ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಸಾಧಕರಿಗೆ ಗೌರವಾರ್ಪಣೆ ಕಾರ್ಯಕ್ರಮ

ಬೆಳ್ತಂಗಡಿ: ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಸಾಧಕರಿಗೆ ಗೌರವಾರ್ಪಣೆ ಕಾರ್ಯಕ್ರಮ ಬೆಳ್ತಂಗಡಿಯ ಸಂತೋಮ್ ಟವರ್ ಸಭಾಂಗಣದಲ್ಲಿ ನಡೆಯಿತು.

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮೋತ್ಥಾನ ಟ್ರಸ್ಟ್,(ರಿ)ಧರ್ಮಸ್ಥಳ, ರಾಷ್ಟ್ರಮಟ್ಟದ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಯಾಕೂಬ್ ಕೊಯ್ಯೂರು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಪುರಸ್ಕೃತರಾದ ಜಿಲ್ಲಾ ಪತ್ರಕರ್ತ ಸಂಘದ ಅಧ್ಯಕ್ಷರಾದ ಶ್ರೀನಿವಾಸ ನಾಯಕ್ ಇಂದಾಜೆ, ಡಾ.ವೇಣುಗೋಪಾಲ ಶರ್ಮ, ಜಿನ್ನಪ್ಪ ಗೌಡ ಬೆಳಾಲು, ವಿಶೇಷ ಪ್ರಬಂಧಕ್ಕಾಗಿ ಡಾಕ್ಟರೇಟ್ ಗೌರವಕ್ಕೆ ಪಾತ್ರರಾಗಿರುವ ಡಾ.ಭಾಸ್ಕರ ಹೆಗಡೆ, ಕಂಬಳ ಓಟಗಾರರಾದ ಸುರೇಶ್ ಹಕ್ಕೇರಿ, ಕಸ್ತೂರ್ಬಾ ಸಂಜೀವಿನಿ ಸ್ವ-ಸಹಾಯ ಸಂಘ ಬೆಳಾಲು, ವೀರಕೇಸರಿ ಕನ್ಯಾಡಿ ಧರ್ಮಸ್ಥಳ ಇವರನ್ನು ಗೌರವಿಸಲಾಯಿತು.

READ ALSO


ಪತ್ರಕರ್ತ ಸಂಘದ ಅಧ್ಯಕ್ಷರಾದ ಅಶ್ರಫ್ ಆಲಿಕುಂಞಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಮುಖ್ಯಅತಿಥಿಯಾಗಿ ಭಾಗವಹಿಸಿದ್ದ SDM ಕಾಲೇಜು ಪ್ರಾಂಶುಪಾಲರಾದ ಡಾ ಸತೀಶ್ಚಂದ್ರ ಎಸ್ ರವರು ಮಾತನಾಡುತ್ತಾ ಸಮಾಜಕ್ಕೆ ಪತ್ರಿಕಾ ರಂಗದ ಕೊಡುಗೆ ಅನನ್ಯವಾಗಿದ್ದು, ಪತ್ರಕರ್ತರು ನಿತ್ಯ ದೇಶಕಟ್ಟುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಸಂಘದಿಂದ ಸಾಧಕರನ್ನು ಗುರುತಿಸಿ ಗೌರವಿಸುವ ಮೂಲಕ ಸಮಾಜಮುಖಿ ಕಾರ್ಯ ಮಾಡಲಾಗುತ್ತಿದ್ದು, ಮುಂದೆ ಇಂತಹಾ ಇನ್ನಷ್ಟು ಚಟುವಟಿಕೆಗಳು ನಡೆಯಬೇಕಿದೆ. ಇಲ್ಲಿ ಎಲ್ಲಾ ವಿಭಾಗಗಳ ಸಾಧಕರು ಇರುವುದು ಪುಟ್ಟ ಭಾರತೀಯ ಸಂಸ್ಕತಿಯನ್ನು ಕಣ್ತುಂಬಿಕೊಂಡಂತಾಗಿದೆ. ಕಾಲ ಎಷ್ಟೇ ಬದಲಾಗಬಹುದು ಆದರೆ ಮಾಡಿರುವ ಉತ್ತಮ ಕಾರ್ಯಗಳು ಸದಾ ಉತ್ತಮ ಕಾರ್ಯಗಳಾಗಿಯೇ ಉಳಿಯುತ್ತವೆ ಎಂದರು.

ಕಾರ್ಯಕ್ರಮದಲ್ಲಿ ಪತ್ರಕರ್ತ ಸಂಘದ ಉಪಾಧ್ಯಕ್ಷರಾದ ದೀಪಕ್ ಅಠಾವಳೆ, ಕಾರ್ಯದರ್ಶಿ ಮನೋಹರ್ ಬಳಂಜ, ಕೋಶಾಧಿಕಾರಿ ಚೈತ್ರೇಶ್ ಇಳಂತಿಲ, ಪತ್ರಕರ್ತರಾದ ಭುವನೇಶ್ ಗೇರುಕಟ್ಟೆ, RN ಪೂವಣಿ, ಧನಕೀರ್ತಿ ಆರಿಗ, ಅಚುಶ್ರೀ ಬಾಂಗೇರು, ಮಂಜುನಾಥ ರೈ, ದೇವಿಪ್ರಸಾದ್, ಹೃಷಿಕೇಶ್ ಜೈನ್, ಸಂಜೀವ ಎನ್.ಸಿ, ಶಿಬಿ ಧರ್ಮಸ್ಥಳ, ಪುಷ್ಪರಾಜ್ ಶೆಟ್ಟಿ, ಶ್ರೀನಿವಾಸ ತಂತ್ರಿ, ಗುರುಮೂರ್ತಿ, ಪದ್ಮನಾಭ, ಗಣೇಶ್.ಬಿ, ಸುಬ್ರಹ್ಮಣ್ಯ, ಬಿ.ಎಸ್ ಕುಲಾಲ್, ಜಾರಪ್ಪ ಉಪಸ್ಥಿತರಿದ್ದರು.