ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ವೇಣೂರು ಖಂಡಿಗ ಪರಿಸರದ ದಿವಂಗತ ಗುಣಪಾಲ್ ಜೈನ್‌ರವರ ರಬ್ಬರ್ ತೋಟದಲ್ಲಿ ಚಿರತೆಯೊಂದು ಹಸುವೊಂದನ್ನು ಅರ್ಧಂಬರ್ದ ತಿಂದು ಹಾಕಿದ್ದು ಬಳಿಕ ನಾಯಿಗಳ ಬೊಗುಳುವಿಕೆಯಿಂದ ಬಿಟ್ಟು ಹೋಗಿರಬಹುದೆಂದು ಇಲ್ಲಿನ ಸ್ಥಳೀಯ ತಿಳಿಸಿದ್ದಾರೆ.
ಚಿರತೆ ದಾಳಿಯಿಂದಾಗಿ ಸಾವನ್ನಪಿದ ಹಸು ಶ್ರೀ ಕೃಷ್ಣ ರಾವ್ ರವರ ಸೇರಿದ್ದು ಎನ್ನಲಾಗಿದೆ, ಅರವಿಂದ ಶೆಟ್ಟಿಯವರ ತೋಟದ ಪಕ್ಕದಲ್ಲಿ ಸತ್ತು ಬಿದ್ದ ಆಕಳಿನ ಮೃತದೇಹವನ್ನು ಪರಿಶೀಲಿಸಿದಾಗ ಚಿರತೆ ದಾಳಿಗೊಳಗಾಗಿ ಸಾವನ್ನಪ್ಪಿರಬಹುದೆಂದು ಶಂಕೆ ವ್ಯಕ್ತವಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ಚಿರತೆಯ ಹೆಜ್ಜೆ ಗುರುತುಗಳು ರಬ್ಬರ್ ತೋಟದಲ್ಲಿ ಪತ್ತೆಯಾಗಿದೆ.
ದ.ಕ ಜಿಲ್ಲಾ ಪಂಚಾಯತ್ ಸದಸ್ಯ ಧರಣೇಂದ್ರ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ, ಅರಣ್ಯ ಹಾಗು ಪಶು ವೈದ್ಯಾಧಿಕಾರಿ ಯವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಮತ್ತು ಹಸುವಿನ ಮಾಲೀಕರಿಗೆ ನಷ್ಟ ಪರಿಹಾರ ಕೊಡಬೇಕೆಂದು ದೂರವಾಣಿ ಮೂಲಕ ಅಧಿಕಾರಿಗೆ ಮನವಿ ಮಾಡಿದ್ದಾರೆ.