“ರೈತರಿಗೆ ಕಸಿ ಗೇರು ಸಸಿ ವಿತರಣಾ ಅಭಿಯಾನ”ಕಾರ್ಯಕ್ರಮಕ್ಕೆ ಪೇಜಾವರ ಶ್ರೀಗಳಿಂದ ಚಾಲನೆ

ಬ್ರಹ್ಮಾವರ: “ವೃಕ್ಷ ರಕ್ಷಾ “-ವಿಶ್ವ ರಕ್ಷಾ”-2016 ಯೋಜನೆಯನ್ವಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ (ರಿ) ಬ್ರಹ್ಮಾವರ, ಕರ್ನಾಟಕ ರಾಜ್ಯ ಗೋಡಂಬಿ ಉತ್ಪಾದಕರ ಸಂಘ (ರಿ), ಇವರ ಸಹಯೋಗದಲ್ಲಿ ಶ್ರೀ ವಿಜಯಲಕ್ಷ್ಮಿ ಪೌಂಡೇಶನ್(ರಿ) ಮೂಡಬಿದಿರೆ, ಇವರು ಪ್ರಾಯೋಜಿಸಿರುವ “ರೈತರಿಗೆ ಕಸಿ ಗೇರು ಸಸಿ ವಿತರಣಾ ಅಭಿಯಾನ” ಕಾರ್ಯಕ್ರಮವೂ ಬ್ರಹ್ಮಾವರ ನೀಲಾವರ ಗೋಶಾಲೆಯ ಸಭಾಂಗಣದಲ್ಲಿ ನೆರವೇರಿತು.

ಈ ಸಂದರ್ಭದಲ್ಲಿ ಪೇಜಾವರ ಮಠದ ಶ್ರೀ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿಯವರು ಕಾರ್ಯಕ್ರಮವನ್ನು ದೀಪ ಬೆಳಗಿಸುವದರ ಮೂಲಕ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವಚನ ಮಾಡಿದರು.

READ ALSO


ಈ ಸಂದರ್ಭದಲ್ಲಿ ಶ್ರೀಯುತ ಅನಂತ ಕೃಷ್ಣ ರಾವ್ ರವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು,

ಉಡುಪಿ ಜಿಲ್ಲಾ ಹಿರಿಯ ನಿರ್ದೇಶಕರಾದ ಶ್ರೀಯುತ ಗಣೇಶ್ ಬಿ. ಸರ್ ರವರು ಸಭೆಯನ್ನು ಉದ್ದೇಶಿಸಿ ಮಾಹಿತಿ ಮಾರ್ಗದರ್ಶನ ನೀಡಿದರು.

ಈ ಸಂದರ್ಭದಲ್ಲಿ ನವನೀತ ನರ್ಸರಿ ಯವರಾದ ಶ್ರೀಯುತ ಜಯರಾಮ್ ಕಲ್ಕೂರ್ ರವರು ಮತ್ತು ಯೋಜನಾಧಿಕಾರಿ ದಿನೇಶ್ ಸೇರಿಗಾರ್ ಕೃಷಿ ಅಧಿಕಾರಿ ರಾಜೇಂದ್ರ ರವರು. ಉಪಸ್ಥಿತರಿದ್ದರು,ಮತ್ತು ರೈತರಿಗೆ ಸಾಂಕೇತಿಕವಾಗಿ ಗೇರು ಗಿಡ ವಿತರಣೆ ಮಾಡಲಾಯಿತು.