔಟ್ ಪೋಸ್ಟ್ ಕಟ್ಟಡದ ಮೇಲೆ ಕಿಡಿಗೇಡಿಗಳು ಈ ಬರಹವನ್ನು ಬರೆದಿದ್ದಾರೆ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಬಂದರು ಪೊಲೀಸ್ ಠಾಣೆಯ ಪೊಲೀಸರು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.